Published on: September 6, 2023

ಜಾಗತಿಕ ಮಟ್ಟದ ಉನ್ನತ ಕೇಂದ್ರೀಯ ಬ್ಯಾಂಕರ್

ಜಾಗತಿಕ ಮಟ್ಟದ ಉನ್ನತ ಕೇಂದ್ರೀಯ ಬ್ಯಾಂಕರ್

ಸುದ್ದಿಯಲ್ಲಿ ಏಕಿದೆ? ವಿಶ್ವದ ಅಗ್ರ ಬ್ಯಾಂಕರ್‌ಗಳ ಪಟ್ಟಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅಮೆರಿಕ ಮೂಲದ ನಿಯತಕಾಲಿಕ ಗ್ಲೋಬಲ್ ಫೈನಾನ್ಸ್ ಅವರನ್ನು ಜಾಗತಿಕ ಮಟ್ಟದ ಉನ್ನತ ಕೇಂದ್ರೀಯ ಬ್ಯಾಂಕರ್ ಎಂದು ಪಟ್ಟಿಮಾಡಿದ್ದು ಎ+ ರೇಟಿಂಗ್‌ ನೀಡಿದೆ.

ಮುಖ್ಯಾಂಶಗಳು

  • ಮೂವರು ಕೇಂದ್ರೀಯ ಬ್ಯಾಂಕರ್‌ಗಳಿಗೆ ಎ+ ರೇಟಿಂಗ್ ನೀಡಲಾಗಿದ್ದು, ಶಕ್ತಿಕಾಂತ ದಾಸ್ ನಂತರದ ಸ್ಥಾನದಲ್ಲಿರುವ ಸ್ವಿಟ್ಜರ್ಲೆಂಡ್‌ನ ಥಾಮಸ್ ಜೆ ಜೋರ್ಡಾನ್ ಮತ್ತು ವಿಯೆಟ್ನಾಂನ ನ್ಗುಯೆನ್ ಥಿ ಹಾಂಗ್ ಕೂಡ ಇದೇ ರೇಟಿಂಗ್‌ ಪಡೆದುಕೊಂಡಿದ್ದಾರೆ.

ಗ್ಲೋಬಲ್ ಫೈನಾನ್ಸ್ ನಿಯತಕಾಲಿಕ ವರದಿ

  • ಈ ನಿಯತಕಾಲಿಕವು 1994ರಿಂದ ಪ್ರತಿ ವರ್ಷವೂ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ ಅನ್ನು ಬಿಡುಗಡೆ ಮಾಡುತ್ತಾ ಬಂದಿದೆ. ವರದಿಯು ಯುರೋಪಿಯನ್ ಯೂನಿಯನ್, ಈಸ್ಟರ್ನ್ ಕೆರಿಬಿಯನ್ ಸೆಂಟ್ರಲ್ ಬ್ಯಾಂಕ್, ಬ್ಯಾಂಕ್ ಆಫ್ ಸೆಂಟ್ರಲ್ ಆಫ್ರಿಕನ್ ಸ್ಟೇಟ್ಸ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ವೆಸ್ಟ್ ಆಫ್ರಿಕನ್ ಸ್ಟೇಟ್ಸ್ ಸೇರಿದಂತೆ 101 ಪ್ರಮುಖ ದೇಶಗಳು, ಪ್ರಾಂತ್ಯಗಳು ಮತ್ತು ಜಿಲ್ಲೆಗಳ ಬ್ಯಾಂಕರ್‌ಗಳನ್ನು ಒಳಗೊಂಡ ವರದಿಯನ್ನು ಬಿಡುಗಡೆ ಮಾಡುತ್ತದೆ.
  • ಅಮೆರಿಕದ ನಿಯತಕಾಲಿಕವು ಪ್ರಪಂಚದಾದ್ಯಂತದ ಇರುವ ಕೇಂದ್ರೀಯ ಬ್ಯಾಂಕರ್‌ಗಳಿಗೆ ‘ಎ’ ನಿಂದ ‘ಎಫ್‌’ವರೆಗೆ ರೇಟಿಂಗ್ ನೀಡಿ ವರದಿ ಸಿದ್ಧಪಡಿಸುತ್ತದೆ. ‘ಎ’ ಗ್ರೇಡ್ ಅನ್ನು ಶ್ರೇಷ್ಠ ಪ್ರದರ್ಶನ ಎಂದು ಪರಿಗಣಿಸಲಾದರೆ, ‘ಎಫ್’ ಅತ್ಯಂತ ಕಳಪೆ ಎಂದು ಪರಿಗಣಿಸಲಾಗುತ್ತದೆ.
  • ಮಾನದಂಡಗಳು :ಹಣದುಬ್ಬರ ನಿಯಂತ್ರಣ, ಆರ್ಥಿಕ ಅಭಿವೃದ್ಧಿ ಗುರಿಗಳು, ಕರೆನ್ಸಿ ಸ್ಥಿರತೆ ಮತ್ತು ಬಡ್ಡಿದರ ನಿರ್ವಹಣೆಯ ಆಧಾರದ ಮೇಲೆ ‘ಎ’ ನಿಂದ ‘ಎಫ್‌’ವರೆಗೆ ರೇಟಿಂಗ್‌ ನೀಡಲಾಗುತ್ತದೆ.