Published on: October 7, 2023

ತೇಜಸ್ ಮಾರ್ಕ್–1ಎ

ತೇಜಸ್ ಮಾರ್ಕ್–1ಎ

ಸುದ್ದಿಯಲ್ಲಿ ಏಕಿದೆ? ಭಾರತೀಯ ವಾಯುಪಡೆಯು 1.15 ಲಕ್ಷ ಕೋಟಿ ವೆಚ್ಚದಲ್ಲಿ 97 ತೇಜಸ್ ಮಾರ್ಕ್–1ಎ ವಿಮಾನಗಳನ್ನು ಖರೀದಿಸಲಿದೆ.

ಮುಖ್ಯಾಂಶಗಳು

  • 2021ರ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರ ಅಧೀನದ ಹಿಂದೂಸ್ತಾನ್ ಏರೊ ನಾಟಿಕ್ಸ್ ಲಿಮಿಟೆಡ್ನಿಂದ 83 ತೇಜಸ್ ಎಂಕೆ–1ಎ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಒಪ್ಪಂದ ಮಾಡಿಕೊಂಡಿತ್ತು.
  • ಇದರೊಂದಿಗೆ ವಾಯುಪಡೆಯು ಹೊಂದಲಿರುವ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ವಿಮಾನಗಳ ಸಂಖ್ಯೆ 180ಕ್ಕೆ ಏರಲಿದೆ. ಪ್ರಸ್ತುತ ವಾಯುಪಡೆಯು 10 ಎಲ್ಸಿಎಚ್ಗಳನ್ನು ಹೊಂದಿದೆ.
  • ‘ಬಹುನಿರೀಕ್ಷಿತ ತೇಜಸ್ ಮಾರ್ಕ್–2 ಮೊದಲ ಯುದ್ಧವಿಮಾನವು 2025ರ ವೇಳೆಗೆ ಬಳಕೆಗೆ ಸಿದ್ಧವಾಗುವ ಸಂಭವವಿದೆ.

ಎಲ್‌ಸಿಎ ತೇಜಸ್

  • ಈ ವಿಮಾನವನ್ನು ಹಲವು ರೀತಿಯ ನಿಖರ ದಾಳಿ ನಡೆಸುವ ಗಾಳಿಯಿಂದ ಗಾಳಿಗೆ ದಾಳಿ ನಡೆಸುವ ಮತ್ತು ಗಾಳಿಯಿಂದ ಭೂಮಿಗೆ ದಾಳಿ ನಡೆಸುವ ಆಯುಧಗಳನ್ನು ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ.
  • ಇದು ಗಾಳಿಯಲ್ಲಿ ಇರುವಾಗಲೇ ಇಂಧನ ಮರುಪೂರಣ ನಡೆಸುವ ಸಾಮರ್ಥ್ಯ ಹೊಂದಿದೆ.
  • ಪೇಲೋಡ್ ಸಾಮರ್ಥ್ಯ: ಗರಿಷ್ಠ 4,000 ಕೆಜಿ
  • ವೇಗ: ವಿಮಾನ ಗರಿಷ್ಠ 1.8 ಮ್ಯಾಕ್ (ಪ್ರತಿ ಗಂಟೆಗೆ 2,200 ಕಿಲೋಮೀಟರ್) ಗರಿಷ್ಠ ವೇಗದಲ್ಲಿ ಸಾಗಬಲ್ಲದು. ಇದರ ಗರಿಷ್ಠ ಟೇಕಾಫ್ ತೂಕ 13,300 ಕೆಜಿ ಆಗಿದೆ.
  • ವಿಮಾನ ಸಾಮಾನ್ಯವಾಗಿ 850 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಯುದ್ಧಕ್ಕಾಗಿ 500 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ.
  • ಇದು ಗರಿಷ್ಠ 50,000 ಅಡಿಗಳ ಎತ್ತರದಲ್ಲಿ ಚಲಿಸಬಲ್ಲದು.