Published on: July 7, 2023

ದಕ್ಷಿಣ ಪಿನಾಕಿನಿ ಜಲವಿವಾದ

ದಕ್ಷಿಣ ಪಿನಾಕಿನಿ ಜಲವಿವಾದ

ಸುದ್ದಿಯಲ್ಲಿ ಏಕಿದೆ? ಕರ್ನಾಟಕ ಹಾಗೂ ತಮಿಳುನಾಡು ನಡುವಿನ ದಕ್ಷಿಣ ಪಿನಾಕಿನಿ (ಪೆನ್ನಾರ್) ನದಿ ನೀರು ಹಂಚಿಕೆ ಹಾಗೂ ಬಳಕೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಿಂದ ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದಾರೆ.

ಮುಖ್ಯಾಂಶಗಳು

  • ತಮಿಳುನಾಡು ಸಲ್ಲಿಸಿದ ಮೂಲ ದಾವೆಗೆ ಸಂಬಂಧಿಸಿದ ವಿಚಾರಣೆಯಿಂದ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ಎಂ.ಎಂ.ಸುಂದರೇಶ್ ಅವರಿದ್ದ ಪೀಠವು ಹೊರಗುಳಿಯಿತು. ಈ ಇಬ್ಬರು ನ್ಯಾಯಾಧೀಶರು ಇದನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ’ ಎಂದು ಪೀಠ ಹೇಳಿತು.
  • ಕಾರಣ: ‘ನ್ಯಾಯಮೂರ್ತಿ ಬೋಪಣ್ಣಅವರು ಕರ್ನಾಟಕದವರು ಹಾಗೂ ನ್ಯಾಯಮೂರ್ತಿ ಸುಂದರೇಶ್ ತಮಿಳುನಾಡಿನವರು.

ಏನಿದು ವಿವಾದ?

  • ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗಳಿಂದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣ ತಗ್ಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ, ಯೋಜನೆಗಳ ಜಾರಿಗೆ ತಡೆ ನೀಡುವಂತೆ ಕೋರಿ ತಮಿಳುನಾಡು ಸುಪ್ರೀಂಕೋರ್ಚ್‌ ಮೊರೆ ಹೋಗಿದೆ.
  • ವ್ಯಾಜ್ಯ ಇತ್ಯರ್ಥಕ್ಕೆ ನ್ಯಾಯಾಧೀಕರಣ ರಚಿಸಬೇಕು ಎಂಬುದು ತಮಿಳುನಾಡಿನ ವಾದ. ಕೇಂದ್ರ ಕೂಡ ನ್ಯಾಯಾಧೀಕರಣ ರಚನೆಗೆ ಒಲವು ತೋರಿದೆ. ದಕ್ಷಿಣ ಪಿನಾಕಿನಿ ಜಲವಿವಾದ ನ್ಯಾಯಮಂಡಳಿ ರಚಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಈ ವರ್ಷ ಮೇ ತಿಂಗಳಲ್ಲಿ ಒಂದು ತಿಂಗಳ ಕಾಲಾವಕಾಶ ನೀಡಿತ್ತು.

ದಕ್ಷಿಣ ಪಿನಾಕಿನಿ ನದಿ

  • ದಕ್ಷಿಣಪೆನ್ನಾರ್, ಪೊನ್ನೈಯಾರ್ ಹಾಗೂ ತಮಿಳಿನಲ್ಲಿ ತೆನ್ ಪೆನ್ನೈ ಎಂದೂ ಕರೆಯಲ್ಪಡುತ್ತದೆ
  • ಉಗಮ: ಚಿಕ್ಕಬಳ್ಳಾಪುರದ ಜಿಲ್ಲೆಯ ನಂದಿಬೆಟ್ಟ
  • ಕರ್ನಾಟಕ ಹಾಗೂ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
  • ಉದ್ದ: 497 ಕಿಮೀ
  • ಕಾವೇರಿಯ ನದಿಯ ನಂತರ ಇದು ತಮಿಳುನಾಡಿನ ಎರಡನೇ ಅತಿ ಉದ್ದದ ನದಿಯಾಗಿದೆ.
  • ಆಣೆಕಟ್ಟುಗಳು : ಹೊಸೂರು ಮತ್ತು ಕೃಷ್ಣಗಿರಿ ಬಳಿ ಈ ನದಿಗೆ ಅಡ್ಡಲಾಗಿ ಕೆಲವರಪಲ್ಲಿ ಮತ್ತು ಕೃಷ್ಣಗಿರಿ ಎಂಬ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಈ ನದಿಯ ಮೇಲೆ ಅತಿ ದೊಡ್ಡ ಅಣೆಕಟ್ಟಾದ, 7.3 Tmcft ಒಟ್ಟು ಸಾಮರ್ಥ್ಯದ ಸಾತನೂರ್ ಅಣೆಕಟ್ಟನ್ನು ತಿರುವಣ್ಣಾಮಲೈ ಬಳಿ ನಿರ್ಮಿಸಲಾಗಿದೆ.
  • ಉಪನದಿ : ಪಂಬಾರ್