Published on: July 7, 2023

‘ಮಂಗಳೂರು ಬೊಂಬೆ’

‘ಮಂಗಳೂರು ಬೊಂಬೆ’

ಸುದ್ದಿಯಲ್ಲಿ ಏಕಿದೆ? ವಿಶ್ವ ಪ್ರಸಿದ್ಧ ರಾಮನಗರ ಬೊಂಬೆ ಮತ್ತು ಕೊಪ್ಪಳದ ಕಿನ್ನಾಳ ಆಟಿಕೆಗಳ ಮಾದರಿಯಲ್ಲಿ ತಯಾರಾಗಿರುವ ‘ಮಂಗಳೂರು ಬೊಂಬೆ’ಗಳು, ಅಚ್ಚುಗಳ ಬಳಕೆಯೊಂದಿಗೆ ತಂತ್ರಜ್ಞಾನ ಬಳಸಿ ಹೊಸ ಸ್ಪರ್ಶ ನೀಡಿ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

ಮುಖ್ಯಾಂಶಗಳು

  • ಪೇಪರ್ನ ವಿಭಿನ್ನ ಉತ್ಪನ್ನಗಳನ್ನು ತಯಾರಿಸಿ ಅವುಗಳಲ್ಲಿ ಬೀಜಗಳನ್ನು ಹಾಕಿಕೊಡುವ ಮೂಲಕ ಗಮನ ಸೆಳೆದಿದ್ದ ಪೇಪರ್ ಸೀಡ್ ವಿಲೇಜ್, ಕೋವಿಡ್–19ರ ನಂತರ ಹೊಸ ಪ್ರಯೋಗದಲ್ಲಿ ತೊಡಗಿಸಿಕೊಂಡಿದ್ದರ ಫಲವಾಗಿ ಬೊಂಬೆಗಳು ಆಕರ್ಷಿತವಾಗಿವೆ.
  • ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ ಹಾಗೂ ಸುರತ್ಕಲ್ನ ಎನ್ಐಟಿಕೆ ಸಹಯೋಗದ ಯೋಜನೆಯಲ್ಲಿ ತಯಾರಾಗಿರುವ ಸುಧಾರಿತ ಬೊಂಬೆಗಳು ವೈವಿಧ್ಯತೆಯಲ್ಲೂ ವಿಶಿಷ್ಟವಾಗಿದ್ದು ದೇಶದ ಸಾಂಸ್ಕೃತಿಕ ವೈಭವವನ್ನು ಬಿಂಬಿಸುತ್ತಿವೆ.
  • ಬೊಂಬೆಗಳ ತಯಾರಿಕೆಯಲ್ಲಿ ಬಳಸುತ್ತಿರುವ ವಸ್ತು : ಕಾಗದದ ಪಲ್ಪ್
  • ಸ್ಥಳ : ಮೂಲ್ಕಿ ಸಮೀಪದ ಪಕ್ಷಿಕೆರೆಯ ‘ಪೇಪರ್ ಸೀಡ್ ವಿಲೇಜ್’
  • ಬೊಂಬೆಗಳ ವಿಶೇಷತೆ: ಗಿಡಗಳ ಬೀಜಗಳನ್ನು ಬೊಂಬೆ ಯೊಳಗಿಟ್ಟು ತಯಾರಿಸಲಾಗುತ್ತದೆ. ಬೀಜ ಇರುವ ಈ ವಸ್ತುಗಳನ್ನು ಬಳಸಿ ಎಸೆದರೆ ಮೊಳಕೆಯೊಡೆದು ಗಿಡಗಳಾಗುತ್ತವೆ.

ಪೇಪರ್ ಸೀಡ್ ವಿಲೇಜ್ನಲ್ಲಿ ತಯಾರಾಗಿರುವ ಬೊಂಬೆಗಳ ಪೈಕಿ ಯಕ್ಷಗಾನದ ಮಾದರಿಗೆ ತುಂಬ ಬೇಡಿಕೆ ಇದೆ.