Published on: April 23, 2024

ದೀರ್ಘಾಯು ಭಾರತ ಯೋಜನೆ

ದೀರ್ಘಾಯು ಭಾರತ ಯೋಜನೆ

ಸುದ್ದಿಯಲ್ಲಿ ಏಕಿದೆ? ಭಾರತೀಯ ವಿಜ್ಞಾನ ಸಂಸ್ಥೆ(IISC)ಯು ‘ದೀರ್ಘಾಯು ಭಾರತ ಉಪಕ್ರಮ’ ಯೋಜನೆಯನ್ನು ಘೋಷಿಸಿದೆ.

ಮುಖ್ಯಾಂಶಗಳು

  • ಈ ಯೋಜನೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ವಿವಿಧ ವಿಭಾಗಗಳು, ಉದ್ಯಮಗಳು, ವೈದ್ಯರು, ದಾನಿಗಳು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳೂ ಇರಲಿದ್ದಾರೆ.
  • ಇದರಡಿ ಬೃಹತ್ ಪ್ರಮಾಣದಲ್ಲಿ ಕ್ಲಿನಿಕಲ್ ಅಧ್ಯಯನ ಕೈಗೊಳ್ಳಲಾಗುತ್ತದೆ.
  • ಮೂಲಭೂತ ಮತ್ತು ಅನ್ವಯಿಕ ಸಂಶೋಧನೆಯ ಮೂಲಕ ವಯಸ್ಸಾಗುವಿಕೆಯನ್ನು ಅರ್ಥೈಸಿಕೊಳ್ಳಲಾಗುವುದು. ವ್ಯಕ್ತಿಯ ಜೀವನದ ಗುಣಮಟ್ಟ ಹೆಚ್ಚಿಸಲು ಪರಿಹಾರಗಳನ್ನು ಅಭಿವೃದ್ಧಿಪಡಿಸಲಾಗುವುದು.
  • ಈ ಯೋಜನೆಗೆ ಪ್ರಶಾಂತ್ ಪ್ರಕಾಶ್ ಸಹ ಸ್ಥಾಪಕತ್ವದ ಏಸೆಲ್ ಇಂಡಿಯಾ ಆರಂಭಿಕ ದೇಣಿಗೆ ನೀಡಿದೆ.

ಉದ್ದೇಶ

ಈ ಯೋಜನೆಯಡಿ ಮಾನವನ ದೀರ್ಘಾವಧಿ ಆರೋಗ್ಯವನ್ನು ವೃದ್ಧಿಸುವುದು ಮತ್ತು ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸವಾಲುಗಳನ್ನು ಬಗೆಹರಿಸುವ ಸಂಬಂಧ ಬೃಹತ್ ಪ್ರಮಾಣದಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗುವುದು. ಈ ಮೂಲಕ ಭಾರತೀಯರ ಆರೋಗ್ಯ ಪೂರ್ಣ ದೀರ್ಘಾಯು ಆಗಿಸುವ ನಿಟ್ಟಿನಲ್ಲಿ ಈ ಯೋಜನೆಯಡಿ ಕಾರ್ಯ ನಿರ್ವಹಿಸಲಾಗುವುದು.

ವಿಶೇಷವಾಗಿ ಜೀವನಶೈಲಿ, ಸಂಸ್ಕೃತಿ, ವಂಶವಾಹಿ ಮತ್ತು ಪರಿಸರಗಳು ಕಾರಣವಾಗುತ್ತವೆ.