Published on: April 23, 2024

ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ

ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ

ಸುದ್ದಿಯಲ್ಲಿ ಏಕಿದೆ? ಭಾರತದಲ್ಲಿ 2026ರ ವೇಳೆಗೆ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆ ಆರಂಭಿಸಲು ಇಂಡಿಗೊ ಕಂಪನಿಯ ಮಾತೃಸಂಸ್ಥೆಯಾದ ಇಂಟರ್ ಗ್ಲೋಬಲ್ ಎಂಟರ್ಪ್ರೈಸಸ್ ಮತ್ತು ಅಮೆರಿಕದ ಆರ್ಚರ್ ಏವಿಯೇಷನ್ ಜಂಟಿಯಾಗಿ ಸಿದ್ಧತೆ ನಡೆಸಿವೆ.

ಮುಖ್ಯಾಂಶಗಳು

  • ಪ್ರಥಮ ಬಾರಿಗೆ ನವದೆಹಲಿಯ ಕನೌಟ್ ಸ್ಥಳದಿಂದ ಹರಿಯಾಣದ ಗುರುಗ್ರಾಮಕ್ಕೆ ಈ ಸೇವೆ ಆರಂಭವಾಗಲಿದೆ. ಏಳು ನಿಮಿಷಗಳಲ್ಲಿ ಪ್ರಯಾಣಿಕರನ್ನು ತಲುಪಿಸಲಾಗುತ್ತದೆ.
  • ನವದೆಹಲಿ ಬಳಿಕ ಮುಂಬೈ ಮತ್ತು ಬೆಂಗಳೂರಿನಲ್ಲಿಯೂ ಈ ಸೇವೆ ವಿಸ್ತರಿಸಲು ಈ ಕಂಪನಿಗಳು ನಿರ್ಧರಿಸಿವೆ.
  • ಏರ್ ಟ್ಯಾಕ್ಸಿಯಲ್ಲಿ ಕನೌಟ್ನಿಂದ ಗುರುಗ್ರಾಮಕ್ಕೆ ತಲುಪಲು ₹2 ಸಾವಿರದಿಂದ ₹3 ಸಾವಿರ ವೆಚ್ಚ ವಾಗಲಿದೆ. ಈ ಎರಡು ಸ್ಥಳಗಳ ನಡುವೆ 27 ಕಿ.ಮೀ. ದೂರವಿದೆ. ರಸ್ತೆ ಮಾರ್ಗದಲ್ಲಿ ಕಾರಿನಲ್ಲಿ ಕ್ರಮಿಸಲು 90 ನಿಮಿಷ ಬೇಕಿದ್ದು, ₹1,500 ವೆಚ್ಚವಾಗಲಿದೆ.
  • ಐದು ಆಸನಗಳ ಸಾಮರ್ಥ್ಯದ 200 ಮಿಡ್ನೈಟ್ ಏರ್ಕ್ರಾಫ್ಟ್ಗಳನ್ನು ಈ ಮಾರ್ಗದಲ್ಲಿ ಕಾರ್ಯಾಚರಣೆಗೆ ಇಳಿಸಲು ನಿರ್ಧರಿಸಲಾಗಿದೆ. ಪೈಲಟ್ ಸೇರಿ ನಾಲ್ವರು ಪ್ರಯಾಣಿಸಲು ಅವಕಾಶವಿರಲಿದೆ.
  • ಹೆಲಿಕಾಪ್ಟರ್‌ ಗಳಂತೆ ಇದ್ದು, ಕಡಿಮೆ ಶಬ್ದ ಮತ್ತು ಸುರಕ್ಷಿತ ಪರ್ಯಾಯ ಸಂಚಾರಿ ಸಾಧನವಾಗಲಿದೆ.