Published on: June 2, 2023

ದೇಶದ ಮೊದಲ ವೈದಿಕ ಥೀಮ್ ಪಾರ್ಕ್‌

ದೇಶದ ಮೊದಲ ವೈದಿಕ ಥೀಮ್ ಪಾರ್ಕ್‌

ಸುದ್ದಿಯಲ್ಲಿ ಏಕಿದೆ? ಈ ವಿಶೇಷ ವೈದಿಕ ಥೀಮ್ ಪಾರ್ಕ್ ಅನ್ನು ನೋಯ್ಡಾದಲ್ಲಿ ಸ್ಥಾಪಿಸಲಾಗುತ್ತಿದೆ. ನಾಲ್ಕು ವೇದಗಳಾದ ಋಗ್ವೇದ, ಅಥರ್ವವೇದ, ಯಜುರ್ವೇದ ಮತ್ತು ಸಾಮ ವೇದಗಳ ಆಯ್ದ ಭಾಗಗಳನ್ನು ಲೇಸರ್‌ ಶೋಗಳು ಹಾಗು ವಾಲ್‌ ಪೇಂಟಿಂಗ್‌ನ ಮೂಲಕ ತಿಳಿಸಿಕೊಡಲಾಗುತ್ತದೆ.

ಮುಖ್ಯಾಂಶಗಳು

  • ಯೋಜನೆಯ ವೆಚ್ಚ : INR 27 ಕೋಟಿ
  • ಈ ವಿಶೇಷ ಯೋಜನೆಯ ಕೆಲಸವು ಜನವರಿ 2021 ರಲ್ಲಿ ಪ್ರಾರಂಭವಾಯಿತು.
  • ಅನೇಕ ರೀತಿಯ ಆಕರ್ಷಣೆಗಳನ್ನು, ಮಣ್ಣಿನ ಪ್ರತಿಮೆಗಳನ್ನು ಅಳವಡಿಸಸಲಾಗುತ್ತಿದೆ.
  • ಈ ಹಿಂದೆ ಭೂಮಿ ಡಂಪ್ಯಾರ್ಡ್ ಆಗಿದ್ದು, ಉದ್ಯಾನವನವನ್ನು ಅಂದಗೊಳಿಸಲು ಮಣ್ಣಿನ ಸಂಕುಚಿತಗೊಳಿಸುವಿಕೆಯನ್ನು ನಡೆಸಲಾಗಿದೆ.
  • ಉದ್ಯಾನದ ಗೋಡೆಯು ವೈದಿಕ ಯುಗದ ಆಯ್ದ ಭಾಗಗಳನ್ನು ಹೊಂದಿದ್ದು, ಇದು ಸಂದರ್ಶರನ್ನು ಬಹುವಾಗಿ ಆಕರ್ಷಿಸುತ್ತದೆ.
  • ಮುಖ್ಯವಾಗಿ ಇಂತಹ ವೈದಿಕ ಪಾರ್ಕ್ ದೇಶದಲ್ಲೇ ಮೊದಲ ಪಾರ್ಕ್ ಆಗಿದೆ. ಲೇಸರ್ ಶೋಗಳು, ಆಹ್ಲಾದಕರವಾದ ಸಸ್ಯಗಳನ್ನು. ಮೂಲಗಳ ಪ್ರಕಾರ, ಇಲ್ಲಿ 50,000 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ.
  • ಕಶ್ಯಪ್, ಭಾರದ್ವಾಜ, ಗೌತಮ, ಅತ್ರಿ, ವಸಿಷ್ಠ, ವಿಶ್ವಾಮಿತ್ರ ಮತ್ತು ಅಗಸ್ತ್ಯ ಸೇರಿದಂತೆ ವೇದ ಯುಗದ ಋಷಿಗಳ ಹೆಸರಿನೊಂದಿಗೆ ಉದ್ಯಾನವನವನ್ನು ಏಳು ವಲಯಗಳಾಗಿ ವಿಂಗಡಿಸಲಾಗಿದೆ.