Published on: June 2, 2023

ಪ್ರಾಜೆಕ್ಟ್ ವೇದ

ಪ್ರಾಜೆಕ್ಟ್ ವೇದ

ಸುದ್ದಿಯಲ್ಲಿ ಏಕಿದೆ? ಭಾರತೀಯ ಸೇನಾಪಡೆಗೆ ಮಹತ್ವದ ಸೇರ್ಪಡೆಯಾಗಲಿರುವ ವೇದ ಎಸ್‌ಎಲ್‌ವಿ ಯ ಯೋಜನೆಯನ್ನು ಡಿಆರ್‌ಡಿಒ ಕೈಗೆತ್ತಿಕೊಂಡಿದ್ದು, ಪರೀಕ್ಷಾ ಪ್ರಯೋಗಗಳು ಶೀಘ್ರವಾಗಿ ಆರಂಭಗೊಳ್ಳುವ ನಿರೀಕ್ಷೆಗಳಿವೆ.

ವೇದ ಎಸ್‌ಎಲ್‌ವಿ

  • ಪ್ರಾಜೆಕ್ಟ್ ವೇದ ಅಥವಾ ವೆಹಿಕಲ್ ಫಾರ್ ಡಿಫೆನ್ಸ್ ಅಪ್ಲಿಕೇಶನ್
    ಇದು ಒಂದು ಭಾರತೀಯ ಸೇನಾಪಡೆಗಳಿಗೆ ಅಗತ್ಯವಿರುವ ನೂತನ ಉಪಗ್ರಹ ಉಡಾವಣಾ ವಾಹನ (ಎಸ್ಎಲ್‌ವಿ) ನಿರ್ಮಾಣದ ಕುರಿತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಕೈಗೊಂಡಿರುವ ಯೋಜನೆಯಾಗಿದೆ.
  • ವೇದ ಎಸ್‌ಎಲ್‌ವಿ ಮೂರು ಹಂತದ ಘನ ಇಂಧನ ರಾಕೆಟ್ ಆಗಿದ್ದು, ಗರಿಷ್ಠ 2 ಸಾವಿರ ಕೆ ಜಿ ತೂಕ ಹೊತ್ತು ಕಕ್ಷೆಗೆ ತಲುಪಿಸಬಲ್ಲುದು.
  • ಇದು 200 ಕಿಲೋಮೀಟರ್‌ಗಳ ಗರಿಷ್ಠ ಎತ್ತರಕ್ಕೆ ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಉದ್ದೇಶ

  • ವೇದ ಎಂಬ ಕೋಡ್ ಹೆಸರು ಹೊಂದಿರುವ ಈ ಎಸ್ಎಲ್‌ವಿಯನ್ನು ವಿವಿಧ ಉದ್ದೇಶಗಳಿಗಾಗಿ ರಕ್ಷಣಾ ಉಪಗ್ರಹಗಳನ್ನು ಕಕ್ಷೆಗೆ ಜೋಡಿಸಲು ಬಳಸಲಾಗುತ್ತದೆ.
  • ಈ ಉಪಗ್ರಹಗಳು ವಿಚಕ್ಷಣೆ, ಮತ್ತು ನ್ಯಾವಿಗೇಶನ್ ಉದ್ದೇಶಗಳಿಗೆ ಬಳಕೆಯಾಗುತ್ತವೆ. ಭಾರತದ ಸ್ವದೇಶೀ ರಕ್ಷಣಾ ಸಾಮರ್ಥ್ಯವನ್ನು ಉತ್ತಮಪಡಿಸುವಲ್ಲಿ ಇದೊಂದು ಮಹತ್ತರ ಹೆಜ್ಜೆಯಾಗಿದೆ. ಆ ಮೂಲಕ ಸೇನೆಗೆ ಹೆಚ್ಚಿನ ಕಾರ್ಯಾಚರಣಾ ಸಾಮರ್ಥ್ಯ ಲಭಿಸುತ್ತದೆ. ವೇದ ಎಸ್ಎಲ್‌ವಿ ಯೋಜನೆ ಭಾರತದ ಭವಿಷ್ಯದ ರಕ್ಷಣಾ ಮತ್ತು ಬಾಹ್ಯಾಕಾಶ ಯೋಜನೆಗಳಿಗೆ ಅವಶ್ಯಕವಾಗಿದೆ. ಆ ಮೂಲಕ ಬಾಹ್ಯಾಕಾಶ ವಲಯದ ಮುಂಚೂಣಿ ರಾಷ್ಟ್ರ ಎಂಬ ಭಾರತದ ಕೀರ್ತಿಗೆ ಪೂರಕವಾಗಿರಲಿದೆ.

ರಾಕೆಟ್ಟಿನ ಮೂರು ಹಂತಗಳು:

  • ವೇದ ಎಸ್ಎಲ್‌ವಿಯ ಮೊದಲ ಹಂತದಲ್ಲಿ ಒಂದು ಘನ ಇಂಧನ ಆಧಾರಿತ ರಾಕೆಟ್ ಮೋಟಾರ್ ಇದ್ದು, ಎಸ್ಎಲ್‌ವಿಯನ್ನು ಉಡಾವಣಾ ವೇದಿಕೆಯಿಂದ ಮೇಲಕ್ಕೆ ಎತ್ತಲು ಅಗತ್ಯವಿರುವ ಆರಂಭಿಕ ಶಕ್ತಿ ಒದಗಿಸುತ್ತದೆ.
  • ರಾಕೆಟ್‌ನ ಎರಡು ಮತ್ತು ಮೂರನೆಯ ಹಂತಗಳು ಡಿಆರ್‌ಡಿಓದ ಈಗಾಗಲೇ ಲಭ್ಯವಿರುವ ಘನ ಇಂಧನ ರಾಕೆಟ್ ಮೋಟಾರ್‌ಗಳ ಆಧಾರಿತವಾಗಿದೆ.
  • ವೇದ ಎಸ್ಎಲ್‌ವಿ ಒಂದು ರೋಡ್ – ಮೊಬೈಲ್ ಉಡಾವಣಾ ವಾಹನವಾಗಿದ್ದು, ಬೇರೆ ಬೇರೆ ಪ್ರದೇಶಗಳಿಂದ ಉಡಾವಣೆಗೊಳಿಸಬಹುದಾಗಿದೆ. ಇದರಿಂದ ಭಾರತೀಯ ಸೇನಾಪಡೆಗಳಿಗೆ ಯಾವಾಗ ಮತ್ತು ಹೇಗೆ ತಮ್ಮ ಉಪಗ್ರಹಗಳನ್ನು ಉಡಾಯಿಸಬೇಕು ಎಂದು ನಿರ್ಧರಿಸಲು ಹೆಚ್ಚಿನ ಅವಕಾಶ ಮಾಡಿಕೊಡುತ್ತದೆ.

ವೇದ ಎಸ್ಎಲ್‌ವಿಯ ಮಹತ್ತರ ಪ್ರಯೋಜನಗಳು:

  • ಹೆಚ್ಚಿನ ಸ್ವಾತಂತ್ರ್ಯ: ವೇದ ಎಸ್ಎಲ್‌ವಿ ಭಾರತೀಯ ಸೇನಾಪಡೆಗಳಿಗೆ ತನ್ನ ಉಪಗ್ರಹಗಳನ್ನು ಉಡಾವಣೆಗೊಳಿಸುವ ಸ್ವಾತಂತ್ರ್ಯ ಕಲ್ಪಿಸಲಿದ್ದು, ಆ ಮೂಲಕ ವಿದೇಶೀ ಅವಲಂಬನೆಯನ್ನು ಕಡಿಮೆಗೊಳಿಸಲಿದೆ.
  • ಹೆಚ್ಚಿನ ಹೊಂದಿಕೊಳ್ಳುವಿಕೆ: ವೇದ ಎಸ್ಎಲ್‌ವಿ ಒಂದು ರೋಡ್ – ಮೊಬೈಲ್ ಉಡಾವಣಾ ವಾಹನವಾಗಿದ್ದು, ವಿವಿಧ ಪ್ರದೇಶಗಳಿಂದ ಇದನ್ನು ಉಡಾವಣೆಗೊಳಿಸಬಹುದಾಗಿದೆ. ಇದು ಭಾರತೀಯ ಸೇನಾಪಡೆಗಳಿಗೆ ಯಾವಾಗ ಮತ್ತು ಎಲ್ಲಿಂದ ತಮ್ಮ ರಕ್ಷಣಾ ಉಪಗ್ರಹಗಳನ್ನು ಉಡಾವಣೆಗೊಳಿಸಬೇಕು ಎಂದು ನಿರ್ಧರಿಸಲು ಅನುವು ಮಾಡಿಕೊಡುತ್ತದೆ.
  • ಬಾಹ್ಯಾಕಾಶ ಯೋಜನೆಗಳಿಗೆ ಉತ್ತೇಜನ: ಪ್ರಾಜೆಕ್ಟ್ ವೇದ ಭಾರತೀಯ ಬಾಹ್ಯಾಕಾಶ ಯೋಜನೆಗಳಿಗೆ ಉತ್ತೇಜನ ನೀಡಿ, ಬಾಹ್ಯಾಕಾಶ ವಲಯದಲ್ಲಿ ಭಾರತವನ್ನು ಪ್ರಮುಖ ರಾಷ್ಟ್ರ ಎನಿಸಿಕೊಳ್ಳುವಂತೆ ಮಾಡಲಿದೆ.

ಅಭಿವೃದ್ಧಿಯಲ್ಲಿ ಡಿಆರ್‌ಡಿಓ ಮುಂದಿನ ಸವಾಲುಗಳು:

  • ವೇದ ಎಸ್ಎಲ್‌ವಿ ಒಂದು ಸಂಕೀರ್ಣವಾದ, ಸವಾಲಿನ ಯೋಜನೆಯಾಗಿದೆ. ಇದಕ್ಕಾಗಿ ಡಿಆರ್‌ಡಿಓ ಹಲವು ನೂತನ ತಂತ್ರಜ್ಞಾನ ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಬೇಕಾಗುತ್ತದೆ. ಇದು ಡಿಆರ್‌ಡಿಓದ ಸಾಮರ್ಥ್ಯಕ್ಕೆ ಒಂದು ಸವಾಲಾಗಿರಲಿದೆ.
  • ವೇದ ಎಸ್ಎಲ್‌ವಿ ಒಂದು ವೆಚ್ಚದಾಯಕ ಯೋಜನೆಯಾಗಿದೆ. ಇದನ್ನು ಪೂರ್ಣಗೊಳಿಸಲು ಡಿಆರ್‌ಡಿಓ ಭಾರತ ಸರ್ಕಾರದಿಂದ ಹಣ ಪಡೆದುಕೊಳ್ಳುವ ಅಗತ್ಯವಿರುತ್ತದೆ.
  • ವೇದ ಎಸ್ಎಲ್‌ವಿ ಯೋಜನೆ ಸಾಕಷ್ಟು ಸಮಯ ಪಡೆದುಕೊಳ್ಳುವ ಯೋಜನೆಯಾಗಿದೆ. ಈ ಉಡಾವಣಾ ವಾಹನವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಿ, ಪರೀಕ್ಷಿಸಲು ಡಿಆರ್‌ಡಿಓಗೆ ಹಲವು ವರ್ಷಗಳ ಅಗತ್ಯವಿದೆ.