Published on: August 1, 2023

‘ನನ್ನ ಮಣ್ಣು ನನ್ನ ದೇಶ’ ಅಭಿಯಾನ

‘ನನ್ನ ಮಣ್ಣು ನನ್ನ ದೇಶ’ ಅಭಿಯಾನ

ಸುದ್ದಿಯಲ್ಲಿ ಏಕಿದೆ? ‘ದೇಶದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ನನ್ನ ಮಣ್ಣು –ನನ್ನ ದೇಶ (‘ಮೇರಿ ಮಾಠಿ ಮೇರಾ ದೇಶ್’) ಅಭಿಯಾನವನ್ನು ನಡೆಸಲಾಗುವುದು’.

ಮುಖ್ಯಾಂಶಗಳು

  • 103ನೇ ಆವೃತ್ತಿಯ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು, ‘ಹುತಾತ್ಮರ ಸ್ಮರಣಾರ್ಥವಾಗಿ ಪಂಚಾಯಿತಿಗಳಲ್ಲಿ ವಿಶೇಷ ಶಾಸನಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
  • ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದೆ.

ಉದ್ದೇಶ

  • ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ವೀರ ಪುರುಷ ಹಾಗೂ ಮಹಿಳೆಯರನ್ನು ಗೌರವಿಸುವ ಹಿನ್ನೆಲೆಯಲ್ಲಿ ‘ನನ್ನ ಮಣ್ಣು ನನ್ನ ದೇಶ’ ಪ್ರಾರಂಭವಾಗುತ್ತಿದೆ. ಸ್ವಾತಂತ್ರ್ಯ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಅಭಿಯಾನ ಆಯೋಜಿಸಲಾಗುತ್ತಿದೆ.

ಏನಿದು ಅಭಿಯಾನ?

  • ಹುತಾತ್ಮ ಯೋಧರ ಸ್ಮರಣಾರ್ಥ ಪಂಚಾಯತ್ಗಳಲ್ಲಿ ವಿಶೇಷ ಶಾಸನಗಳ ಕೆತ್ತನೆ – ಅಭಿಯಾನದಡಿ “ಅಮೃತ ಕಳಸ ಯಾತ್ರೆ”ಯನ್ನು ಆಯೋಜಿಸಲಾಗುವುದು. 7,500 ಕುಂಡಗಳಲ್ಲಿ ದೇಶದ ವಿವಿಧ ಭಾಗಗಳಿಂದ ಮಣ್ಣನ್ನು ಹಾಗೂ ಸಸಿಗಳನ್ನು ದೆಹಲಿಗೆ ತರಲಾಗುವುದು’. ‘ವಿವಿಧ ಭಾಗಗಳಿಂದ ಬಂದ ಮಣ್ಣಿನಲ್ಲಿ ಸಸಿಗಳನ್ನು ನೆಟ್ಟು, ರಾಷ್ಟ್ರೀಯ ಯುದ್ಧಸ್ಮಾರಕದ ಬಳಿ ‘ಅಮೃತ ವಾಟಿಕಾ’ ನಿರ್ಮಿಸಲಾಗುವುದು. ಈ ವನ ‘ಏಕ ಭಾರತ ಶ್ರೇಷ್ಠಭಾರತ’ದ ಸಂಕೇತವಾಗಿ ಹೊರಹೊಮ್ಮಲಿದೆ’.