Published on: August 1, 2023

‘ಫ್ಯಾಟಿ ಲಿವರ್’ ಕಾಯಿಲೆ

‘ಫ್ಯಾಟಿ ಲಿವರ್’ ಕಾಯಿಲೆ

ಸುದ್ದಿಯಲ್ಲಿ ಏಕಿದೆ? ಅಲ್ಕೋ ಹಾಲ್ ಸೇವಿಸದ ಭಾರತೀಯರ ಪೈಕಿ ಶೇ 38ರಷ್ಟು ಜನರಲ್ಲಿ ಫ್ಯಾಟಿ ಲಿವರ್ (ಪಿತ್ತಜನಕಾಂಗದಲ್ಲಿ ಕೊಬ್ಬು ಸೇರಿಕೊಳ್ಳುವುದು) ಕಾಯಿಲೆ ಇದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.

ಮುಖ್ಯಾಂಶಗಳು

  • ಈ ವಿದ್ಯಮಾನ ವಯಸ್ಕರಿಗೆ ಮಾತ್ರ ಸೀಮಿತವಾಗಿಲ್ಲ, ಶೇ 35ರಷ್ಟು ಮಕ್ಕಳಲ್ಲಿಯೂ ಈ ತೊಂದರೆ ಇದೆ ಎಂದೂ ಅಧ್ಯಯನ ಹೇಳಿದೆ.
  • ‘ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಎಕ್ಸಪರಿಮೆಂಟಲ್ ಹೆಪಟಾಲಜಿ’ ಎಂಬ ನಿಯತಕಾಲಿಕದಲ್ಲಿ ಕಳೆದ ವರ್ಷ ಜೂನ್ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.
  • ಈ ಕಾಯಿಲೆಯನ್ನು ‘ನಾನ್ ಅಲ್ಕೋ ಹಾಲಿಕ್ ಫ್ಯಾಟಿ ಲಿವರ್ ಡಿಸೀಸ್’ (ಎನ್ಎಎಫ್ಎಲ್ಡಿ) ಎಂದು ಕರೆಯಲಾಗುತ್ತದೆ.
  • ಯಾವುದೇ ಲಕ್ಷಣಗಳು ಗೋಚರಿಸದ ಕಾರಣ ಆರಂಭಿಕ ಹಂತದಲ್ಲಿ ಈ ಕಾಯಿಲೆ ಪತ್ತೆಯಾಗುವುದಿಲ್ಲ. ಕ್ರಮೇಣ ಉಲ್ಬಣಿಸಿ, ರೋಗಿಗಳಲ್ಲಿ ತೀವ್ರ ತೊಂದರೆಗೆ ಕಾರಣವಾಗುತ್ತದೆ.

 ‘ಎನ್ಎಎಫ್ಎಲ್ಡಿ’ಗೆ ಕಾರಣಗಳು

  • ಪಾಶ್ಚಾತ್ಯ ಆಹಾರಪದ್ಧತಿ ಅನುಕರಣೆ
  • ಅತಿಯಾದ ಫಾಸ್ಟ್ಫುಡ್ಗಳ ಸೇವನೆ
  • ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಕಡಿಮೆ ಮಾಡುವುದು
  • ಅನಾರೋಗ್ಯಕರ ಮತ್ತು ವ್ಯಾಯಾಮ ಇರದ ಜೀವನಶೈಲಿ
  • ಅಂಗಡಿಗಳಲ್ಲಿ ಸುಲಭವಾಗಿ ಸಿಗುವ (ಒವರ್ ದಿ ಕೌಂಟರ್) ಔಷಧಗಳ ಸೇವನೆ

 ಪರಿಹಾರಗಳು

  • ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳವುದು
  • ಬೊಜ್ಜು ಇರುವವರು ತೂಕ ಕಡಿಮೆ ಮಾಡಿಕೊಳ್ಳುವುದು
  • ಜಂಕ್ ಮತ್ತು ಸಕ್ಕರೆ ಅಂಶ ಇರುವ ಆಹಾರಗಳನ್ನು ಮಿತವಾಗಿ ಸೇವಿಸುವುದು
  • ನಿಯಮಿತ ವ್ಯಾಯಾಮ ಮಾಡುವುದು

ಚಿಕಿತ್ಸೆ :ಸದ್ಯ ‘ಫ್ಯಾಟಿ ಲಿವರ್’ ಕಾಯಿಲೆಗೆ ಅನುಮೋದಿತ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಆದರೆ ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿ ಅಳವಡಿಕೆಯಿಂದ ಈ ಕಾಯಿಲೆಯಿಂದ ಹೊರಬರಬಹುದು.