Published on: October 28, 2021

‘ನಾಗರಿಕ ಅಂತರ್ಜಾಲ’

‘ನಾಗರಿಕ ಅಂತರ್ಜಾಲ’

ಸುದ್ಧಿಯಲ್ಲಿ ಏಕಿದೆ? ಆನ್‌ಲೈನ್ ನಡವಳಿಕೆಯನ್ನು ಮರುರೂಪಿಸುವ ದೃಷ್ಟಿಯಿಂದ, ‘ನಾಗರಿಕ ಅಂತರ್ಜಾಲ’ ನೀತಿಯನ್ನು ಜಾರಿಗೊಳಿಸಲು ಚೀನಾ ಮುಂದಾಗಿದೆ. ಸಮಾಜವಾದಿ ಮೌಲ್ಯಗಳನ್ನು ಉತ್ತೇಜಿಸಲು ಅಂತರ್ಜಾಲವನ್ನು ಒಂದು ವೇದಿಕೆಯಾಗಿ ಬಳಸಿಕೊಳ್ಳುವುದು ಚೀನಾದ ಉದ್ದೇಶ ಎನ್ನಲಾಗಿದೆ.

  • ಚೀನಾದಲ್ಲಿ 1 ಶತಕೋಟಿಗೂ ಹೆಚ್ಚು ಅಂತರ್ಜಾಲ ಬಳಕೆದಾರರು ಇದ್ದಾರೆ. ವಿಶ್ವದ ಅತಿದೊಡ್ಡ ಡಿಜಿಟಲ್ ಸಮಾಜ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ
  • ಅಂತರ್ಜಾಲ ಬಳಕೆದಾರರಲ್ಲಿ ಶಿಸ್ತು ಮೂಡಿಸುವುದು ನಾಗರಿಕ ಅಂತರ್ಜಾಲ ನೀತಿಯ ಪ್ರಮುಖ ಉದ್ದೇಶವಾಗಿದ್ದು, ಸಮಾಜವಾದಿ ವ್ಯವಸ್ಥೆಯ ತತ್ವ ಸಿದ್ಧಾಂತಗಳಿಗೆ ಪೂರಕವಾಗಿ ಅಂತರ್ಜಾಲ ಬಳಕೆಗೆ ಪ್ರೇರಣೆ ನೀಡುವುದು ಗುರಿ
  • ನೂತನ ಅಂತರ್ಜಾಲ ನೀತಿಯನ್ನು ಜಾರಿ ಮಾಡಲು ಮುಂದಾಗಿರುವ ಚೀನಾ, ಈ ಮೂಲಕ ಅಂತರ್ಜಾಲ ಬಳಕೆಗೆ ಕಠಿಣ ನಿರ್ಬಂಧಗಳನ್ನು ಹೇರಿರುವ ದೇಶ ಎಂಬ ಹಣೆಪಟ್ಟಿಯನ್ನು ಕಳಚುವ ಪ್ರಯತ್ನ ಮಾಡುತ್ತಿದೆ. ಅಂತರ್ಜಾಲ ಬಳಕೆ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿರುವ ರಾಷ್ಟ್ರಗಳಲ್ಲಿ ಚೀನಾ ಕೂಡ ಒಂದಾಗಿದೆ.