Published on: October 9, 2021

ನೀಲ ಕೋಳಿ

ನೀಲ ಕೋಳಿ

ಸುದ್ಧಿಯಲ್ಲಿ ಏಕಿದೆ? ಬೆಳೆ ಹಾನಿ ಮಾಡುವ ಇಲಿ, ಬಾವಲಿಗಳು ಮತ್ತು ಕಾಗೆಗಳನ್ನು ‘ಕ್ರಿಮಿ ಕೀಟಗಳು‘(ವರ್ಮಿನ್‌) ಎಂದು ಘೋಷಿಸಲಾಗಿದ್ದು, ಪೊಕ್ಕಲಿ ಭತ್ತದ ಮೇಲೆ ದಾಳಿ ಮಾಡಿ, ಬೆಳೆ ನಾಶಮಾಡುವ ಬೂದು ತಲೆಯ ನೀರುಕೋಳಿ ಅಥವಾ ‘ನೀಲ ಕೋಳಿ‘ಯನ್ನೂ ಆ ಪಟ್ಟಿಗೆ ಸೇರಿಸುವಂತೆ ಕೇರಳದ ಪೊಕ್ಕಲಿ ಭತ್ತದ ಕೃಷಿಕರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಬೂದು ತಲೆಯ ನೀರು ಕೋಳಿ

  • ಬೂದು ತಲೆಯ ನೀರು ಕೋಳಿ ಅಥವಾ ನೀಲ ಕೋಳಿಗಳು ಸಾಮಾನ್ಯವಾಗಿ ಜೌಗು ಪ್ರದೇಶಗಳು ಅಥವಾ ಬೇಸಾಯ ಮಾಡದ ಭತ್ತದ ಗದ್ದೆಗಳಲ್ಲಿ ಕಂಡುಬರುತ್ತವೆ.
  • ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಜಾತಿಯ ಪಕ್ಷಿ ಎಂದು ಘೋಷಿಸಲಾಗಿದೆ. ಅರಣ್ಯ ಇಲಾಖೆಯವರು ಮಾತ್ರ ಇದನ್ನು ‘ಕ್ರಿಮಿಕೀಟ‘ ಎಂದು ಘೋಷಿಸಬಹುದು ಎಂದು ತಜ್ಞರು ಹೇಳುತ್ತಾರೆ.

ಪೊಕ್ಕಲಿ ಭತ್ತ

  • ಕೇರಳ ರಾಜ್ಯದ ತ್ರಿಶ್ಯೂರ್, ಎರ್ನಾಕುಲಂ ಮತ್ತು ಅಲಪ್ಪುಳ ಜಿಲ್ಲೆಗಳಲ್ಲಿನ ಪೊಕ್ಕಲಿ ಭತ್ತವನ್ನು ಮಿಶ್ರ ವಿಧಾನದಲ್ಲಿ ಬೆಳೆಯುತ್ತಾರೆ. ಮೊದಲ ಐದು ತಿಂಗಳು ಗದ್ದೆಗಳಲ್ಲಿ ಭತ್ತ ಬೆಳೆದರೆ, ನಂತರದ ಐದು ತಿಂಗಳಲ್ಲಿ ಅದೇ ಗದ್ದೆಯಲ್ಲಿ ಸೀಗಡಿ ಕೃಷಿ ಅಥವಾ ಮೀನಿನ ಮರಿ ಉತ್ಪಾದನೆ ಮಾಡುತ್ತಾರೆ. ಉಳಿದ ಎರಡು ತಿಂಗಳ ಕಾಲ ಗದ್ದೆ ಖಾಲಿ ಇರುತ್ತದೆ.