Published on: November 30, 2021

ಬಾಲನ್ ಡಿ’ಓರ್ ಪ್ರಶಸ್ತಿ

ಬಾಲನ್ ಡಿ’ಓರ್ ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ ?  ಅರ್ಜೆಂಟೀನಾದ ಫುಟ್ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರು ವಿಶ್ವದ ಉತ್ತಮ ಆಟಗಾರ ವಿಭಾಗದಲ್ಲಿ ಪ್ರತಿಷ್ಠಿತ ಬಾಲನ್‌ ಡಿ’ಓರ್‌ ಪ್ರಶಸ್ತಿಯನ್ನು 7ನೇ ಬಾರಿಗೆ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ರಾಬರ್ಟ್‌ ಲೆವಂಡೊಸ್ಕಿ ಮತ್ತು ಜಾರ್ಗಿನ್‌ಹೊ ಅವರನ್ನು ಹಿಂದಿಕ್ಕಿದ್ದಾರೆ.

  • ಜುಲೈ ತಿಂಗಳಲ್ಲಿ ಅರ್ಜೆಂಟೀನಾಗೆ ಮೊದಲ ಬಾರಿಗೆ ಕೋಪಾ ಅಮೆರಿಕ ಟ್ರೋಫಿಯನ್ನು ತಂದುಕೊಟ್ಟ ಬಳಿಕ 7ನೇ ಬಾರಿಗೆ ಮೆಸ್ಸಿ ಅವರು ಡಿ’ಓರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.
  • ಮಹಿಳೆಯರ ವಿಭಾಗದಲ್ಲಿ ಸ್ಪೈನ್‌ನ ಫುಟ್ಬಾಲ್‌ ಆಟಗಾರ್ತಿ ಅಲೆಕ್ಸಿಯಾ ಪುಟೆಲ್ಲಾ ಅವರು ಬಾಲನ್‌ ಡಿ’ಓರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.