Published on: November 30, 2021

ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ಜಂಟಿ ಕಡಲಾಭ್ಯಾಸ

ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ಜಂಟಿ ಕಡಲಾಭ್ಯಾಸ

ಸುದ್ಧಿಯಲ್ಲಿ ಏಕಿದೆ ?  ಹಿಂದೂ ಮಹಾಸಾಗರದಲ್ಲಿ ಭದ್ರತೆಯನ್ನು ಹೆಚ್ಚಿಸಲು ಮತ್ತು ನೌಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನ ನೌಕಾಪಡೆಗಳು ಸಾಗರೋತ್ತರ ತ್ರಿಪಕ್ಷೀಯ ಸಮರಾಭ್ಯಾಸ ನಡೆಸಿವೆ.

  • ಹಿಂದೂ ಮಹಾಸಾಗರದಲ್ಲಿ ರಕ್ಷಣೆಯನ್ನು ಹೆಚ್ಚಿಸಲು, ಪರಸ್ಪರ ಕಾರ್ಯಾಚರಣೆಯ ಸಾಮರ್ಥ್ಯವನ್ನು ಗುರುತಿಸುವ ಸಲುವಾಗಿ ಈ ಅಭ್ಯಾಸ ನಡೆಯಿತು.
  • 30 ವರ್ಷಗಳ ಹಿಂದೆ ಈ ಸಮರಾಭ್ಯಾಸ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಆರಂಭವಾಗಿದ್ದು, 2012ರಿಂದ ಶ್ರೀಲಂಕಾ ಸೇರ್ಪಡೆಯಾಗಿದೆ. ಇದು 15ನೇ ಆವೃತ್ತಿಯ ಸಮರಾಭ್ಯಾಸವಾಗಿದೆ.
  • ಕೊಲಂಬೊ ಸೆಕ್ಯುರಿಟಿ ಕಾನ್​ಕ್ಲೇವ್​ (ಸಿಎಸ್‌ಸಿ) ಅಡಿಯಲ್ಲಿ ಎರಡು ದಿನಗಳ ಸಮರಾಭ್ಯಾಸ ನಡೆದಿದ್ದು, ಕಡಲ ಭದ್ರತೆಗೆ ಸಹಕಾರ ನೀಡುವ ಪ್ರಯತ್ನವಾಗಿದೆ
  • ಭಾರತೀಯ ನೌಕಾಪಡೆಯನ್ನು ಐಎನ್‌ಎಸ್ ಸುಭದ್ರಾ ಗಸ್ತು ಹಡಗು ಮತ್ತು ಪಿ8ಐ ಲಾಂಗ್ ರೇಂಜ್ ಏರ್‌ಕ್ರಾಫ್ಟ್ ಪ್ರತಿನಿಧಿಸಿದರೆ, ಶ್ರೀಲಂಕಾದಿಂದ ಎಸ್‌ಎಲ್‌ಎನ್‌ಎಸ್ ಸಮುದ್ರ (SLNS Samudra), ಎಂಡಿಎನ್​ಎಫ್ ಮೆರಿಟೈಮ್ (MNDF Maritime) ಏರ್‌ಕ್ರಾಫ್ಟ್ ಮತ್ತು ಮಾಲ್ಡೀವ್ಸ್​ನಿಂದ ರಾಷ್ಟ್ರೀಯ ರಕ್ಷಣಾ ಪಡೆಗಳು ಭಾಗವಹಿಸಿವೆ.