Published on: October 22, 2021

ಬೆಂಗಳೂರು ಮಹಿಳೆಯರ ಸುರಕ್ಷತೆ ಹೆಚ್ಚಳಕ್ಕೆ ತಂತ್ರಜ್ಞಾನ ಬಳಕೆ

ಬೆಂಗಳೂರು ಮಹಿಳೆಯರ ಸುರಕ್ಷತೆ ಹೆಚ್ಚಳಕ್ಕೆ ತಂತ್ರಜ್ಞಾನ ಬಳಕೆ

ಸುದ್ಧಿಯಲ್ಲಿ ಏಕಿದೆ? ಬೆಂಗಳೂರು ನಗರದಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸುವ ಸಿಟಿ ಪ್ರಾಜೆಕ್ಟ್ ಅನ್ನು ಹನಿವೆಲ್ ಅಟೋಮೇಷನ್ ಇಂಡಿಯಾ ಸಂಸ್ಥೆ ತನ್ನದಾಗಿಸಿಕೊಂಡಿದೆ. ನಿರ್ಭಯಾ ನಿಧಿಯಡಿ ಈ ಪ್ರಾಜೆಕ್ಟ್ ರೂಪಿಸಲಾಗಿದ್ದು, ಪ್ರಾಜೆಕ್ಟ್ ಮೊತ್ತ 496.57 ಕೋಟಿ ರೂ. ಆಗಿದೆ.

ನಿರ್ಭಯಾ ನಿಧಿ

  • ನಿರ್ಭಯಾ ನಿಧಿ ಕೇಂದ್ರ ಸರ್ಕಾರ ಪ್ರಾಯೋಜಿತ ನಿಧಿಯಾಗಿದೆ.ಮಹಿಳೆಯರ ಸಬಲೀಕರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸುವ ಕಾರ್ಯಕ್ರಮ ರೂಪಿಸುವಲ್ಲಿ ಈ ನಿಧಿ ಪ್ರಧಾನ ಪಾತ್ರ ವಹಿಸಿದೆ.
  • ಈ ಪ್ರಾಜೆಕ್ಟ್ ಅಡಿ ಹನಿವೆಲ್ ಸಂಸ್ಥೆ ನಗರದ 3,000ಕ್ಕೂ ಹೆಚ್ಚು ಸ್ಥಳಗಳಲ್ಲಿ 7,000 ವಿಡಿಯೊ ಕ್ಯಾಮೆರಾಗಳ ಅಳವಡಿಕೆ ಮತ್ತು ಕೇಂದ್ರ ನಿಯಂತ್ರಣ ಕೊಠಡಿ ನಿರ್ಮಾಣ ಜವಾಬ್ದಾರಿ ಹೊಣೆ ಹೊತ್ತುಕೊಳ್ಳಲಿದೆ.
  • ಈ ವಿಡಿಯೊ ಕ್ಯಾಮೆರಾಗಳು ಸುಧಾರಿತ ತಂತ್ರಜ್ಞಾನವನ್ನು ಹೊಂದಿದ್ದು, ಫೇಸ್ ರೆಕಾಗ್ನಿಷನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಹೊರತಾಗಿ ಸದ್ಯ ಬಲಕೆಯಲ್ಲಿರುವ ಸುರಕ್ಷಾ ಆಪ್ ಅನ್ನು ಮೇಲ್ದರ್ಜೆಗೆ ಏರಿಸಲಿದೆ.