Published on: November 5, 2022

ಮಾಹಿತಿ ಡಿಜಿಟಲೀಕರಣ:

ಮಾಹಿತಿ ಡಿಜಿಟಲೀಕರಣ:

ಸುದ್ದಿಯಲ್ಲಿ ಏಕಿದೆ?

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ, ಆ ಮಾಹಿತಿಯನ್ನು ಸಾರ್ವಜನಿಕವಾಗಿ ಮುಕ್ತವಾಗಿಸಲು ಬಯಸಿದೆ. ಸಾವಿರಾರು ಕೋಟಿ ರೂ. ವ್ಯವಹಾರ ನಡೆಯುವ ಕ್ಷೇತ್ರದಲ್ಲಿ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದ್ದು, ಸರ್ಕಾರ ಈಗ ‘ಬೆಸ್ಟ್ ಪ್ರಾಕ್ಟೀಸಸ್’ ಕಲ್ಪನೆಯಲ್ಲಿ ಡಿಜಿಟಲೀಕರಣಕ್ಕೆ ಮೊರೆ ಹೋಗಿದೆ.

ಮುಖ್ಯಾಂಶಗಳು

  • ರಾಜ್ಯದ ಎಲ್ಲ್ಲ ಸಕ್ಕರೆ ಕಾರ್ಖಾನೆ ಸಿಬ್ಬಂದಿಗೆ ತರಬೇತಿ ನೀಡಿ ಮಾಹಿತಿಯನ್ನು ಪ್ರತಿದಿನ ಆನ್ಲೈನ್ನಲ್ಲಿ ದಾಖಲಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
  • ಮುಂದಿನ ಕಬ್ಬು ಸೀಸನ್ ವೇಳೆಯೊಳಗೆ ಅಂದರೆ 2-3 ತಿಂಗಳಲ್ಲಿ ಮೊಬೈಲ್ನಲ್ಲಿ ಬಳಸುವ ಆಪ್ ಅಭಿವೃದ್ಧಿಪಡಿಸಿ ರೈತರಿಗೆ ನೋಂದಣಿ ಮಾಡಿಕೊಂಡು ಮಾಹಿತಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ.
  • ತಕ್ಷಣಕ್ಕೆ ಮೊದಲ ಆದ್ಯತೆಯಾಗಿ ಪ್ರತಿ ದಿನ ಸಕ್ಕ ರೆ ಕಾರ್ಖಾನೆ ಎಷ್ಟು ಕಬ್ಬು ಅರೆಯುತ್ತದೆ? ಸಕ್ಕರೆ ಉತ್ಪಾದನೆ ಎಷ್ಟು ಪ್ರಮಾಣದಲ್ಲಾಯಿತು? ಎಂಬುದನ್ನು ವಿವಿಧ ಪ್ಯಾರಾ ಮೀಟರ್ ಅಡಿ ದಾಖಲೀಕರಣ ಮಾಡಲಾಗುತ್ತದೆ. ಇನ್ನು ಕಬ್ಬು ಬೆಳೆಗಾರರು ಮೊಬೈಲ್ ಆಪ್ನಲ್ಲಿ ನೋಂದಣಿ ಮಾಡಿಕೊಂಡು ಬೆಳೆಯ ವಿವರವನ್ನು ದಾಖಲಿಸುವ ವ್ಯವಸ್ಥೆ ಬರಲಿದೆ.

ಉದ್ದೇಶ

  • ಹೀಗೆ ಮಾಡುವುದರಿಂದ ಕಟಾವಿನ ವೇಳೆ ರೈತರ ಪರದಾಟ ತಪ್ಪಲಿದೆ ಈ ರೀತಿ ಸಾಫ್ಟ್ವೇರ್ ಹಾಗೂ ಅಪ್ಲಿಕೇಶನ್ ಬಳಕೆ ಮಾಡುವುದರಿಂದ ದೊಡ್ಡ ಸಮಸ್ಯೆ ನಿವಾರಣೆಯಾಗಿ ಪಾರದರ್ಶಕತೆ ಬರಲಿದೆ

ಯಾರಿಗೇನು ಲಾಭ?

  • ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಏಕೀಕೃತ ಸ್ವರೂಪ, ಪ್ರಕ್ರಿಯೆ ನಡೆಯುವುದರಿಂದ ಅಗತ್ಯ ಸರ್ಕಾರಿ ವರದಿಗಳನ್ನು ಸಲ್ಲಿಸಲು ಸರಳ ಮತ್ತು ಸುಲಭ.
  • ರೈತರು ಬೆಳೆದ ಕಬ್ಬಿಗೆ ನಿಖರವಾದ ಎಫ್ಆರ್ಪಿ ದರ ದೊರೆಯಲಿದೆ.
  • ವ್ಯವಸ್ಥೆ ಪಾರದರ್ಶಕವಾಗಿರಲಿದೆ.
  • ಸರ್ಕಾರದ ಮೇಲಿನ ಒತ್ತಡ ಕಡಿಮೆಯಾಗಲಿದೆ.
  • ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಕೆಲಸ ಕಾರ್ಯ ಪೇಪರ್ಲೆಸ್ ಆಗಲಿದೆ.
  • ಮ್ಯಾನುವಲ್ ಲೆಕ್ಕಾಚಾರ ಅಥವಾ ಅಪಾರ ಪ್ರಮಾಣದ ನಿರ್ಣಾಯಕ ಹಣಕಾಸಿನ ಮಾಹಿತಿಯ ನಿಖರತೆ ಇರಲಿದೆ

ವಿಶೇಷ ಮೊಬೈಲ್ ಅಪ್ಲಿಕೇಶನ್:

  • ಕಬ್ಬು ಬೆಳೆಗಾರರು ಬೆಳೆ ಮಾಹಿತಿಯನ್ನು ನೇರವಾಗಿ ಸಕ್ಕರೆ ಕಾರ್ಖಾನೆಗಳೊಂದಿಗೆ ನೋಂದಾಯಿಸಲು ಸಾಫ್ಟ್ವೇರ್ ನೆರವಾಗಲಿದೆ. ರೈತರು ತಮ್ಮ ನೋಂದಣಿಯ ಸ್ಥಿತಿ, ಕಬ್ಬು ಕಡಿತದ ಮಾಹಿತಿ ಮತ್ತು ಪಾವತಿ ಮಾಹಿತಿಯನ್ನು ವೀಕ್ಷಿಸುವಂತೆ ಸಿದ್ಧಪಡಿಸಲಾಗಿದೆ. ಅಲ್ಲದೆ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ವಿವಿಧ ರೀತಿಯ ಕಬ್ಬು ಬೆಳೆಯುವ ವರದಿಗಳು , ಕಬ್ಬು ಕತ್ತರಿಸುವ ನಿಖರ ಮಾಹಿತಿ, ಪೂರ್ಣಗೊಂಡ ಮತ್ತು ಬಾಕಿ ಉಳಿದಿರುವ ಸ್ಥಿತಿಗಳ ಬಗ್ಗೆ ಬೇಗ ಮಾಹಿತಿ ದೊರೆಯಲಿದೆ.