Published on: August 8, 2023

ರಾಷ್ಟ್ರೀಯ ಕೈಮಗ್ಗ ದಿನ

ರಾಷ್ಟ್ರೀಯ ಕೈಮಗ್ಗ ದಿನ

ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ.

  • 2023 ರ ಥೀಮ್: “ಸುಸ್ಥಿರ ಫ್ಯಾಷನ್ಗಾಗಿ ಕೈಮಗ್ಗ”. ಈ ವಿಷಯವು ಯಂತ್ರ-ನಿರ್ಮಿತ ಬಟ್ಟೆಗಳಿಗೆ ಪರಿಸರ ಸ್ನೇಹಿ ಮತ್ತು ಸಮರ್ಥನೀಯ ಪರ್ಯಾಯವಾಗಿ ಕೈಮಗ್ಗ ನೇಯ್ಗೆಯ ಮಹತ್ವವನ್ನು ಒತ್ತಿಹೇಳುತ್ತದೆ.

ಉದ್ದೇಶ

  • ಕೈಮಗ್ಗ ಉದ್ಯಮವು ನಮ್ಮ ದೇಶದ ಪರಂಪರೆಯಾಗಿದೆ. ಭಾರತದ ಈ ಶ್ರೀಮಂತ ಪರಂಪರೆಯನ್ನು ಉಳಿಸಲು ಮತ್ತು ಕೈಮಗ್ಗದ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಲು, ಕೈಮಗ್ಗ ಕ್ಷೇತ್ರವು ಇಂದು ತಂತ್ರಜ್ಞಾನದ ಕಾರಣದಿಂದ ಹಾಗೂ ಪಾಶ್ಚಿಮಾತ್ಯ ಉಡುಗೆಗಳ ಪ್ರಭಾವದ ಕಾರಣದಿಂದ ಕುಂಠಿತಗೊಳ್ಳುತ್ತಿದೆ. ಹಾಗಾಗಿ ದೇಶದಲ್ಲಿ ಕೈಮಗ್ಗ ಉದ್ಯಮವನ್ನು ಬಲಪಡಿಸಲು ಮತ್ತು ಕೈಮಗ್ಗದ ಉತ್ಪನ್ನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಭಾರತದಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
  • ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಉತ್ತೇಜಿಸುವುದು. ಹಾಗೂ ನೇಕಾರರ ಸಮುದಾಯವನ್ನು ಗೌರವಿಸಲು ಮತ್ತು ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಗುರುತಿಸಲು ಕೈಮಗ್ಗದ ದಿನವನ್ನು ಆಚರಿಸಲಾಗುತ್ತದೆ.
  • ಪ್ರಯೋಜನ: ಕೈಮಗ್ಗ ಉದ್ಯಮವು ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗನ್ನು ಒದಗಿಸಿಕೊಡುತ್ತದೆ. ಅಲ್ಲದೆ ಇದು ಮಹಿಳಾ ಸಬಲೀಕರಣವನ್ನು ಬಿಂಬಿಸುವ ಕ್ಷೇತ್ರವಾಗಿದೆ.

ದಿನದ ಆಚರಣೆಯ ಹಿಂದಿನ ಇತಿಹಾಸ:

  • 1905, ಆಗಸ್ಟ್ 7 ರಂದು ನಡೆದ ಸ್ವದೇಶಿ ಚಳುವಳಿಯು ಭಾರತದ ಸ್ವಾತಂತ್ರ್ಯ ಹೋರಾಟದ ಅನೇಕ ಚಳುವಳಿಗಳಲ್ಲಿ ಒಂದಾಗಿದೆ. ಕಲ್ಕತ್ತಾ ಟೌನ್ ಹಾಲ್​​​ನಲ್ಲಿ ಪ್ರಾರಂಭವಾದ ಈ ಚಳುವಳಿಯು ಬಂಗಾಳವನ್ನು ವಿಭಜಿಸುವ ಬ್ರಿಟೀಷ್ ಸರ್ಕಾರದ ನಿರ್ಧಾರದ ವಿರುದ್ಧದ ಪ್ರತಿಭಟನೆಯಾಗಿತ್ತು. ಅಲ್ಲದೆ ಮುಖ್ಯವಾಗಿ ಬ್ರಿಟೀಷರ ಹಾಗೂ ವಿದೇಶಿ ಉತ್ಪನ್ನಗಳನ್ನು ನಿಷೇಧಿಸಿ ಸ್ಥಳೀಯ ಕೈಗಾರಿಕೆಗಳನ್ನು ಉತ್ತೇಜಿಸಲು ಮತ್ತು ಜನರಲ್ಲಿ ಸ್ವದೇಶಿ ಉತ್ಪನ್ನಗಳ ಭಾವನೆಗಳನ್ನು ಜಾಗೃತಗೊಳಿಸಲು ಈ ಚಳುವಳಿಯನ್ನು ಪ್ರಾರಂಭಿಸಲಾಯಿತು. ಈ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯ ಕೈಮಗ್ಗ ನೇಕಾರರು ಪ್ರಮುಖ ಪಾತ್ರ ವಹಿಸಿದ್ದರು. ಈ ಒಂದು ಸ್ವದೇಶಿ ಆಂದೋಲನದ ಗೌರವಾರ್ಥವಾಗಿ ಮೊದಲ ಬಾರಿಗೆ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಗಸ್ಟ್ 7, 2015 ರಂದು ಆಚರಿಸಲಾಯಿತು.

ಕೈ ಮಗ್ಗದ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳು:

  • ಸಮಗ್ರ ಕೈಮಗ್ಗ ಕ್ಲಸ್ಟರ್ ಅಭಿವೃದ್ಧಿ ಯೋಜನೆ (CHCDS)
  • ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮ (NHDP)
  • ಕೈಮಗ್ಗ ನೇಕಾರರ ಸಮಗ್ರ ಕಲ್ಯಾಣ ಯೋಜನೆ (HWCWS)
  • ನೂಲು ಸರಬರಾಜು ಯೋಜನೆ (YSS)

ಭಾರತದ ಪ್ರಸಿದ್ಧ ಕೈಮಗ್ಗದ ಸೀರೆಗಳು

  • ಆಂಧ್ರಪ್ರದೇಶದ ಕಲಮಕಾರಿ, ಕರ್ನಾಟಕದ ಮೈಸೂರು ರೇಶ್ಮೆ ಸೀರೆ, ಗುಜರಾತ್​ನ ಬಂಧನಿ, ತಮಿಳುನಾಡಿನ ಕಾಂಜೀವರಂ, ಮಹರಾಷ್ಟ್ರದ ಪೈಥಾನಿ, ಮಧ್ಯಪ್ರೇಶದ ಚಮದೇರಿ, ಬಿಹಾರದ ಭಾಗಲ್ಪುರಿ ರೇಷ್ಮೆ ಇಂತಹ ಕೆಲವು ಕೈಮಗ್ಗದ ಉತ್ಪನ್ನಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ.