Published on: January 17, 2023

ರಾಷ್ಟ್ರೀಯ ಪಕ್ಷಿ ದಿನ

ರಾಷ್ಟ್ರೀಯ ಪಕ್ಷಿ ದಿನ


ಸುದ್ದಿಯಲ್ಲಿ ಏಕಿದೆ? ಪ್ರತಿ ವರ್ಷ ಜನವರಿ 5 ರಂದು ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಣೆ ಮಾಡಲಾಗುತ್ತದೆ.


ಮುಖ್ಯಾಂಶಗಳು

  • ಜಗತ್ತಿನಲ್ಲಿ ಬಹಳಷ್ಟು ವಿವಿಧ ಬಗೆಯ ಜಾತಿಯ ಪಕ್ಷಿಗಳಿವೆ. ಆದರೆ ಇತ್ತೀಚೆಗೆ ಹೆಚ್ಚಾಗುತ್ತಿರುವ ನಗರೀಕರಣದಿಂದಾಗಿ ಅನೇಕ ಅಪರೂಪದ ಪಕ್ಷಿ ಸಂಕುಲಗಳು ಕಣ್ಮೆರೆಯಾಗುತ್ತಿವೆ.
  • ಕೆಲ ಪಕ್ಷಿಗಳು ಈಗಾಗಲೇ ಅಳಿವಂಚಿನಲ್ಲಿವೆ. ಈ ಪಕ್ಷಿಗಳನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆಯಾಗಿದೆ.

ಉದ್ದೇಶ

  • ಅಳಿವಿನಂಚಿನಲ್ಲಿರುವ ಪಕ್ಷಿಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಅನೇಕ ಅಪರೂಪದ ಪಕ್ಷಿಗಳು ಜನರು ಅಕ್ರಮ ಸಾಗಣೆ, ಮಾರಾಟ, ಕಾಯಿಲೆಯಿಂದಾಗಿ ಅಳಿವಿನ ಅಂಚಿಗೆ ಸಾಗುತ್ತಿವೆ. ಇಥಂಹ ಪಕ್ಷಿಗಳ ಉಳಿವಿಗಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ, ರಾಷ್ಟ್ರೀಯ ಪಕ್ಷಿಯ ದಿನದಂದು ಅಮೇರಿಕ ಸೇರೆದಂತೆ ವಿಶ್ವದ ನಾನಾಕಡೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.

ರಾಷ್ಟ್ರೀಯ ಪಕ್ಷಿ ದಿನದ ಇತಿಹಾಸ

  • ರಾಷ್ಟ್ರೀಯ ಪಕ್ಷಿ ದಿನವನ್ನು ಮೊದಲ ಬಾರಿಗೆ 2002 ರಲ್ಲಿ ಅಮೇರಿಕಾದ ಬಾರ್ನ್ ಫ್ರೀ ಯುಎಸ್‌ಎ ಮತ್ತು ಏವಿಯನ್ ವೆಲ್ಪೇರ್ ಒಕ್ಕೂಟದಿಂದ ಆಚರಣೆ ಮಾಡಲಾಯಿತು. ವಾರ್ಷಿಕ ಕ್ರಿಸ್ಮಸ್ ಡೇ ಎಣಿಕೆಯು ಕೊನೆಯಾಗುವ ದಿನವಾದ ಜನವರಿ 5 ರಂದು ನ್ಯಾಷನಲ್ ಬರ್ಡ್ ಡೇ ಅನ್ನು ಆಚರಣೆ ಮಾಡಲಾಗುತ್ತದೆ. ಕ್ರಿಸ್ಮಸ್‌ ಬರ್ಡ್‌ ಕೌಂಟ್‌ ಸುಮಾರು ದಶಕಗಳಿಂದಲೂ ಹೆಚ್ಚು ಕಾಲ ನಡೆಯುತ್ತಿದೆ. ಪ್ರತಿ ವರ್ಷ ಇದನ್ನು ಮೂರು ವಾರಗಳ ಕಾಲ ನಡೆಸಲಾಗುತ್ತದೆ.

ನಿಮಗಿದು ತಿಳಿದಿರಲಿ

  • ಅಮೆರಿಕಾದಲ್ಲಿ ಪಕ್ಷಿಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಕಂಡುಹಿಡಿಯಲು ಮತ್ತು ಆ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಗುರಿಯನ್ನು ಈ ದಿನ ಹೊಂದಿದೆ. ಈ ದಿನದಂದು ಸ್ಥಳೀಯ, ಕಾಡಿನಲ್ಲಿರುವ ಹಾಗೂ ಬಂಧನದಲ್ಲಿರುವ ಪಕ್ಷಿಗಳನ್ನು ಎಣಿಕೆ ಮಾಡಲಾಗುತ್ತದೆ.
  • ವಿಶ್ವದ 9,800 ಪಕ್ಷಿ ಪ್ರಭೇದಗಳ ಪೈಕಿ ಶೇಕಡ. 12 ರಷ್ಟು ಪಕ್ಷಿ ಪ್ರಭೇದಗಳು ಅಳಿವಿನಂಚಿನಲ್ಲಿವೆ ಎಂದು ಹೇಳಲಾಗಿದೆ. ವಿಶ್ವದ 330 ಗಿಣಿ ಜಾತಿಯ ಪಕ್ಷಿಗಳು ಅಳಿವು ಕೂಡ ಮೂರನೇ ಒಂದು ಭಾಗದಷ್ಟಿವೆ.