Published on: March 27, 2023

ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯ

ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯ


ಸುದ್ದಿಯಲ್ಲಿ ಏಕಿದೆ? ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯದ ಕರ್ನಾಟಕ ಅಧ್ಯಯನ ಕೇಂದ್ರವನ್ನು  ಶಿವಮೊಗ್ಗ ನಗರದಲ್ಲಿ ಸ್ಥಾಪಿಸಲು ಕರ್ನಾಟಕ ಸರಕಾರ ಹಾಗೂ ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿವೆ.


ಮುಖ್ಯಾಂಶಗಳು

  • ಈ ಮೂಲಕ ದಕ್ಷಿಣ ಭಾರತದಲ್ಲಿ, ರಕ್ಷಾ ವಿಶ್ವ ವಿದ್ಯಾಲಯದ ಅಧ್ಯಯನ ಕೇಂದ್ರ ಹೊಂದಿದ ಮೂರನೇ ರಾಜ್ಯ ಕರ್ನಾಟಕವಾಗಿದೆ.
  • ನಾಡಿನ ಯುವ ಜನತೆಗೆ ಭದ್ರತೆ ಹಾಗೂ ಪೊಲೀಸ್ ಸೇವೆಗಳ ಕ್ಷೇತ್ರದಲ್ಲಿ, ಅತ್ಯಾಧುನಿಕ ತರಭೇತಿ, ಶಿಕ್ಷಣ, ಸಂಶೋಧನೆ ಇತ್ಯಾದಿ ಚಟುವಟಿಕೆ ಹಮ್ಮಿಕೊಳ್ಳಲು ಹಾಗೂ ಈ ಕ್ಷೇತ್ರದಲ್ಲಿ ಅಗತ್ಯವಾಗಿ ಬೇಕಾಗಿದ್ದ “ಮಾನವ ಸಂಪನ್ಮೂಲ” ವನ್ನು ಸೃಜಿಸಲು ಈ ವಿಶ್ವವಿದ್ಯಾಲಯ ಮಹತ್ವದ ಕಾಣಿಕೆ ನೀಡಲಿದೆ.
  • ಪ್ರಸ್ತುತ, ಕೇಂದ್ರೀಯ ವಿದ್ಯಾಲಯ ದಲ್ಲಿರುವ ಸುಸಜ್ಜಿತ ಕಟ್ಟಡಗಳಲ್ಲಿ ರಕ್ಷಾ ವಿಶ್ವ ವಿದ್ಯಾಲಯದ ಪೀಠ ಕಾರ್ಯ ನಿರ್ವಹಿಸಲಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ, ಕಾರ್ಯಾರಂಭ ಮಾಡಲಿದೆ.
  • ರಾಜ್ಯದ ರಕ್ಷಾ ವಿಶ್ವ ವಿದ್ಯಾಲಯದ ಕೇಂದ್ರವು, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಶಿಕ್ಷಣ, ಅಧ್ಯಯನ ಕೇಂದ್ರವಾಗಿ ಕಾರ್ಯವನ್ನು ನಿರ್ವಹಿಸುವಲ್ಲದೆ ಪೊಲೀಸ್ ಇಲಾಖೆಗೆ  ವಿವಿಧ ಹುದ್ದೆಗಳಿಗೆ ಸೆರಾ ಬಯಸುವ ಅಭ್ಯರ್ಥಿಗಳಿಗೆ, ತರಭೇತಿ ಹಾಗೂ ಕೋಚಿಂಗ್ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸಲಿದೆ.
  • ಶಿವಮೊಗ್ಗದ ರಕ್ಷಾ ವಿಶ್ವ ವಿದ್ಯಾಲಯದ ಕೇದ್ರವು, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತಹ ವಿವಿಧ ವಿಷಯಗಳ ಶಿಕ್ಷಣ ಪ್ರದಾನಕ್ಕೆ ಸಂಬಂಧಿಸಿದಂತೆ, ವಿಶ್ವ ಮಟ್ಟದ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ.