Published on: November 8, 2022

ವಂದೇ ಭಾರತ್ ಎಕ್ಸ್ ಪ್ರೆಸ್

ವಂದೇ ಭಾರತ್ ಎಕ್ಸ್ ಪ್ರೆಸ್

ಸುದ್ದಿಯಲ್ಲಿ ಏಕಿದೆ? 

ಚೆನ್ನೈ – ಬೆಂಗಳೂರು-ಮೈಸೂರು ನಡುವಿನ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರ ರೈಲು ಚೆನ್ನೈನ ಎಂ.ಜಿ ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಪ್ರಾಯೋಗಿಕ ಸಂಚಾರ ಆರಂಭಿಸಿತು. ನವೆಂಬರ್ 11ಕ್ಕೆ ಪ್ರಧಾನಿಯವರು  ಚಾಲನೆ ನೀಡಲಿದ್ದಾರೆ

ಮುಖ್ಯಾಂಶಗಳು

  • ಇದು ದಕ್ಷಿಣ ಭಾರತದಲ್ಲಿ ಮೊದಲ ಸ್ವದೇಶಿ ನಿರ್ಮಿತ ಅತಿ ವೇಗದ ರೈಲು ಆಗಿದ್ದು ದೇಶದಲ್ಲಿ 5ನೆಯದ್ದಾಗಿದೆ.
  • ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು,ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಹೆಚ್ಚು ಒತ್ತು ನೀಡುವ ಕೇಂದ್ರ ಸರ್ಕಾರದ ಒಂದು ಭಾಗವಾಗಿದೆ.
  • ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸಂದರ್ಭದಲ್ಲಿ 75 ವಾರಗಳ ಕಾಲ ದೇಶದ 75 ಭಾಗಗಳಿಗೆ 75 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಸಂಪರ್ಕಿಸುವ ಉದ್ದೇಶವನ್ನು ಹೊಂದಲಾಗಿದೆ..

ವಂದೇ ಭಾರತ್ ವಿಶೇಷತೆಯೇನು?: 

  • ವೇಗ, ಸುರಕ್ಷತೆ ಮತ್ತು ಸೇವೆ ಈ ರೈಲಿನ ಪ್ರಮುಖ ವಿಶೇಷತೆಯಾಗಿದೆ.
  • ಚೆನ್ನೈಯ ಇಂಟಗ್ರಲ್ ಕೋಚ್ ಫ್ಯಾಕ್ಟರಿ, ರೈಲ್ವೆ ಉತ್ಪಾದನಾ ಘಟಕ ಕೇವಲ 18 ತಿಂಗಳಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಉತ್ಪಾದಿಸಿವೆ. ಈ ರೈಲು ಚೆನ್ನೈನ ಪೆರಂಬೂರಿನಲ್ಲಿರುವ ಐಸಿಎಫ್‌ನಲ್ಲಿ(ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ) ಸಿದ್ಧವಾಗಿದೆ.
  • ಇಂಧನ ದಕ್ಷತೆ , ದೇಶದ ಮೊದಲ ಸ್ವಯಂ ಚಾಲಿತ ರೈಲು ಆಗಿದೆ. (ಪ್ರತಿಯೊಂದು ಬೋಗಿಯೂ ಸ್ವಯಂ ಚಾಲಿತವಾಗಿದೆ. ಅಂದರೆ ಪ್ರತಿಯೊಂದು ಬೋಗಿಯಲ್ಲಿ ಮೋಟಾರು ಇದೆ) ಮತ್ತು ಸಂಪೂರ್ಣ ಹವಾನಿಯಂತ್ರಿತವಾಗಿರುತ್ತದೆ. ಈ ರೈಲುಗಳು ಮೆಟ್ರೋ ರೈಲುಗಳಂತೆ ವಿದ್ಯುತ್ ಚಾಲಿತ ಹಳಿಗಳ ಮೇಲೆ  ಚಲಿಸುತ್ತವೆ
  • ವಂದೇ ಭಾರತ್ ಎಕ್ಸ್ ಪ್ರೆಸ್ ಗರಿಷ್ಠ 160 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದ್ದು ಶತಾಬ್ರಿ ರೈಲಿನ ಮಾದರಿಯಲ್ಲಿರಲಿದ್ದು ಪ್ರಯಾಣಿಕರಿಗೆ ಉತ್ತಮ ಪ್ರಯಾಣ ಅನುಭವ ನೀಡುತ್ತದೆ. ವೇಗ ಮತ್ತು ಅನುಕೂಲ ನಿಟ್ಟಿನಲ್ಲಿ ಭಾರತೀಯ ರೈಲ್ವೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ವಂದೆ ಭಾರತ ಎಕ್ಸ್ಪ್ರೆಸ್ ರೈಲುಗಳು

  • ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ (2019): ದೆಹಲಿ-ಕಾನ್ಪುರ-ಅಲಹಾಬಾದ್-ವಾರಣಾಸಿ ಮಾರ್ಗವಾಗಿ ಸಂಚಾರಕ್ಕೆ ಮೊದಲ ಬಾರಿಗೆ ಚಾಲನೆ ನೀಡಲಾಗಿತ್ತು.
  • ಎರಡನೆಯ ವಂದೇ ಭಾರತ್ ಎಕ್ಸ್ ಪ್ರೆಸ್ (2019): ದೆಹಲಿ-ಮಾತಾ ವೈಷ್ಣೋದೇವಿ ಕತ್ರಾ ನಡುವೆ ಸಂಚರಿಸುತ್ತದೆ.
  • ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ (ಸೆಪ್ಟೆಂಬರ್ 2022): ಹೈದರಾಬಾದ್ ಅನ್ನು ಸಂಪರ್ಕಿಸುತ್ತದೆ ಎಂಬ ಘೋಷಣೆಯ ಹೊರತಾಗಿಯೂ ಭಾರತೀಯ ರೈಲ್ವೇ ಈ ರೈಲನ್ನು ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಓಡಿಸುತ್ತದೆ.
  • ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್:(ಅಕ್ಟೋಬರ್ 2022):ದೆಹಲಿ ಮತ್ತು ಹಿಮಾಚಲ ಪ್ರದೇಶದ ನಡುವೆ ಸಂಚಾರ ನಡುವೆ ಸಂಚರಿಸುತ್ತದೆ