Published on: August 13, 2021

ವಿಶ್ವ ಆನೆಗಳ ದಿನಾಚರಣೆ

ವಿಶ್ವ ಆನೆಗಳ ದಿನಾಚರಣೆ

ಸುದ್ಧಿಯಲ್ಲಿ ಏಕಿದೆ?  ಗಜರಾಜ ಎಂದಾಗ ಜನರಿಗೆ ಸಾಮಾನ್ಯವಾಗಿ ಜನರಿಗೆ ಭಯವು ಇದೆ ಪ್ರೀತಿಯು ಇದೆ. ಅಂತಹ ಗಜರಾಜನ ದಿನವನ್ನು ಜಗತ್ತಿನಾದ್ಯಂತ ಆಚರಣೆ ಮಾಡಲಾಗುತ್ತದೆ. ಇಡೀ ವಿಶ್ವದಾದ್ಯಂತ ಪ್ರತಿವರ್ಷ ಆಗಸ್ಟ್ 12ರಂದು ಆನೆಗಳ ದಿನವನ್ನಾಗಿ ಆಚರಿಸಲಾಗುತ್ತದೆ.

  • ಈ ವಿಶ್ವ ಆನೆಗಳ ದಿನಾಚರಣೆ ಮೊದಲು ಪ್ರಾರಂಭವಾಗಿದ್ದು 2012ರ ಆಗಸ್ಟ್ 12ರಂದು. ಏಷ್ಯನ್ ಮತ್ತು ಆಫ್ರಿಕನ್ ಆನೆಗಳಿಗೆ ಉಂಟಾಗಿರುವ ಸಂಕಷ್ಟವನ್ನು
  •  ಎತ್ತಿ ತೋರಿಸಲು, ಅದರ ಬಗ್ಗೆ ಅರಿವು ಮೂಡಿಸಲು ಆನೆಗಳ ದಿನಾಚರಣೆ ಪ್ರಾರಂಭಿಸಲಾಯಿತು.

ಇತಿಹಾಸವೇನು?

  • ಕೆನಡಿಯನ್ ಸಿನಿಮಾ ಮೇಕರ್ ಪ್ಯಾಟ್ರಿಕಾ ಸಿಮ್ ಮತ್ತು ಥೈಲ್ಯಾಂಡ್ ಮೂಲದ ಆನೆಗಳ ಮರು ಪರಿಚಯ ಪ್ರತಿಷ್ಠಾನ ಜತೆಗೂಡಿ ಆನೆಗಳ ದಿನ ಆಚರಣೆಗೆ ಮುಂದಡಿ ಇಟ್ಟರು. ಅದು ಕೇವಲ ದಿನವಾಗಿರಲಿಲ್ಲ..ಅದೊಂದು ಚಳವಳಿಯಾಗಿ ಬದಲಾಗಿತ್ತು.
  • ವಿಶ್ವ ಆನೆಗಳ ದಿನ ಪ್ಯಾಟ್ರಿಕಾ ಸಿಮ್ ನೇತೃತ್ವದಲ್ಲೇ ಶುರುವಾಯಿತು. ಆಕೆ ಸ್ಥಾಪಿಸಿದ ವಿಶ್ವ ಆನೆಗಳ ಸಮಾಜ ಈ ವಿಶ್ವ ಆನೆಗಳ ದಿನವನ್ನು ನಿರ್ವಹಣೆ ಮಾಡಿತ್ತು. ಈ ಸಂಸ್ಥೆ ಹಲವು ವರ್ಷಗಳಿಂದಲೂ ಆನೆಗಳ ಸುರಕ್ಷತೆ, ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೇ ಮಾಡಿಕೊಂಡು ಬಂದಿದೆ.