Published on: November 18, 2021

ಶತಮಾನದ ಸುದೀರ್ಘ ಚಂದ್ರಗ್ರಹಣ

ಶತಮಾನದ ಸುದೀರ್ಘ ಚಂದ್ರಗ್ರಹಣ

ಸುದ್ಧಿಯಲ್ಲಿ ಏಕಿದೆ ?   ನವೆಂಬರ್ 19 ರಂದು ಚಂದ್ರಗ್ರಹಣವಿದ್ದು ಈ ಚಂದ್ರಗ್ರಹಣ ಈ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದೆ.

  • ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋಗಿ ಚಂದ್ರನ ಮೇಲ್ಮೈಯಲ್ಲಿ ನೆರಳು ರೂಪಿತವಾಗುತ್ತದೆ. ಆಗ ಭೂಮಿಯು 97 ಪ್ರತಿಶತದಷ್ಟು ಪೂರ್ಣ ಚಂದ್ರನನ್ನು ಸೂರ್ಯನ ಕಿರಣಗಳಿಂದ ಮರೆಮಾಡುತ್ತದೆ. ಇದು ಮೊದಲ ಬಾರಿಗೆ ಸಂಭವಿಸಲಿದೆ.

ಯಾವ ಖಂಡಗಳಲ್ಲಿ  ಗ್ರಹಣ ಗೋಚರಿಸುತ್ತದೆ ?

  • ಭಾಗಶಃ ಚಂದ್ರಗ್ರಹಣವು ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ ಮತ್ತು ಪೆಸಿಫಿಕ್ ಪ್ರದೇಶದಾದ್ಯಂತ ಗೋಚರಿಸುತ್ತದೆ. ಭಾರತದಲ್ಲಿ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಒಂದು ಸಣ್ಣ ಭಾಗವು ಭಾಗಶಃ ಗ್ರಹಣವನ್ನು ವೀಕ್ಷಿಸುತ್ತದೆ. ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಗ್ರಹಣದ ಅಂತ್ಯದ ಭಾಗ ಗೋಚರಿಸುತ್ತದೆ.

ಫ್ರಾಸ್ಟ್ ಮೂನ್

  • ನವೆಂಬರ್ 19 ರಂದು ಆಚರಿಸಲಾಗುವ ಹುಣ್ಣಿಮೆಯನ್ನು ಫ್ರಾಸ್ಟ್ ಮೂನ್ ಅಥವಾ ಬೀವರ್ ಮೂನ್ ಎಂದೂ ಕರೆಯಲಾಗುತ್ತದೆ. ನವೆಂಬರ್‌ನಲ್ಲಿ ಹುಣ್ಣಿಮೆಗಳಿಗೆ ಹೀಗೆ ಹೆಸರಿಸಲಾಗಿದೆ, ಏಕೆಂದರೆ ಇದು ಮೊದಲ ಹಿಮಪಾತ ಮತ್ತು ಹಿಮದ ಸಮಯವಾಗಿದೆ, ಹಾಗೆಯೇ ಬೀವರ್‌ಗಳು ತಮ್ಮನೆಲೆಗಳು ಅಥವಾ ಅಣೆಕಟ್ಟುಗಳನ್ನು ನಿರ್ಮಿಸಲು ಪ್ರಾರಂಭಿಸುತ್ತವೆ.