Published on: March 18, 2023

ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ)

ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ)

ಸುದ್ದಿಯಲ್ಲಿ ಏಕಿದೆ? ಶಾಂಘೈ ಸಹಕಾರ ಸಂಘಟನೆ (ಎಸ್.ಸಿ.ಒ) ಯುವ ಮಂಡಳಿಯ 16 ನೇ ಸಭೆ ಹೊಸದಿಲ್ಲಿಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯಿತು.

 ಮುಖ್ಯಾಂಶಗಳು

  • ಸಭೆಯ ಅಧ್ಯಕ್ಷತೆಯನ್ನು ಭಾರತ ಸರ್ಕಾರದ ಯುವಜನ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀ ನಿತೇಶ್ ಕುಮಾರ್ ಮಿಶ್ರಾ ವಹಿಸಿದ್ದರು.
  • ಹೊಸದಿಲ್ಲಿಯಲ್ಲಿ  ಶಿಷ್ಟಾಚಾರಕ್ಕೆ ಸಂಬಂಧಿಸಿ ರಷ್ಯನ್ ಮತ್ತು ಚೀನೀ ಭಾಷೆಗಳಲ್ಲಿ ಎಂಟು ಪ್ರತಿಗಳಿಗೆ ಅಂಕಿತ ಹಾಕಲಾಯಿತು.

ವಿಷಯ: “ಪರಿಣಾಮಕಾರಿ ಸಮುದಾಯ ಅಭಿವೃದ್ಧಿ ಚಟುವಟಿಕೆಗಳು”

ಪ್ರವಾಸೋದ್ಯಮ ಸಚಿವರ ಸಭೆ:

  • ಶಾಂಘೈ ಸಹಕಾರ ಸಂಘಟನೆಯ (ಎಸ್. ಸಿ.ಒ) ಪ್ರವಾಸೋದ್ಯಮ ಸಚಿವರ ಸಭೆಯನ್ನು (ಟಿಎಂಎಂ) ಕಾಶಿಯಲ್ಲಿ (ವಾರಣಾಸಿ) ಆಯೋಜಿಸಿತ್ತು.
  • ಎಸ್.ಸಿ.ಒ.ದ ಎಂಟು ಸದಸ್ಯ ರಾಷ್ಟ್ರಗಳು ವಿಶ್ವ ಜನಸಂಖ್ಯೆಯ ಸುಮಾರು 42% ಮತ್ತು ಜಾಗತಿಕ ಜಿಡಿಪಿಯ 25% ನ್ನು ಪ್ರತಿನಿಧಿಸುತ್ತವೆ. ಈ ಪ್ರದೇಶಗಳಲ್ಲಿ  ಅಪಾರ ಪ್ರವಾಸೋದ್ಯಮ ಸಾಮರ್ಥ್ಯವಿದೆ, ಇದನ್ನು ಎಸ್ ಸಿಒ ರಾಷ್ಟ್ರಗಳ ಬಗ್ಗೆ ಜಾಗೃತಿ ಹೆಚ್ಚಿಸುವ ಮೂಲಕ ಉತ್ತೇಜಿಸಬಹುದು.
  • ‘ಕಾಶಿ'(ವಾರಣಾಸಿ)ಯನ್ನು ಶಾಂಘೈ ಸಹಕಾರ ಸಂಸ್ಥೆಯ(SCO) ಮೊದಲ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿ ಎಂದು ಘೋಷಿಸಲಾಗಿದೆ.
  • ಎಸ್ ಸಿಒ ಸದಸ್ಯ ರಾಷ್ಟ್ರಗಳು, ವೀಕ್ಷಕರು ಮತ್ತು ಪಾಲುದಾರರ ಒಟ್ಟು ಸಾಂಸ್ಕೃತಿಕ ಪರಂಪರೆಯಲ್ಲಿ 207 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಸೇರಿವೆ. ಈ ಪ್ರದೇಶದ ಈ ವಿಶಿಷ್ಟ ಉತ್ಪನ್ನವನ್ನು ಪ್ರದರ್ಶಿಸಲು, ಎಸ್ ಸಿಒ ಸದಸ್ಯ ರಾಷ್ಟ್ರಗಳು ಪ್ರತಿ ವರ್ಷ ಒಂದು ನಗರವನ್ನು (ಎಸ್ಸಿಒ ಸದಸ್ಯ ರಾಷ್ಟ್ರಗಳಿಂದ) ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿ ಪರಿಗಣಿಸಲು ನಿರ್ಧರಿಸಿವೆ.
  • ಜಂಟಿ ಕ್ರಿಯಾ ಯೋಜನೆಯಲ್ಲಿ ಎಸ್.ಸಿ.ಒ.  ಪ್ರವಾಸೋದ್ಯಮ ಬ್ರಾಂಡ್ ಉತ್ತೇಜನ, ಪ್ರವಾಸೋದ್ಯಮದಲ್ಲಿ ಎಸ್.ಸಿ.ಒ. ಸದಸ್ಯ ರಾಷ್ಟ್ರಗಳ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವುದು, ಪ್ರವಾಸೋದ್ಯಮದಲ್ಲಿ ಮಾಹಿತಿ ಮತ್ತು ಡಿಜಿಟಲ್ ತಂತ್ರಜ್ಞಾನದ ಹಂಚಿಕೆ ಮತ್ತು ವಿನಿಮಯ, ವೈದ್ಯಕೀಯ ಮತ್ತು ಆರೋಗ್ಯ ಪ್ರವಾಸೋದ್ಯಮದಲ್ಲಿ ಪರಸ್ಪರ ಸಹಕಾರವನ್ನು ಉತ್ತೇಜಿಸುವುದು, ಸೇವೆಗಳ ಗುಣಮಟ್ಟವನ್ನು ಸುಧಾರಿಸುವುದು ಸೇರಿವೆ.

ಶಾಂಘೈ ಸಹಕಾರ ಸಂಸ್ಥೆ (ಎಸ್.ಸಿ.ಒ.):  ಒಂದು ಖಾಯಂ ಅಂತರ ಸರ್ಕಾರಿ ಸಂಸ್ಥೆಯಾಗಿದ್ದು, ಇದನ್ನು 2001 ರಲ್ಲಿ ಸ್ಥಾಪಿಸಲಾಯಿತು. ಭಾರತ, ಕಜಕಿಸ್ತಾನ್, ಚೀನಾ, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ –ಈ  ಎಂಟು ಸದಸ್ಯ ರಾಷ್ಟ್ರಗಳನ್ನು ಎಸ್.ಸಿ.ಒ. ಹೊಂದಿದೆ. 2017ರ ಜೂನ್ 9 ರಂದು ಭಾರತವು ಎಸ್ ಸಿಒದ ಪೂರ್ಣ ಸದಸ್ಯ ರಾಷ್ಟ್ರವಾಯಿತು. ಅಫ್ಘಾನಿಸ್ತಾನ, ಬೆಲಾರಸ್, ಇರಾನ್ ಮತ್ತು ಮಂಗೋಲಿಯಾ ಎಂಬ ನಾಲ್ಕು ವೀಕ್ಷಕ ರಾಷ್ಟ್ರಗಳಿವೆ. ಶಾಂಘೈ ಸಹಕಾರ ಸಂಘಟನೆಯು ಕಾರ್ಯನಿರ್ವಹಣೆಯಲ್ಲಿ   ಅಧಿಕೃತ ಭಾಷೆಗಳಾಗಿ ಚೀನಿ ಮತ್ತು ರಷ್ಯನ್ ಭಾಷೆಗಳನ್ನು ಬಳಸಲಾಗುತ್ತದೆ.