Published on: February 4, 2023

ಸಂಚಾರಿ ಚಿತಾಗಾರ

ಸಂಚಾರಿ ಚಿತಾಗಾರ


ಸುದ್ದಿಯಲ್ಲಿ ಏಕಿದೆ? ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಸ್ಥಳದ ಕೊರತೆ ಎದುರಾಗಿದ್ದು, ಈ ಸಮಸ್ಯೆಯನ್ನು ನೀಗಿಸಲು ಕುಂದಾಪುರ ತಾಲೂಕಿನ ಮುದೂರು ಗ್ರಾಮದಲ್ಲಿ ಇತ್ತೀಚಿಗೆ ಸಂಚಾರಿ ಚಿತಾಗಾರವನ್ನು ಆರಂಭಿಸಲಾಗಿದೆ.


ಮುಖ್ಯಾಂಶಗಳು

  • ಸಂಚಾರಿ ಶವಸಂಸ್ಕಾರ ವಾಹನವನ್ನು ಎಂಪಿಎಸಿ ಉಚಿತವಾಗಿ ಒದಗಿಸುತ್ತಿದೆ.
  • ಸಂಚಾರಿ ಶವಸಂಸ್ಕಾರ ಯಂತ್ರವನ್ನು ಬಳಕೆ ಮಾಡುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ.
  • ಸಂಕುಚಿತ ಗಾಳಿಯೊಂದಿಗೆ ಅಧಿಕ ಒತ್ತಡದಲ್ಲಿ ಯಂತ್ರವು ಮೃತದೇಹವನ್ನು ಪರಿಣಾಮಕಾರಿಯಾಗಿ ಸುಡಲು ಸಹಾಯ ಮಾಡುತ್ತದೆ. ಈ ಸಂಚಾರಿ ಯಂತ್ರವು ದುರ್ವಾಸನೆಯನ್ನೂ ಹೊರಹಾಕುವುದಿಲ್ಲ.

ಉದ್ದೇಶ :  ಹಿಂದುಳಿದವರು, ದಲಿತರು ವಾಸಿಸುವ ಭಾಗದಲ್ಲಿ ಐದು ಸೆಂಟ್ಸ್ ಜಾಗವಿರುವ ಕುಟುಂಬಗಳ ಮನೆಯಲ್ಲಿ ಸಾವಿಗೀಡಾದರೆ ಸ್ಮಶಾನಕ್ಕೆ ಕುಂದಾಪುರದ 40 ಕಿ.ಮೀ ದೂರದಲ್ಲಿರುವ ಸ್ಮಶಾನಕ್ಕೆ ಕೊಂಡೊಯ್ಯಬೇಕಿದೆ. ಹೀಗಾಗಿ ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ (ಎಂಪಿಎಸಿ), ಗ್ರಾಮಸ್ಥರ ಅನುಕೂಲಕ್ಕಾಗಿ ಸಂಚಾರಿ ಶವಸಂಸ್ಕಾರ ವಾಹನವನ್ನು ಪರಿಚಯಿಸಿದೆ.