Published on: November 1, 2021

ಸುದ್ಧಿ ಸಮಾಚಾರ 01 ನವೆಂಬರ್ 2021

ಸುದ್ಧಿ ಸಮಾಚಾರ 01 ನವೆಂಬರ್ 2021

  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 66 ಸಾಧಕರನ್ನು ಗುರುತಿಸಲಾಗಿದೆ. ಜತೆಗೆ ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿಶೇಷ ಪ್ರಶಸ್ತಿ ಪ್ರಕಟಿಸಲಾಗಿದೆ.
  • ದೀಪಾವಳಿ ಸಂದರ್ಭದಲ್ಲಿ ‘ಹಸಿರು ಪಟಾಕಿ’ಗಳನ್ನು ಬಿಟ್ಟು ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವುದನ್ನು ಹಾಗೂ ಸಿಡಿಸುವುದನ್ನು ರಾಜ್ಯ ಸರಕಾರ ನಿಷೇಧಿಸಿದೆ. ‘ಹಸಿರು ಪಟಾಕಿ’ ಎಂದರೆ ಕಡಿಮೆ ಹೊಗೆ ಉಗುಳುವ, ಶಬ್ದ ಹಾಗೂ ವಾಯು ಮಾಲಿನ್ಯ ಮಾಡದ ಪಟಾಕಿಗಳು. ಸಾಂಪ್ರದಾಯಿಕ ಪಟಾಕಿಗೆ ಹೋಲಿಸಿದರೆ ಇವು ಅತ್ಯಂತ ಸಣ್ಣ ಗಾತ್ರದಲ್ಲಿರುತ್ತವೆ.
  • ಬಳಸಿ ಎಸೆಯುವ ಹೂವುಗಳಿಂದ ಊದುಬತ್ತಿ ತಯಾರಿಸುವ ನಿಟ್ಟಿನಲ್ಲಿ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್ಆರ್)ಯ ವಿಜ್ಞಾನಿಗಳ ತಂಡ ಸಂಶೋಧನೆ ಕೈಗೊಂಡಿದೆ. ಕಸ ನಿರ್ವಹಣೆಯೇ ಸವಾಲಾಗಿರುವ ಈ ದಿನಗಳಲ್ಲಿ ಹೂವನ್ನು ಅಗರಬತ್ತಿಯಂತಹ ಉತ್ಪನ್ನ ತಯಾರಿಗೆ ಬಳಸಿದಲ್ಲಿ ತ್ಯಾಜ್ಯ ಪ್ರಮಾಣದಲ್ಲಿ ಕೊಂಚ ಇಳಿಕೆ ಸಾಧ್ಯವಿದೆ.
  • ಬೆಂಗಳೂರು ನಗರದಲ್ಲಿನ 18 ಕೆರೆಗಳ ಪುನಶ್ಚೇತನ ಮತ್ತು ಏಳಕ್ಕೂ ಹೆಚ್ಚು ಕೆರೆಗಳ ಸಂರಕ್ಷಣೆ ಕೆಲಸಕ್ಕಾಗಿ ಬಿಬಿಎಂಪಿಗೆ ಅರ್ಥ್ ಡೆ ನೆಟ್ ವರ್ಕ್ ಸ್ಟಾರ್ ಮುನ್ಸಿಪಾಲ್ ಲೀಡರ್ ಶಿಪ್ ಪ್ರಶಸ್ತಿಯನ್ನು ಪಡೆದಿದೆ.
  • 8 ಇಲಾಖೆಗಳ 58 ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ‘ಜನಸೇವಕ’ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು
  • ಕೇಂದ್ರ ಸರಕಾರದ ವಿತ್ತೀಯ ಕೊರತೆ ಏಪ್ರಿಲ್ -ಸೆಪ್ಟೆಂಬರ್ ಅವಧಿಯಲ್ಲಿ ಕಳೆದ 4 ವರ್ಷಗಳಲ್ಲಿಯೇ ಕನಿಷ್ಠ ಮಟ್ಟವಾದ 5.26 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದ್ದು, 2021-22ರ ಬಜೆಟ್ ಅಂದಾಜಿನ ಶೇ.35ಕ್ಕೆ ತಗ್ಗಿದೆ. ತೆರಿಗೆ ಆದಾಯದಲ್ಲಿ ಸುಧಾರಣೆ ಕಂಡು ಬಂದಿರುವುದು ಇದಕ್ಕೆ ಕಾರಣ.