Published on: October 20, 2021

ಸುದ್ಧಿ ಸಮಾಚಾರ 20 ಅಕ್ಟೋಬರ್ 2021

ಸುದ್ಧಿ ಸಮಾಚಾರ 20 ಅಕ್ಟೋಬರ್ 2021

  • ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಮಹಿಳಾ ಅಧಿಕಾರಿಗೊಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದೆ. ಈ ತಂಡಕ್ಕೆ ರಾಣಿ ಚನ್ನಮ್ಮ ಪಡೆ ಎಂದು ನಾಮಕರಣ ಮಾಡಲಾಗಿದೆ
  • ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಚೇರಿ, ಉದ್ಯಮ, ಅಂಗಡಿ ಮುಂಗಟ್ಟು, ಮನೆ– ಮನೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಸಂಪೂರ್ಣ ಕನ್ನಡದಲ್ಲಿ ಮಾತನಾಡುವ, ಬರೆಯುವ ಹಬ್ಬದ ರೀತಿಯಲ್ಲಿ ‘ಕನ್ನಡಕ್ಕಾಗಿ ನಾವು’ ಅಭಿಯಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದೆ.
  • ಉತ್ತರ ಪ್ರದೇಶದ ಕುಶಿನಗರದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ್ದಾರೆ. ಕುಶಿನಗರ ವಿಮಾನ ನಿಲ್ದಾಣವು ಶ್ರಾವಸ್ತಿ, ಕಪಿಲ್ವಾಸ್ತು, ಲುಂಬಿನಿ (ಕುಶಿನಗರವು ಬೌದ್ಧ ಸಾಂಸ್ಕೃತಿಕ ತಾಣ) ನಂತಹ ಹಲವಾರು ಬೌದ್ಧ ಸಾಂಸ್ಕೃತಿಕ ತಾಣಗಳ ಹತ್ತಿರದಲ್ಲಿದೆ. ಕುಶಿನಗರ ವಿಮಾನ ನಿಲ್ದಾಣವನ್ನು “ಅಂತರಾಷ್ಟ್ರೀಯ ವಿಮಾನ ನಿಲ್ದಾಣ” ವಾಗಿ ಘೋಷಣೆ ಮಾಡಿರುವುದು ಇತರೆ ರಾಷ್ಟ್ರಗಳೊಂದಿನ ಸಂಪರ್ಕವನ್ನು ಹೆಚ್ಚಿಸುತ್ತದೆ.
  • 2020ರ ಅಂತ್ಯದ ವೇಳೆಗೆ ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ಮೂಲಕ ಬ್ರಾಡ್ಬ್ಯಾಂಡ್ ಸಂಪರ್ಕ ಕಲ್ಪಿಸುವುದು ಯೋಜನೆಯ ಗುರಿಯಾಗಿತ್ತು. ಭಾರತ್ನೆಟ್ ಯೋಜನೆ ಆರಂಭವಾಗಿ 10 ವರ್ಷ ಕಳೆದರೂ, ಮರುನಾಮಕರಣ ಮಾಡಿ ಏಳು ವರ್ಷ ಕಳೆದರೂ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಸರ್ಕಾರ ಪದೇ ಪದೇ ಯೋಜನೆಯ ಅವಧಿಯನ್ನು ವಿಸ್ತರಿಸುತ್ತಲೇ ಇದೆ
  • ವಿಶ್ವ ಚಿನ್ನ ಪರಿಷತ್ತು, ಭಾರತೀಯ ಚಿನ್ನ ಮಾರುಕಟ್ಟೆಯ ಆಳ – ವಿಸ್ತೃತ ವಿಶ್ಲೇಷಣೆಯ ಸರಣಿಯ ಮೊದಲ ಕಂತಾದ ‘ಭಾರತೀಯ ಚಿನ್ನ ಬೇಡಿಕೆಯ ಚಾಲಕರು’ ಎಂಬ ವರದಿಯನ್ನು ಬಿಡುಗಡೆಗೊಳಿಸಿದೆ.
  • ಲಾಂಗ್ ಮಾರ್ಚ್-2 ಹೆಸರಿನ ಬಾಹ್ಯಾಕಾಶ ರಾಕೆಟ್ ಮೂಲಕ ಹೈಪರ್ಸಾನಿಕ ಗ್ಲೈಡ್ ವೆಹಿಕಲ್(HGV) ಪರೀಕ್ಷಾರ್ಥ ಉಡಾವಣೆ ಮಾಡಲಾಗಿದ್ದು, ಈ ಕುರಿತು ಫೈನಾನ್ಸಿಶಿಯಲ್ ಟೈಮ್ಸ್ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ. ಈ ವರದಿ ಜಾಗತಿಕವಾಗಿ ಗಮನ ಸೆಳೆದಿದ್ದು, ಚೀನಾದ ಬಾಹ್ಯಾಕಾಶ ಮತ್ತು ಮಿಲಿಟರಿ ಶಕ್ತಿಯ ಬಗ್ಗೆ ಕಳವಳ ವ್ಯಕ್ತವಾಗಿದೆ.
  • ದೆಹಲಿ ಮೂಲದ ಉದ್ಯಮಿ ವಿದ್ಯುತ್ ಮೋಹನ್ ಅವರ ಕೃಷಿತ್ಯಾಜ್ಯ ಮರುಬಳಕೆಯ ಯೋಜನೆಯ ಆವಿಷ್ಕಾರಕ್ಕೆ ಬಿಬಿಸಿಯ ಪ್ರತಿಷ್ಠಿತ ‘ಅರ್ತ್ಶಾಟ್’ ಪ್ರಶಸ್ತಿ ದೊರೆತಿದೆ. ಇದನ್ನು “ಪರಿಸರ ಆಸ್ಕರ್” ಎಂದೂ ಕರೆಯುತ್ತಾರೆ.
  • ಅಮೆರಿಕ ಸಾಹಿತ್ಯ ಭಾಷಾಂತರಕಾರರ ಸಂಸ್ಥೆಯ (ಎ.ಎಲ್.ಟಿ.ಎ) ‘ಅಮೆರಿಕ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’ಗೆ ಸಾಹಿತಿ ಜಯಂತ ಕಾಯ್ಕಿಣಿ ಅವರ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಕೃತಿಯು ಆಯ್ಕೆಯಾಗಿದೆ. ಕನ್ನಡದ ಈ ಕೃತಿಯನ್ನು ಸಾಹಿತಿ ತೇಜಸ್ವಿನಿ ನಿರಂಜನ ಇಂಗ್ಲಿಷ್ಗೆ ಭಾಷಾಂತರಿಸಿದ್ದಾರೆ.