Published on: October 28, 2022

ಸುದ್ಧಿ ಸಮಾಚಾರ – 28 ಅಕ್ಟೋಬರ್ 2022

ಸುದ್ಧಿ ಸಮಾಚಾರ – 28 ಅಕ್ಟೋಬರ್ 2022

  • 2020 ಮತ್ತು 2021 ರಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (IARI) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಐದು ಹೊಸ ಬಾಸುಮತಿ ತಳಿಗಳು, ದೇಶದಲ್ಲಿ ಈ ರೀತಿಯ ಭತ್ತವನ್ನು ಬೆಳೆಯುವ ವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಸಿದ್ಧವಾಗಿವೆ.
  • ಹರಿಯಾಣದ ಸೂರಜ್ಕುಂಡ್ನಲ್ಲಿ ಅಕ್ಟೋಬರ್ 27 -28ರಂದು ಅಖಿಲ ಭಾರತ ಗೃಹ ಸಚಿವರ ಸಮ್ಮೇಳನ ನಡೆಯಲಿದ್ದು, ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸುವ ಕುರಿತಂತೆ ಗಂಭೀರ ಚರ್ಚೆ ನಡೆಯಲಿದೆ.
  • ಮೂರರಿಂದ ಎಂಟು ವರ್ಷದ ಮಕ್ಕಳ ಅಡಿಪಾಯ ಹಂತದ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕ್ಕಟ್ಟಿಗೆ (ಎನ್‌ಸಿಎಫ್) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಚಾಲನೆ ನೀಡಿದ್ದಾರೆ. ಮಗುವಿನ ಜೀವನದ ಮೊದಲ ಎಂಟು ವರ್ಷಗಳಲ್ಲಿನ ಮಿದುಳಿನ ಬೆಳವಣಿಗೆಯು ಅತ್ಯಂತ ವೇಗವಾಗಿರುತ್ತದೆ. ಹಾಗಾಗಿ ಎನ್‌ಸಿಎಫ್‌ನಲ್ಲಿ ಮಕ್ಕಳ ಶಿಕ್ಷಣಕ್ಕಾಗಿ;ಪಂಚಕೋಶ ಪರಿಕಲ್ಪನೆಯನ್ನು ಪಟ್ಟಿ ಮಾಡಲಾಗಿದೆ. ಅವುಗಳೆಂದರೆ ದೈಹಿಕ ಬೆಳವಣಿಗೆ ( ಶಾರೀರಿಕ್ ವಿಕಾಸ್), ಜೀವಶಕ್ತಿಯ ಅಭಿವೃದ್ಧಿ (ಪ್ರಾಣಿಕ್ ವಿಕಾಸ್), ಭಾವನಾತ್ಮಕ ಮತ್ತು ಮಾನಸಿಕ ಅಭಿವೃದ್ಧಿ(ಮಾನಸಿಕ್ ವಿಕಾಸ್), ಆಧ್ಯಾತ್ಮಿಕ ಬೆಳವಣಿಗೆ (ಚೈತ್ರಿಕ್ ವಿಕಾಸ್) ಇವುಗಳ ಆಧಾರದಡಿ ಮಕ್ಕಳನ್ನು ತಯಾರು ಮಾಡಲಾಗುತ್ತದೆ
  • ಬಾಂಗ್ಲಾದೇಶಕ್ಕೆ ಸಿತ್ರಾಂಗ್ ಚಂಡಮಾರುತ ಅಪ್ಪಳಿಸಿದ್ದು, ಕನಿಷ್ಠ 16 ಮಂದಿ ಸಾವಿಗೀಡಾಗಿದ್ದು, ಸುಮಾರು ಒಂದು ಮಿಲಿಯನ್ ಜನರನ್ನು ಅವರ ಮನೆಗಳಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  • ವಿಶ್ವ ಚಾಂಪಿಯನ್‌ಶಿಪ್‌: ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ಸ್ಪೇನ್‌ನಲ್ಲಿ ನಡೆದ U23 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ರವಿ ದಹಿಯಾ ಕೂಡ ಈ ಟೂರ್ನಿಯಲ್ಲಿ ಈ ಹಿಂದೆ ಬೆಳ್ಳಿ ಪದಕ ಗೆದ್ದಿದ್ದರು.ಅಂಡರ್ 23 ವಿಶ್ವ ಕುಸ್ತಿ ಚಾಂಪಿಯನ್​ಶಿಪ್ ನಲ್ಲಿ ಭಾರತಕ್ಕೆ ಮೊದಲ ಪದಕ​:
  • ವೀಸಾ ನಿರಾಕರಣೆ ವಿವಾದದ ನಡುವೆಯೇ 23 ವರ್ಷದೊಳಗಿನ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌(77 ಕೆಜಿ ವಿಭಾಗದಲ್ಲಿ)ನಲ್ಲಿ ಭಾರತ ಐತಿಹಾಸಿಕ ಪದಕ ಸಾಧನೆ ಮಾಡಿದ್ದು, ಸಜನ್​ ಭನ್ವಾಲಾ ಮೊದಲ ಕಂಚಿನ ಪದಕ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಇದು ಭಾರತಕ್ಕೆ ಬಂದ ಮೊದಲ ಪದಕವಾಗಿದೆ
  • ಪದಾತಿ ಸೈನ್ಯ ದಿನ: ಪ್ರತಿವರ್ಷ ಅಕ್ಟೋಬರ್ 27ನ್ನು ಕಾಲಾಳುಪಡೆ ದಿನ ಎಂದು ಆಚರಿಸಲಾಗುತ್ತದೆ. ಇದರ ಅಂಗವಾಗಿ ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ದೇಶದ ರಕ್ಷಣಾ ಪಡೆಯ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.

ಹಿನ್ನೆಲೆ: ಸಿಖ್ ರೆಜಿಮೆಂಟ್‌ನ 1 ನೇ ಬೆಟಾಲಿಯನ್ ನೇತೃತ್ವದ ಭಾರತೀಯ ಸೇನೆಯ ಪದಾತಿ ದಳವು 1947 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ವಾಯುನೆಲೆಗೆ ದಾರಿ ಮಾಡಿಕೊಟ್ಟ ಸಂದರ್ಭವನ್ನು ಸ್ಮರಿಸಲು ಆಚರಿಸಲಾಗುತ್ತದೆ. ಆದಿವಾಸಿಗಳ ಸಹಾಯದಿಂದ ಕಾಶ್ಮೀರವನ್ನು ಆಕ್ರಮಿಸಿದ ಪಾಕಿಸ್ತಾನದ ಸೇನೆಯನ್ನು ವಿಫಲಗೊಳಿಸಲು ಅಸಾಧಾರಣ ಧೈರ್ಯವನ್ನು ತೋರಿಸಿದರು. ಈ ರೆಜಿಮೆಂಟ್ ಭಾರತದ ಗಡಿಗಳನ್ನು ರಕ್ಷಿಸುವ ಗೋಡೆಯಂತೆ ಕಾರ್ಯನಿರ್ವಹಿಸಿತು.