Published on: July 28, 2022

ಸುದ್ಧಿ ಸಮಾಚಾರ – 28 ಜುಲೈ 2022

ಸುದ್ಧಿ ಸಮಾಚಾರ – 28 ಜುಲೈ 2022

  • ಅಥಣಿ ಪಟ್ಟಣದ ಹೊರವಲಯದಲ್ಲಿನ ಕೃಷ್ಣಾ ಬಡಾವಣೆಯಲ್ಲಿ ಪುನುಗು ಬೆಕ್ಕು (ಸಿವೆಟ್‌ ಕ್ಯಾಟ್‌) ಪತ್ತೆಯಾಗಿದೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಬೆಕ್ಕನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟರು.

  • ಐಐಟಿ ಧಾರವಾಡದ ಕ್ಯಾಂಪಸ್ ನಲ್ಲಿ ಅತ್ಯಾಧುನಿಕ ಡ್ರೋನ್ ಪ್ರಯೋಗಾಲಯವನ್ನು ಸ್ಥಾಪಿಸುವ ಯೋಜನೆ ನಡೆಯುತ್ತಿದೆ.
  • ರಾಜ್ಯದಲ್ಲಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1ರಿಂದ 8ನೇ ತರಗತಿಯ ಮಕ್ಕಳಿಗೆಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡುವ ಯೋಜನೆಗೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ.ಆದರೆ, ವರ್ಷದ 46 ದಿನಗಳು ಮಾತ್ರ ವಿತರಿಸಲು ಇಲಾಖೆ ಅನುಮೋದನೆ ನೀಡಿದೆ..
  • ಆರಂಭದಲ್ಲಿ ಮಳೆ ಬಾರದೆ ಆಲೂಗೆಡ್ಡೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಈಗ ಹುಲುಸಾಗಿ ಬೆಳೆದು ನಿಂತಿರುವ ಬೆಳೆಗೆ ಅಂಗಮಾರಿ ರೋಗದ ಭೀತಿ ಕಾಡುತ್ತಿದೆ.
  • ರಾಮಯ್ಯ ಆನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕುಲ್‌ದೀಪ್ ಕೆ. ರೈನಾ ಹಾಗೂ ಭಾರತೀಯ ತಂತ್ರಜ್ಞಾನ ಕಾಂಗ್ರೆಸ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ.ಎಲ್.ವಿ.ಮುರಳಿಕೃಷ್ಣ ರೆಡ್ಡಿ ಅವರು ‘ರಾಮಯ್ಯ ಸ್ಯಾಟ್’ ಹೆಸರಿನ ನ್ಯಾನೋ ಉಪಗ್ರಹ ಅಭಿವೃದ್ಧಿಪಡಿಸುವ ಒಡಂಬಡಿಕೆಗೆ ಸಹಿ ಹಾಕಿದರು.
  • ಭಾರತದ ಆತಿಥ್ಯದಲ್ಲಿ ನಡೆಯಲಿರುವ 44ನೇ ಚೆಸ್‌ ಒಲಿಂಪಿಯಾಡ್‌ನ ಕ್ರೀಡಾ ಜ್ಯೋತಿ ಯಾತ್ರೆಯು ಉದ್ಯಾನನಗರಿಯಲ್ಲಿ ವೈಭವದಿಂದ ನಡೆಯಿತು.
  • ಕೋಡಿ ಬೆಂಗ್ರೆ ಮೊದಲ ತಂಬಾಕು ಮುಕ್ತ ಗ್ರಾಮವಾಗಿ ಘೋಷಣೆಯಾದ ಬೆನ್ನಲ್ಲೇ ಹಲವು ಗ್ರಾಮಗಳು ತಂಬಾಕು ಮುಕ್ತ ಗ್ರಾಮಗಳಾಗುವ ಸಂಕಲ್ಪ ತೊಟ್ಟಿದ್ದು ಕಾರ್ಯೋನ್ಮುಖವಾಗಿವೆ.
  • ಸಮುದ್ರ ತೀರದ ಅನೇಕ ಪ್ರದೇಶಗಳನ್ನು ಭಾರಿ ಗಾತ್ರದ ಅಲೆಗಳು ಆಪೋಶನ ಪಡೆಯುತ್ತಲೇ ಇವೆ. ಇದನ್ನು ತಡೆಯಲು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದರೂ ಪ್ರಯೋಜನವಾಗಿಲ್ಲ. ಇದಕ್ಕೆ ಕಡಲತೀರಗಳಲ್ಲಿ ‘ಹಸಿರು ಕವಚ’ವನ್ನು ಬೆಳೆಸುವುದೇ ಸೂಕ್ತ ಎಂಬ ಅಭಿಪ್ರಾಯ ವಿಜ್ಞಾನಿಗಳದ್ದು.
  • ತಲಪಾಡಿಯ ಸಂಜೀವ ಬಂಗೇರ, ಪುತ್ತೂರಿನ ಉಲ್ಲಾಸ ಕೃಷ್ಣ ಪೈ ಮತ್ತು ಕೃಷ್ಣಪ್ಪ ಉಪ್ಪೂರು ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
  • ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಅಸಂಘಟಿತ ವಲಯದದಲ್ಲಿ ಕೆಲಸ ಮಾಡುವ ಮಹಿಳೆಯರ ವಾಸ್ತವ್ಯಕ್ಕೆ ಕೇರಳ ಸರ್ಕಾರ ರಾಜ್ಯಾದಾದ್ಯಂತ ‘ಸ್ಟುಡಿಯೊ ಅಪಾರ್ಟ್‌ಮೆಂಟ್‌’ ಸ್ಥಾಪಿಸಲು ಯೋಜನೆ ರೂಪಿಸಿದೆ.
  • ಕ್ರಿಪ್ಟೊ ನಿರ್ಬಂಧಿಸಲು ಆರ್‌ಬಿಐ ಸಲಹೆ: ಕ್ರಿಪ್ಟೊಕರೆನ್ಸಿಗಳು ದೇಶದ ಹಣಕಾಸು ಮತ್ತು ಆರ್ಥಿಕ ಸ್ಥಿರತೆಯನ್ನು ಹಾಳುಮಾಡುವ ಸಾಮರ್ಥ್ಯ ಹೊಂದಿರುವ ಕಾರಣ ಅವುಗಳನ್ನು ನಿಷೇಧಿಸಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ. ಕ್ರಿಪ್ಟೊಕರೆನ್ಸಿ ಎಂಬುದು ಒಂದು ಕರೆನ್ಸಿಯೇ ಅಲ್ಲ ಎಂದು ಆರ್‌ಬಿಐ ಹೇಳಿದೆ. ಏಕೆಂದರೆ, ಆಧುನಿಕ ಕಾಲದ ಕರೆನ್ಸಿಗಳನ್ನು ಕೇಂದ್ರೀಯ ಬ್ಯಾಂಕ್ ಅಥವಾ ಕೇಂದ್ರ ಸರ್ಕಾರದಿಂದ ಹೊರಡಿಸಬೇಕಾಗುತ್ತದೆ.
  • ರೇಥಿಯಾನ್ ಟೆಕ್ನಾಲಜೀಸ್ ಕಾರ್ಪೋರೇಷನ್ ಸಂಸ್ಥೆ ನಿರ್ಮಿಸಿರುವ, ಶಬ್ದದ ವೇಗಕ್ಕಿಂತ ಐದು ಪಟ್ಟು ಹೆಚ್ಚಿನ ವೇಗದಲ್ಲಿ ಸಾಗುವ ಏರ್ ಬ್ರೀದಿಂಗ್ ಹೈಪರ್ ಸಾನಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾ ಉಡಾವಣೆ ನಡೆಸಿದೆ. ಹೈಪರ್ ಸಾನಿಕ್ ಆಯುಧಗಳು ಅತ್ಯಂತ ಎತ್ತರದ ವಾತಾವರಣದಲ್ಲಿ ಶಬ್ದದ ವೇಗಕ್ಕಿಂತ ಐದು ಪಟ್ಟಿಗೂ ಹೆಚ್ಚಿನ ವೇಗದಲ್ಲಿ ಅಥವಾ ಗಂಟೆಗೆ 6,200 ಕಿಲೋಮೀಟರ್ (3,853 ಮೈಲಿ) ವೇಗದಲ್ಲಿ ಚಲಿಸುತ್ತವೆ.
  • ಶ್ರೀಲಂಕಾದ ನೂತನ ಅಧ್ಯಕ್ಷ: ಸಿಂಗಾಪುರಕ್ಕೆ ಪಲಾಯನ ಮಾಡಿರುವ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆಯಿಂದ ಶ್ರೀಲಂಕಾದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಗೊಟಬಯ ರಾಜಪಕ್ಸ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ರಾನಿಲ್ ವಿಕ್ರಮಸಿಂಘೆ ಅಧ್ಯಕ್ಷರಾಗಿ ವಚನ ಸ್ವೀಕರಿಸಿದರು
  • ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.19 ವರ್ಷಗಳ ಬಳಿಕ ಪದಕ ನೀರಜ್‌ ಚೋಪ್ರಾ ಅವರು ಬೆಳ್ಳಿ ಸಾಧನೆ ಮಾಡುವ ಮೂಲಕ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ 19 ವರ್ಷಗಳ ಬಳಿಕ ಭಾರತಕ್ಕೆ ಪದಕ ಗೆದ್ದುಕೊಟ್ಟರು. 2003ರಲ್ಲಿ ಮಹಿಳೆಯರ ಲಾಂಗ್ ಜಂಪ್‌ ಸ್ಪರ್ಧೆಯಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು. ಅದಾದ ಬಳಿಕ ಭಾರತಕ್ಕೆ ಪದಕ ಕೈಗೂಡಿರಲಿಲ್ಲ.