Published on: October 10, 2022

ಸ್ವಚ್ಛತಾ ಸರ್ವೇಕ್ಷಣೆ: 2022

ಸ್ವಚ್ಛತಾ ಸರ್ವೇಕ್ಷಣೆ: 2022

ಸುದ್ದಿಯಲ್ಲಿ ಏಕಿದೆ?

ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸರ್ವೇಕ್ಷಣೆಯ ಫಲಿತಾಂಶ ಪ್ರಕಟವಾಗಿದ್ದು, ದೇಶದ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಮಧ್ಯಪ್ರದೇಶ ಇಂದೋರ್‌ ಸತತ ಆರನೇ ಬಾರಿಗೆ ಪಾತ್ರವಾಗಿದೆ. 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 45 ನಗರಗಳಲ್ಲಿ ಬೆಂಗಳೂರು 43ನೇ ಸ್ಥಾನ ಪಡೆದಿದೆ.

ಮುಖ್ಯಾಂಶಗಳು

  • ಪ್ರಶಸ್ತಿ ಪ್ರಧಾನ:ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ವತಿಯಿಂದ ಸ್ವಚ್ಛತೆಗೆ ಸಂಬಂಧಿಸಿದ ಆರು ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಚ್ಛ ಭಾರತ ದಿವಸದ ಅಂಗವಾಗಿ ಪ್ರದಾನ ಮಾಡಿದರು.
  • ಗಾಂಧಿ ಜಯಂತಿಯಂದೇ ಸ್ವಚ್ಛ ಭಾರತ ದಿವಸ ಆಚರಣೆ ಮಾಡಲಾಗುತ್ತದೆ.
  • ಇದು ಈ ಬಾರಿಯ (2022) ಸ್ವಚ್ಛ ಸರ್ವೇಕ್ಷಣೆಯ 6ನೇ ಆವೃತ್ತಿಯಾಗಿದೆ.

ಸ್ವಚ್ಛ ಸರ್ವೇಕ್ಷಣಾ ರ್ಯಾಂಕಿಂಗ್ ಪಟ್ಟಿ

  • ಸ್ವಚ್ಛ ನಗರಗಳ ಪಟ್ಟಿ(1ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ): ಮೈಸೂರು 8ನೇ ಸ್ಥಾನ ಪಡೆದುಕೊಂಡಿದೆ
  • ಸ್ವಚ್ಛ ಮಧ್ಯಮ ನಗರಗಳ ವಿಭಾಗ (3ರಿಂದ 10 ಲಕ್ಷ ಜನಸಂಖ್ಯೆ): ಮೈಸೂರು ಮಹಾನಗರ ಪಾಲಿಕೆಯು 2ನೇ ಸ್ಥಾನ ಗಳಿಸಿದೆ.
  • ಸ್ವಚ್ಛ ಕಂಟೋನ್ಮೆಂಟ್ ವರ್ಗ: ಬೆಳಗಾವಿ ಕಂಟೋನ್ಮೆಂಟ್ 44ನೇ ಶ್ರೇಯಾಂಕ
  • ವೇಗವಾಗಿ ಬೆಳೆಯು ತ್ತಿರುವ ನಗರ ;ಶಿವಮೊಗ್ಗ
  • ಸುಸ್ಥಿರ ನಗರ ವಿಭಾಗ :ಹೊಸದುರ್ಗ
  • ಗಂಗಾ ತೀರದ ಸ್ವಚ್ಛನಗರ : ಹರಿದ್ವಾರ
  • ಅತ್ಯಂತ ಸ್ವಚ್ಛ ಜಿಲ್ಲೆ : ಹರಿಯಾಣ ರಾಜ್ಯದ ಭಿವಾನಿ.
  • ರಾಷ್ಟ್ರಮಟ್ಟದಲ್ಲಿ ಸ್ವಚ್ಛ ಜಿಲ್ಲೆಗಳ ಪೈಕಿ 129ನೇ ಸ್ಥಾನದಲ್ಲಿರುವ ಉಡುಪಿ ಜಿಲ್ಲೆ ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದಿದೆ.

ಮಾನದಂಡ:

  • ಕೇಂದ್ರ ಸರ್ಕಾರವು 2016ರಲ್ಲಿ ಸ್ವಚ್ಛ ಭಾರತ್ ಮಿಷನ್ ಜಾರಿ ಮಾಡಿತು. ಈ ಮಿಷನ್ ಅಡಿಯಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಸ್ವಚ್ಛ ಸರ್ವೇಕ್ಷಣೆಯನ್ನು ಆರಂಭಿಸಿದೆ. ಇದರ ಮೂಲಕ, ಭಾರತದ ವಿವಿಧ ನಗರಗಳು ಮತ್ತು ಪಟ್ಟಣಗಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಾರ್ಷಿಕ ಸಮೀಕ್ಷೆ ನಡೆಸಲಾಗುತ್ತಿದೆ.
  • ಸಮೀಕ್ಷೆಯ ಆಧಾರದ ಮೇಲೆ ಸ್ವಚ್ಛ ಸರ್ವೇಕ್ಷಣಾ ಶ್ರೇಯಾಂಕ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ನಗರಗಳ ಆರೋಗ್ಯ ಮತ್ತು ತ್ಯಾಜ್ಯ ನೀರಿನ ವಿಲೇವಾರಿ ಮುಂತಾದ ಇತರ ಪ್ರಮುಖ ಮಾನದಂಡಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ.
  • ಈ ಸಮೀಕ್ಷೆಗಾಗಿ ಆ್ಯಪ್ ಕೂಡ ಸಿದ್ಧಪಡಿಸಲಾಗಿದ್ದು, ಅದರ ಮೂಲಕ ಜನರು ತಮ್ಮ ಪ್ರತಿಕ್ರಿಯೆಯನ್ನು
  • ನೀಡುವುದರ ಜೊತೆಗೆ ತಮ್ಮ ನಗರದಲ್ಲಿನ ಸ್ವಚ್ಛತೆಯ ಬಗ್ಗೆ ದೂರುಗಳನ್ನು ದಾಖಲಿಸ ಲು ಅವಕಾಶವಿದೆ

ಯೋಜನೆಯ ಉದ್ದೇಶ: 

  • ದೇಶದಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು
  • ಸಮೀಕ್ಷೆಯಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಅಗತ್ಯ

ಈ ಸಮೀಕ್ಷೆಯ ವಿಶೇಷತೆ

  • ಈ ಬಾರಿ ಸಮೀಕ್ಷೆಯ ಮೌಲ್ಯಮಾಪನಕ್ಕೆ ಪ್ರಮಾಣಿತ ಸಾರ್ವಜನಿಕ ಪ್ರತಿಕ್ರಿಯೆಯನ್ನೂ ಇಡಲಾಗಿದೆ. ಸಾರ್ವಜನಿಕರಿಂದ ಪಡೆದ ಪ್ರತಿಕ್ರಿಯೆಯಲ್ಲಿ ಹಿರಿಯ ನಾಗರಿಕರು ಹಾಗೂ ಯುವಕರಿಂದ ಹೆಚ್ಚಿನ ಪ್ರತಿಕ್ರಿಯೆ ತೆಗೆದುಕೊಳ್ಳ ಲಾಯಿತು.
  • ಕೋವಿಡ್-19ನಿಂದ ಹಿಡಿದು ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಶೌಚಾಲಯಗಳವರೆಗೆ ಹಲವು ಪ್ರಶ್ನೆಗಳು ಸೇರಿವೆ. ಕೊರೊನಾ ತ್ಯಾಜ್ಯ ನಿರ್ವಹಣೆ ಜತೆಗೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಂದ ಹೊರಬರುವ ಕಸ ವಿಲೇವಾರಿಗೆ ಇರುವ ವ್ಯವಸ್ಥೆಯನ್ನು ಕೂಡ ಸ್ವಚ್ಛ ಸರ್ವೇಕ್ಷಣೆಯಲ್ಲಿ ಪರಿಗಣಿಸಲಾಗುವುದು

ಸ್ವಚ್ಛ ಸಮೀಕ್ಷೆ ಗುರಿಗಳು

  • ಸ್ವಚ್ಛತಾ ಮಿಷನ್ ಅಡಿಯಲ್ಲಿ, ದೇಶದಲ್ಲಿ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಲಾಗುವುದು. ದೇಶದ ಜನರು
  • ಸ್ವಚ್ಛತಾ ಕಾರ್ಯದಲ್ಲಿ ಸಂಪೂರ್ಣವಾಗಿ ಭಾಗವಹಿಸುವುದನ್ನು ಖಾತರಿಪಡಿಸಿಕೊಳ್ಳುವುದು.
  • ದೇಶವನ್ನು ಉತ್ತಮ ಮತ್ತು ಸ್ವಚ್ಛವಾಗಿರಿಸುವುದು ಈ ಮಿಷನ್‌ನ ಗುರಿಯಾಗಿದೆ.
  • ಉದಾಹರಣೆಗೆ, ವಿವಿಧ ರೀತಿಯ ತ್ಯಾಜ್ಯವನ್ನು ಪ್ರತ್ಯೇಕಿಸಬೇಕು. ತೇವ, ಒಣ ಮತ್ತು ಅಪಾಯಕಾರಿ ತ್ಯಾಜ್ಯವನ್ನು ಪ್ರತ್ಯೇಕಿಸಬೇಕು. ಒದ್ದೆ ಮತ್ತು ಒಣ ತ್ಯಾಜ್ಯ ಇತ್ಯಾದಿಗಳನ್ನು ವಿಲೇವಾರಿ ಮತ್ತು ಮರುಬಳಕೆ ಮಾಡುವ ಮೂಲಕ ನಗರಗಳ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದು.
  • ನೈರ್ಮಲ್ಯ ಮತ್ತು ಆರೋಗ್ಯವನ್ನು ಸುಧಾರಿಸುವುದು.
  • ಇದಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕೆಲವು ಗುರಿಗಳನ್ನು ನಿಗದಿಪಡಿಸಲಾಗಿದೆ.

ಸ್ವಚ್ಛ ಸರ್ವೇಕ್ಷಣೆಯ ಪ್ರಯೋಜನಗಳು ಮತ್ತು ವೈಶಿಷ್ಟ್ಯಗಳು

  • ಸ್ವಚ್ಛ ಸರ್ವೇಕ್ಷಣೆಯು ದೇಶಾದ್ಯಂತ ನಗರಗಳಿಗೆ ಸ್ವಚ್ಛತೆಯ ಮಟ್ಟವನ್ನು ಆಧರಿಸಿ ಶ್ರೇಯಾಂಕ ನೀಡುತ್ತದೆ.
  • ಇದು ಎಲ್ಲಾ ರಾಜ್ಯಗಳು ತಮ್ಮ ನಗರಗಳನ್ನು ಸ್ವಚ್ಛತೆ ಮತ್ತು ಇತರ ನಿಗದಿತ ಮಾನದಂಡಗಳ ಆಧಾರದ ಮೇಲೆ ಶ್ರೇಯಾಂಕದ ಪ್ರಕಾರ ಸುಧಾರಿಸಲು ಪ್ರೇರೇಪಿಸುತ್ತದೆ.
  • ಇದರ ಅಡಿಯಲ್ಲಿ ನಗರಗಳನ್ನು ಕಸ ಮುಕ್ತ ಮತ್ತು ಬಯಲು ಶೌಚ ಮುಕ್ತ ನಗರವನ್ನಾಗಿ ಮಾಡಲು ಪ್ರಯತ್ನಿಸಲಾಗುವುದು.
  • ಕಳೆದ 3 ವರ್ಷಗಳಿಂದ ಸ್ವಚ್ಛ ಸಮೀಕ್ಷೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ.
  • ಸ್ವಚ್ಛ ಭಾರತ್ ಡಿಜಿಟಲ್ ಮಿಷನ್‌ಗಾಗಿ ಕೆಲವು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.
  • ಸ್ವಚ್ಛ ಸರ್ವೇಕ್ಷಣ್ 2022 ರಲ್ಲಿ, ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡನ್ನೂ ಮೌಲ್ಯಮಾಪನ ಮಾಡಲಾಗುತ್ತದೆ.