Published on: July 15, 2022

ಹಸಿರು ಹೈಡ್ರೋ ಜನ್ ಉತ್ಪಾದನೆ

ಹಸಿರು ಹೈಡ್ರೋ ಜನ್ ಉತ್ಪಾದನೆ

ಸುದ್ದಿಯಲ್ಲಿ ಏಕಿದೆ?

ಜೈವಿಕ ತ್ಯಾಜ್ಯಗಳಿಂದ ಹಸಿರು ಹೈಡ್ರೋ ಜನ್ (ಶುದ್ಧ ಜಲಜನಕ ಇಂಧನ) ಉತ್ಪಾದಿಸುವ ಪರಿಸರ ಸ್ನೇಹಿ ವಿಧಾನವನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

  • ಕೇಂದ್ರದ ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲದಲ್ಲಿ ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಮುಖ್ಯಾಂಶಗಳು

  • ಜೈವಿಕ ತ್ಯಾಜ್ಯವು ನವೀಕರಿಸಬಹುದಾದ ಹೇರಳ ಇಂಧನ ಮೂಲವೆನಿಸಿದೆ. ಮುಂಬರುವ ವರ್ಷಗಳಲ್ಲಿ ವಿವಿಧ ವಲಯಗಳಲ್ಲಿ, ವಿವಿಧ ವಿಧಾನದಿಂದ ಕನಿಷ್ಠ 50 ಲಕ್ಷ ಟನ್ ಹೈಡ್ರೋಜನ್ ಅನ್ನು ಭಾರತ ಬಳಸಲಿದೆ. ಹೈಡ್ರೋ ಜನ್ ಮಾರುಕಟ್ಟೆಯು ಗಣನೀಯವಾಗಿ ಸುಸ್ಥಿರ ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ ಎಂದು ಐಐಎಸ್ಸಿ ಸಂಶೋಧಕರು ಹೇಳಿದ್ದಾರೆ.
  • ಸಂಶೋಧಕರ ತಂಡವು ಜೈವಿಕ ತ್ಯಾಜ್ಯದಿಂದ ಎರಡು ಹಂತಗಳಲ್ಲಿ ಹಸಿರು ಹೈಡ್ರೋಜನ್ ಉತ್ಪಾದಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಮೊದಲ ಹಂತದಲ್ಲಿ ಜೈವಿಕ ತ್ಯಾಜ್ಯವನ್ನು ಸಿಂಥೆಸಿಸ್ ನೈಸರ್ಗಿಕ ಅನಿಲವಾಗಿ (ಸಿಂಥೆಸಿಸ್ ನ್ಯಾಚುರಲ್ ಗ್ಯಾಸ್) ಮಾರ್ಪಡಿಸಲಾಗುವುದು. ಆಮ್ಲಜನಕ ಮತ್ತು ಉಗಿಯನ್ನು ನೋವೆಲ್ ರಿಯಾಕ್ಟರ್ ಆಗಿ ಬಳಸಿ ಉತ್ಪಾದಿಸಿದ ಹೇರಳ ಜಲಜನಕ ಇಂಧನ ಮಿಶ್ರಣದ ಅನಿಲವೇ ಸಿನ್ಗ್ಯಾಸ್.
  • ಒತ್ತಡದ ಅನಿಲ ಪ್ರತ್ಯಕಿಸುವ ಘಟಕ ಬಳಸಿ, ಸಿಂಥೆಸಿಸ್ ಗ್ಯಾಸ್ನಿಂದ ಶುದ್ಧ ಹೈಡ್ರೋಜನ್ ಉತ್ಪಾದಿಸಲಾಗುತ್ತದೆ. ಹಸಿರು ಹೈಡ್ರೋಜನ್ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಈ ಎರಡು ತಂತ್ರಜ್ಞಾನಗಳು ಅತ್ಯಂ ತ ದಕ್ಷತೆಯ ವಿಧಾನಗಳೆನಿಸಿವೆ. ಸದ್ಯದ ತಂತ್ರಜ್ಞಾನದಲ್ಲಿ 1 ಕೆ.ಜಿ. ಜೈವಿಕ ತ್ಯಾಜ್ಯದಿಂದ 60 ಗ್ರಾಂ ನಷ್ಟು ಹೈಡ್ರೋ ಜನ್ ಉತ್ಪಾದಿಸಲಾಗುತ್ತಿದೆ. ಐಐಎಸ್ಸಿಯ ನವೀನ ತಂತ್ರಜ್ಞಾನದಿಂದ 1 ಕೆ.ಜಿ ಜೈವಿಕ ತ್ಯಾಜ್ಯದಲ್ಲಿ 100 ಗ್ರಾಂ ಹೈಡ್ರೋ ಜನ್ ಉತ್ಪಾದಿಸಬಹುದಾಗಿದೆ.

ಹಸಿರು ಹೈಡ್ರೋಜನ್ ಎಂದರೇನು?

  • ಹಸಿರು ಹೈಡ್ರೋಜನ್ ಹೈಡ್ರೋಜನ್ ಅನಿಲವಾಗಿದೆ, ಇದು ನೀರಿನ ವಿದ್ಯುದ್ವಿಭಜನೆಯ ಮೂಲಕ ಉತ್ಪತ್ತಿಯಾಗುತ್ತದೆ. ವಿದ್ಯುದ್ವಿಭಜನೆಯು ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ವಿಭಜಿಸಲು ಶಕ್ತಿಯ ತೀವ್ರ ಪ್ರಕ್ರಿಯೆಯಾಗಿದೆ.

ಭಾರತದಲ್ಲಿ ಹೈಡ್ರೋಜನ್ ಬೇಡಿಕೆ

  • ವರದಿಯ ಪ್ರಕಾರ, 2050 ರ ವೇಳೆಗೆ ಭಾರತದಲ್ಲಿ ಹೈಡ್ರೋಜನ್ ಬೇಡಿಕೆಯು ನಾಲ್ಕು ಪಟ್ಟು ಹೆಚ್ಚಾಗುತ್ತದೆ, ಇದು ಜಾಗತಿಕ ಹೈಡ್ರೋಜನ್ ಬೇಡಿಕೆಯ 10% ಆಗಿದೆ. ಹೀಗಾಗಿ, ಬೇಡಿಕೆಯ ಒಟ್ಟುಗೂಡಿಸುವಿಕೆ ಮತ್ತು ಡಾಲರ್-ಆಧಾರಿತ ಬಿಡ್ಡಿಂಗ್ ಮೂಲಕ ಹಸಿರು ಹೈಡ್ರೋಜನ್‌ಗೆ ಹೂಡಿಕೆಗೆ ಅನುಕೂಲವಾಗುವಂತೆ ಇದು ಸೂಚಿಸುತ್ತದೆ.

ಪ್ರಸ್ತುತ ಹಸಿರು ಹೈಡ್ರೋಜನ್ ನೀತಿ

  • ವರದಿಯ ಪ್ರಕಾರ, ಪ್ರಸ್ತುತ ಗ್ರೀನ್ ಹೈಡ್ರೋಜನ್ ನೀತಿಯು ಸಾಕಷ್ಟು ಕ್ರಮಗಳನ್ನು ಒದಗಿಸುತ್ತದೆ, ಇದು ಅಂತರ-ರಾಜ್ಯ ಪ್ರಸರಣ (ಐಎಸ್‌ಟಿಎಸ್) ಶುಲ್ಕ ಮನ್ನಾ ಮತ್ತು ಹಸಿರು ಅಮೋನಿಯಾ ಮತ್ತು ಹಸಿರು ಹೈಡ್ರೋಜನ್ ಉತ್ಪಾದನೆಗೆ ಮುಕ್ತ ಪ್ರವೇಶವನ್ನು ಕೇಂದ್ರೀಕರಿಸುತ್ತದೆ. ತೆರಿಗೆ ಮತ್ತು ಸುಂಕಗಳನ್ನು ಕಡಿಮೆ ಮಾಡುವ ಅಥವಾ ವಿನಾಯಿತಿ ನೀಡುವ ಮೂಲಕ ಅದರ ಉತ್ಪಾದನೆಯನ್ನು ಇನ್ನಷ್ಟು ಸುಧಾರಿಸಬಹುದು.