Published on: September 19, 2022

QRSAM ಕ್ಷಿಪಣಿ ವ್ಯವಸ್ಥೆ

QRSAM ಕ್ಷಿಪಣಿ ವ್ಯವಸ್ಥೆ

ಸುದ್ದಿಯಲ್ಲಿ ಏಕಿದೆ?

ಮೇಲ್ಮೈನಿಂದ ಆಗಸಕ್ಕೆ ಚಿಮ್ಮುವ ತ್ವರಿತ ಪ್ರತಿಕ್ರಿಯೆಯ ಕ್ಷಿಪಣಿ ವ್ಯವಸ್ಥೆಯನ್ನು ಭಾರತ ಯಶಸ್ವಿಯಾಗಿ ಉಡಾಯಿಸಿದೆ. ಒಡಿಶಾದ ಕಡಲ ತೀರದಿಂದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಲ್ಲಿ ಉಡಾವಣೆ ಮಾಡಲಾಗಿದ್ದು, ಸೇನೆ ಹಾಗೂ ಡಿಆರ್ ಡಿಒ ಮೌಲ್ಯಮಾಪನ ಪ್ರಯೋಗಗಳ ಭಾಗವಾಗಿ ಈ ಪ್ರಯೋಗ ನಡೆದಿದೆ.

ಮುಖ್ಯಾಂಶಗಳು

  • ಗರಿಷ್ಠ ಮಟ್ಟದ ವೇಗದ ವೈಮಾನಿಕ ಟಾರ್ಗೆಟ್ ಗಳ ವಿರುದ್ಧ ಈ ಪ್ರಯೋಗ ನಡೆಸಲಾಗಿದ್ದು, ಹಲವು ವಿಧದ ಅಪಾಯಗಳನ್ನು ಕೃತಕವಾಗಿ ಸೃಷ್ಟಿಸಿ ಕ್ಷಿಪಣಿ ವ್ಯವಸ್ಥೆಯನ್ನು ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ. ಕ್ಷಿಪಣಿ ವ್ಯವಸ್ಥೆ ನಿರೀಕ್ಷಿತ ಫಲಿತಾಂಶವನ್ನು ನೀಡಿದೆ.
  • ನಿಖರವಾಗಿ ಗುರಿ ನಾಶ ಮಾಡಬಲ್ಲ ಕ್ಷಿಪಣಿ ಇದಾಗಿದೆ.

ಕ್ಷಿಪಣಿಯ  ವೈಶಿಷ್ಟ್ಯತೆ

  • ಸರ್ಚ್-ಟ್ರ್ಯಾಕ್ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವುದು ಈ QRSAM ಶಸ್ತ್ರಾಸ್ತ್ರ ವ್ಯವಸ್ಥೆಯ ವೈಶಿಷ್ಟ್ಯವಾಗಿದೆ.
  • ಈ ಉಡಾವಣೆಯಲ್ಲಿ ಒಟ್ಟು ಆರು ಪರೀಕ್ಷೆಗಳನ್ನು ನೆರವೇರಿಸಲಾಗಿದ್ದು,ವಾಯು ಪ್ರದೇಶದ ಮೂಲಕ ಎದುರಾಗಬಹುದಾದ ಅನೇಕ ಅಪಾಯಕಾರಿ ಗುರಿಗಳನ್ನು ಹೊಡೆದುರುಳಿಸುವ ಈ ಕ್ಷಿಪಣಿ ವ್ಯವಸ್ಥೆಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಯಿತು.
  • ಚಲನೆಯ ಸಮಯದಲ್ಲಿಯೂ ಈ ಕ್ಷಿಪಣಿ ವ್ಯವಸ್ಥೆಯಯ ಕಾರ್ಯಾಚರಣೆ ಸಾಧ್ಯವಾಗಿಸುವುದು ಮತ್ತು ಅಪಾಯಗಳನ್ನು ಪತ್ತೆ ಹಚ್ಚಿ ಅವುಗಳ ನಿಗಾ ಇಡುವ ವೈಶಿಷ್ಟ್ಯವನ್ನು ಹೊಂದಿದೆ.