Published on: December 1, 2021
ಹೆರಾನ್ ಡ್ರೋನ್
ಹೆರಾನ್ ಡ್ರೋನ್
ಸುದ್ಧಿಯಲ್ಲಿ ಏಕಿದೆ? ಇಸ್ರೇಲ್ ನಿರ್ಮಿತ ವಿಧ್ವಂಸಕ ಹೆರಾನ್ ಡ್ರೋನ್ ಕೊನೆಗೂ ಭಾರತೀಯ ಸೇನೆಯ ಬತ್ತಳಿಕೆ ಸೇರಿದ್ದು, ಲಡಾಖ್ ಸೆಕ್ಟರ್ನಲ್ಲಿ ನಿಯೋಜನೆಗೊಳಿಸಲಾಗುತ್ತದೆ
- ಈ ಹಿಂದೆಯೇ ಭಾರತ ಸರ್ಕಾರ (Indian Govt.)ಭಾರತೀಯ ಸೇನಾ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಲು ಸುಮಾರು 500 ಕೋಟಿ ರೂಗಳ ಉಪಕರಣಗಳು ಮತ್ತು ವ್ಯವಸ್ಥೆಗಳನ್ನು ಖರೀದಿಗೆ ಮುಂದಾಗಿತ್ತು. ಅದರಂತೆ ಇಸ್ರೇಲ್ ನಿಂದ ಹೆರಾನ್ ಡ್ರೋನ್ ಗಳನ್ನು ಮತ್ತು ಇತರೆ ಕ್ಷಿಪಣಿಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು.
- ಲಡಾಖ್ ಸೆಕ್ಟರ್‌ನಲ್ಲಿ ಚೀನಾದ ಚಟುವಟಿಕೆಗಳ ಮೇಲೆ ಕಣ್ಣಿಡಲು ಇಸ್ರೇಲ್ ತುರ್ತು ಸಂಗ್ರಹಣೆ ಷರತ್ತಿನ ಅಡಿಯಲ್ಲಿ ಸುಧಾರಿತ ಹೆರಾನ್ ಡ್ರೋನ್‌ಗಳನ್ನು ತಲುಪಿಸಿರುವುದರಿಂದ ಭಾರತೀಯ ಸೇನೆಯ ಕಣ್ಗಾವಲು ಸಾಮರ್ಥ್ಯಗಳು ಹೆಚ್ಚಿನ ಉತ್ತೇಜನವನ್ನು ಪಡೆದಂತಾಗಿದೆ.
- ಹೆರಾನ್ ಡ್ರೋನ್‌ಗಳು ಅತ್ಯಾಧುನಿಕವಾಗಿದ್ದು, ಇದುವರೆಗೆ ಬಳಕೆ ಮಾಡುತ್ತಿದ್ದ ಡ್ರೋನ್‌ಗಳಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿವೆ. ಅದರಲ್ಲೂ, ಇವುಗಳಲ್ಲಿ ಅಳವಡಿಸಿರುವ ಆ್ಯಂಟಿ ಜಾಮಿಂಗ್ ವ್ಯವಸ್ಥೆಯು ವಿದೇಶಿ ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿದೆ.