Published on: December 25, 2021
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರತಿಭೆ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರತಿಭೆ
ಸುದ್ಧಿಯಲ್ಲಿ ಏಕಿದೆ ? ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)ನಲ್ಲಿ ವಿಶ್ವದ ಅಗ್ರ ಐದು ನಗರಗಳಲ್ಲಿ ಬೆಂಗಳೂರು 5ನೇ ಸ್ಥಾನ ಪಡೆದಿದೆ. ಮೊದಲ ನಾಲ್ಕು ಯುಎಸಎಯ ನಗರಗಳಾಗಿವೆ. ಶ್ರೇಯಾಂಕ ನೀಡಿಕೆ ಅಗ್ರ 50 AI ನಗರಗಳಲ್ಲಿ ಒಂದಾಗಿದೆ, ಇದನ್ನು ಟೈಡ್ ಫ್ರೇಮ್‌ವರ್ಕ್‌ನಿಂದ ಅಳೆಯಲಾಗಿದ್ದು, ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂ (HBR)ನಲ್ಲಿ ಪಟ್ಟಿಮಾಡಲಾಗಿದೆ.
ಟಾಪ್ 4 ನಗರಗಳು:
- ಮೊದಲ ನಾಲ್ಕು ನಗರಗಳು ಸ್ಯಾನ್ ಫ್ರಾನ್ಸಿಸ್ಕೋ, ನ್ಯೂಯಾರ್ಕ್, ಬೋಸ್ಟನ್ ಮತ್ತು ಸಿಯಾಟಲ್. ವೈವಿಧ್ಯತೆ ಮತ್ತು ಪ್ರತಿಭೆ ವಿಷಯಗಳಲ್ಲಿ ಶ್ರೇಯಾಂಕ ನೀಡಲಾಗುತ್ತಿದ್ದು, ಬೆಂಗಳೂರು ವಿಶ್ವದ ಎರಡನೇ ಅತಿ ದೊಡ್ಡ AI ಶ್ರೇಯಾಂಕವನ್ನು ಹೊಂದಿದೆ.
ಮಾನ ದಂಡಗಳು
- ನಗರದಲ್ಲಿ ಹೂಡಿಕೆಗಳು, ಪ್ರತಿಭೆಯ ವೈವಿಧ್ಯತೆ, ದೇಶದ ಡಿಜಿಟಲ್ ಅಡಿಪಾಯಗಳ ವಿಕಾಸ (TIDE) ಮೊದಲಾದವು ನಿರ್ಧರಿಸುತ್ತವೆ.
ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂ ನಲ್ಲಿ ಏನಿದೆ ?
- ಜೀವನೋಪಾಯ ನಿರ್ವಹಣೆಯಲ್ಲಿ ಬೆಂಗಳೂರು ಬೇರೆ ನಗರಗಳಿಗೆ ಹೋಲಿಸಿದರೆ ಸ್ವಲ್ಪ ಅಗ್ಗವಾಗಿದೆ. ಜೀವನೋಪಾಯ ಖರ್ಚುವೆಚ್ಚಗಳಿಗೆ, ವೈವಿಧ್ಯಮಯ ಪ್ರತಿಭೆಗಳಿಗೆ ಈ ನಗರ ಉತ್ತಮವಾಗಿದೆ. ಶ್ರೇಯಾಂಕ ಪಟ್ಟಿಯಲ್ಲಿ ಹೈದರಾಬಾದ್, ಜಕಾರ್ತ, ಲಾಗೊಸ್, ನೈರೊಬಿ, ಮೆಕ್ಸಿಕೊ ನಗರ, ಬ್ಯೂನಸ್ ಐರಿಸ್ ಮತ್ತು ಸಾõ ಪಾವೊಲೊ ನಗರಗಳು ಕೂಡ ಇವೆ.
- ಜಾಗತಿಕ ಶ್ರೇಯಾಂಕದಲ್ಲಿರುವ ಭಾರತದ ನಗರಗಳಲ್ಲಿ ದೆಹಲಿ (18 ನೇ ಸ್ಥಾನ), ಹೈದರಾಬಾದ್ (19 ನೇ ಸ್ಥಾನ)ದಲ್ಲಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರತಿಭೆಗಳ ವೈವಿಧ್ಯತೆಯ ವಿಷಯದಲ್ಲಿ ಮುಂಬೈ 27 ನೇ ಸ್ಥಾನದಲ್ಲಿದೆ.