Published on: December 1, 2021

‘ಎನ್ಆರ್ಸಿ’

‘ಎನ್ಆರ್ಸಿ’

ಸುದ್ಧಿಯಲ್ಲಿ ಏಕಿದೆ?  ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯನ್ನು ದೇಶಾದ್ಯಂತ ಜಾರಿಗೊಳಿಸುವ ಕುರಿತು ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರಕಾರ ಲೋಕಸಭೆಗೆ ಮಾಹಿತಿ ನೀಡಿದೆ.

  • ಅಸ್ಸಾಂನಲ್ಲಿ ಮಾತ್ರ ಎನ್‌ಆರ್‌ಸಿ ಜಾರಿಗೊಳಿಸಲಾಗಿದೆ.
  • ಪೌರತ್ವ (ತಿದ್ದುಪಡಿ) ಕಾಯಿದೆ (ಸಿಎಎ)-2019 ಕುರಿತು 2019ರ ಡಿಸೆಂಬರ್‌ 12ರಂದು ಅಧಿಸೂಚನೆ ಹೊರಡಿಸಲಾಗಿದ್ದು, 2020ರ ಜನವರಿ 10ರಿಂದ ಜಾರಿಯಾಗಿದೆ. ಆದರೆ, ಸಿಎಎ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಿದ ಬಳಿಕವೇ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು

ರಾಷ್ಟ್ರೀಯ ಪೌರತ್ವ ನೋಂದಣಿ (NRC) ಅಂದ್ರೆ ಏನು..?

  • ರಾಷ್ಟ್ರೀಯ ಪೌರತ್ವ ನೋಂದಣಿ ಎಂದರೆ, ದೇಶದಲ್ಲಿರುವ ಎಲ್ಲಾ ನಾಗರಿಕರ ದಾಖಲೆ ಸಂಗ್ರಹ ಮಾಡುವ ಪ್ರಕ್ರಿಯೆ. 1955ರ ಪೌರತ್ವ ಕಾಯ್ದೆ ಪ್ರಕಾರ ದೇಶದ ಎಲ್ಲ ನಾಗರಿಕರ ದಾಖಲೆ ಸಂಗ್ರಹ ಮಾಡೋದು ಕಡ್ಡಾಯ.
  • ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನಡೆಸಲು ಕೇಂದ್ರ ಸರ್ಕಾರಕ್ಕೆ ಈ ಕಾಯ್ದೆಯನ್ವಯ ಅಧಿಕಾರವಿದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ವಯ ಲಭ್ಯವಾಗುವ ಮಾಹಿತಿಗಳನ್ನು ರಾಷ್ಟ್ರೀಯ ಪೌರತ್ವ ನೋಂದಣಿಯನ್ವಯ ದಾಖಲು ಮಾಡಿಕೊಳ್ಳಲಾಗುತ್ತದೆ. ಯಾವುದೇ ವ್ಯಕ್ತಿಯ ಹೆಸರನ್ನು ಜನಸಂಖ್ಯಾ ನೋಂದಣಿಯಲ್ಲಿ ದಾಖಲಿಸಬೇಕೋ ಬೇಡವೋ ಅನ್ನೋದನ್ನು ಸ್ಥಳೀಯ ಸರ್ಕಾರಿ ಅಧಿಕಾರಿಗಳು ನಿರ್ಧರಿಸುತ್ತಾರೆ.

ಎನ್‌ಆರ್‌ಸಿ ಅನ್ವಯ ಪೌರತ್ವ ಹೇಗೆ ನಿರ್ಧರಿತವಾಗುತ್ತೆ..?

  • 2009ರ ಪೌರತ್ವ ನೀತಿಯನ್ವರ ಎಲ್ಲರ ಪೌರತ್ವ ನಿರ್ಧಾರವಾಗುತ್ತೆ. ಈ ನೀತಿಗಳನ್ನು 1955ರ ಪೌರತ್ವ ಕಾಯ್ದೆಯನ್ವಯ ರೂಪಿಸಲಾಗಿದೆ.
  • ಈ ದೇಶದ ಪ್ರಜೆಗಳಾಗಲು ಐದು ಮಾರ್ಗಗಳಿವೆ. 1. ಭಾರತದಲ್ಲೇ ಹುಟ್ಟಿದವರಿಗೆ ಸಹಜವಾಗಿಯೇ ಭಾರತದ ಪೌರತ್ವ ಇರುತ್ತೆ. 2. ಭಾರತೀಯ ಮೂಲದವರಿಗೂ ಭಾರತದ ಪೌರತ್ವ ಲಭ್ಯವಾಗುತ್ತೆ. 3. ದಾಖಲಾತಿ ಮೂಲಕ ಪೌರತ್ವ ಪಡೆಯಬಹುದು. 4. ನೈಸರ್ಗಿಕವಾಗಿ ತಮ್ಮ ಪೌರತ್ವ ಸಾಬೀತುಪಡಿಸಬಹುದು. 5. ದೇಶಕ್ಕೆ ಸೇರ್ಪಡೆಯಾಗುವ ಮೂಲಕವೂ ಪೌರತ್ವ ಗಿಟ್ಟಿಸಬಹುದು.