Published on: May 30, 2023

‘ಗಿಗಾಮೂನ್’

‘ಗಿಗಾಮೂನ್’

ಸುದ್ದಿಯಲ್ಲಿ ಏಕಿದೆ? ಚಂದ್ರನ ಮೇಲ್ಮೈನಲ್ಲಿ ಕಪ್ಪು–ಬಿಳುಪು ಹೊರತಾದ ಬಣ್ಣಗಳಿಂದ ಕೂಡಿರುವ ರಚನೆಗಳೂ ಇರುವುದನ್ನು ಸ್ಪಷ್ಟವಾಗಿ ತೋರಿಸುವ ಚಿತ್ರವನ್ನು (ಚಿತ್ರಗಳನ್ನು) ಸೆರೆಹಿಡಿಯಲಾಗಿದೆ. ಈ ಚಿತ್ರವನ್ನು ‘ಗಿಗಾಮೂನ್’ ಎಂದು ಕರೆಯಲಾಗಿದೆ. ಅಮೆರಿಕದ ಖಗೋಳ ಛಾಯಾಗ್ರಾಹಕ ಆ್ಯಂಡ್ರೀವ್ ಮೆಕ್ಕಾರ್ತಿ ಈ ಚಿತ್ರವನ್ನು ಸೆರೆಹಿಡಿದಿದ್ದಾರೆ.

ಮುಖ್ಯಾಂಶಗಳು

  • ಚಂದ್ರನ ಒಟ್ಟು 2.80 ಲಕ್ಷ ಚಿತ್ರಗಳನ್ನು ಸೆರೆಹಿಡಿದು ‘ಗಿಗಾಮೂನ್’ ಚಿತ್ರವನ್ನು ರೂಪಿಸಲಾಗಿದೆ. ಸಾಮಾನ್ಯವಾಗಿ ನಾವು ಸ್ಮಾರ್ಟ್‌ ಫೋನ್ಗಳಲ್ಲಿ, ಡಿಎಸ್ಎಲ್ಆರ್ಗಳಲ್ಲಿ ಸೆರೆಹಿಡಿಯುವ ಚಿತ್ರಗಳ ಪಿಕ್ಸಲ್ ಗಾತ್ರವು, ಹತ್ತಾರು ಮೆಗಾಪಿಕ್ಸಲ್ಗಳಲ್ಲಿ ಇರುತ್ತವೆ. ಆದರೆ ಮೆಕ್ಕಾರ್ತಿ ಸೆರೆಹಿಡಿದಿರುವ ಈ ಚಿತ್ರದ ಪಿಕ್ಸಲ್ ಗಾತ್ರವು, ಗಿಗಾಪಿಕ್ಸಲ್ನದ್ದು. ಹೀಗಾಗಿಯೇ ಈ ಚಿತ್ರವನ್ನು ‘ಗಿಗಾಮೂನ್’ ಎಂದು ಕರೆಯಲಾಗಿದೆ.

ಈ ಚಿತ್ರದ ವಿಶೇಷತೆಗಳು

  • ಚಂದ್ರನ ಬೇರೆ ಬೇರೆ ಭಾಗಗಳಲ್ಲಿ ಇರುವ ಘನೀಕರಿಸಿದ ಮಿಥೇನ್ನ ಮೇಲ್ಮೈ ಈ ಚಿತ್ರದಲ್ಲಿ ಕಾಣುತ್ತದೆ. ಅದು ನೀಲಿ ಬಣ್ಣದಲ್ಲಿದೆ. ಅದೇ ರೀತಿ ಕೆಂಪು ಬಣ್ಣದ ಖನಿಜ ವಸ್ತುಗಳೂ ಕಾಣುತ್ತವೆ. ಚಂದ್ರನ ಕುಳಿಗಳು, ಕಣಿವೆ ಪ್ರದೇ ಶಗಳೂ ಈ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
  • ‘ಈ ಚಿತ್ರವನ್ನು ಸ್ಮಾರ್ಟ್‌ ಫೋನ್ಗಳಲ್ಲಿ ಡೌನ್ಲೋಡ್ಮಾಡಲು ಸಾಧ್ಯವಿಲ್ಲ. ಅತ್ಯಂತ ಶಕ್ತಿಯುತವಾದ ಕಂಪ್ಯೂಟರ್ಗಳಲ್ಲಿ ಡೌನ್ಲೋಡ್ ಮಾಡಿದರೂ, ಅದು ಕ್ರ್ಯಾಶ್ ಆಗುವ ಅಪಾಯವಿರುತ್ತದೆ’ ಎಂದು ಮೆಕ್ಕಾರ್ತಿ ತಮ್ಮ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಈ ‘ಗಿಗಾಮೂನ್’ನ ಕಂಪ್ರೆಸ್ಮಾಡಲಾದ ಕಡತವನ್ನು ಅವರು ಟ್ವೀಟ್ಮಾಡಿದ್ದಾರೆ. ಅದನ್ನು ಯಾರು ಬೇಕಾದರೂ ಡೌನ್ಲೋಡ್ ಮಾಡಿಕೊಳ್ಳಬಹುದು.