Published on: November 3, 2022

ಗ್ರಾಮಾಭಿವೃದ್ದಿಗೆ ಸ್ವಗ್ರಾಮ ಫೆಲೋಶಿಪ್

ಗ್ರಾಮಾಭಿವೃದ್ದಿಗೆ ಸ್ವಗ್ರಾಮ ಫೆಲೋಶಿಪ್

ಸುದ್ದಿಯಲ್ಲಿ ಏಕಿದೆ?

ದೇಶದಲ್ಲೇ ಮೊದಲ ಬಾರಿಗೆ ಗ್ರಾಮಾಭಿವೃದ್ಧಿ ಗ್ರೂಪ್ ಫೆಲೋಶಿಪ್ ಕರ್ನಾಟಕ ರಾಜ್ಯದಲ್ಲಿ ಘೋಷಣೆಯಾಗಿತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ರಾಜ್ಯೋತ್ಸವದ ಹಿನ್ನೆಲೆಯಲ್ಲಿ ‘ನಮ್ಮ ಗ್ರಾಮ ನಮ್ಮ ಹೆಮ್ಮೆ’ ಪರಿಕಲ್ಪನೆಯಡಿ ಫೆಲೋಶಿಪ್ ಯೋಜನೆ ರೂಪಿಸಿದೆ.

ಮುಖ್ಯಾಂಶಗಳು

  • ಆತ್ಮ ನಿರ್ಭರ್ ಗ್ರಾಮಗಳ ಸೃಷ್ಟಿಯೇ ಇದರ ಪ್ರಮುಖ ಆಶಯವಾಗಿದೆ.
  • ಫೆಲೋಶಿಪ್ ಗಾಗಿ ವಿಶ್ವವಿದ್ಯಾಲಯದ ಜೊತೆಗೆ ಯೂಥ್ ಫಾರ್ ಸೇವಾ, ಚಾಣಕ್ಯ ವಿವಿ, ಕುವೆಂಪು ವಿವಿ ಅಬ್ದುಲ್ ನಜೀರ್ ಸಾಬಮತ್ತು ಪ್ರಜಾಪ್ರವಾಹ ಅಧ್ಯಯನ ಪೀಠಗಳು ಕೈಜೋಡಿಸಿವೆ.
  • ಪ್ರಯೋಜನ: ರಾಜ್ಯಾದ್ಯಂತ ಗ್ರಾಮಸ್ಥರು ಅರ್ಜಿ ಸಲ್ಲಿಸಬಹುದು. ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿದರೆ ವಾರ್ಷಿಕ ೫೦ ಸಾವಿರ ರೂ. ಮತ್ತು ೩ ಜನರ ತಂಡಕ್ಕೆ ಮಾಸಿಕ ಒಬ್ಬರಿಗೆ ೫ ಸಾವಿರ ರೂ. ಆರ್ಥಿಕ ನೆರವು ಸಿಗಲಿದೆ.

ಏನಿದು ಯೋಜನೆ?

  • ಈ ಹಿಂದೆ ಕೇಂದ್ರ ಸರ್ಕಾರದ ಗ್ರಾಮವಿಕಾಸ ಯೋಜನೆಯಡಿ ಒಬ್ಬರಿಗಷ್ಟೇ ಯಾವುದೇ ಗ್ರಾಮದ ಅಭಿವೃದ್ಧಿ ಫೆಲೋಶಿಪ್ ಪಡೆಯಲು ಅವಕಾಶವಿತ್ತು.
  • ಇದೆ ಮೊದಲ ಬಾರಿಗೆ ಜನರ ಸಹಭಾಗಿತ್ವದಲ್ಲೇ ಅಭಿವೃದ್ಧಿ ಚಿಂತನೆ ಬೆಳೆಸುವ ಉದ್ದೇಶದಿಂದ ಆಯಾ ಗ್ರಾಮಸ್ಥರ ಗುಂಪಿಗೆ ಫೆಲೋಶಿಪ್ ನೀಡುವ ಯೋಜನೆ ರೂಪಿಸಲಾಗಿದೆ.
  • ಇದರಡಿ ಮೂರು ಜನರ ಗುಂಪು ಗ್ರಾಮಸ್ಥರ ಸಹಭಾಗಿತ್ವಕ್ಕೆ ಪ್ರೇರಕ ಶಕ್ತಿಗಳಾಗಿ ಕೆಲಸ ಮಾಡಬೇಕಿದ್ದು, ಪ್ರತಿ ವರ್ಷ ಗುಂಪಿನ ಕಾರ್ಯ ಚಟುವಟಿಕೆ ಆಧಾರದಲ್ಲಿ ಆರ್ಥಿಕ ನೆರವು ಸಿಗಲಿದೆ.
  • ಜೊತೆಗೆ ಸಮರ್ಥವಾಗಿ ಅಭಿವೃದ್ಧಿಗೆ ಮುಂದಾದ ತಂಡಕ್ಕೆ ಸಿಎಸ್ ಆರ್ ನಿಧಿ ಸೇರಿದಂತೆ ಸರ್ಕಾರೇತರ ಆರ್ಥಿಕ ಮೂಲಗಳ ಸಹಕಾರಕ್ಕೂ ಅವಕಾಶ ಕಲ್ಪಿಸಲಾಗುತ್ತದೆ.
  • ದೇಶಕ್ಕೆ ವಿಸ್ತರಣೆಯ ಗುರಿ : ಆರಂಭಿಕವಾಗಿ ರಾಜ್ಯಾದ್ಯಂತ ಎಲ್ಲ ಗ್ರಾಮಗಳಿಂದಲೂ ನವೆಂಬರ್ ೨ ರಿಂದ ಅರ್ಜಿ ಆಹ್ವಾನಿಸಲಾಗಿದ್ದು, ೧೦೦ ಗುಂಪುಗಳನ್ನು ಆಯ್ಕೆ ಮಾಡಲಾಗುವುದು. ನಾನಾ ಮಾನದಂಡಗಳ ಅನ್ವಯ ಅಮೃತ ಮಹೋತ್ಸವ ಹಿನ್ನೆಲೆ ೭೫ ಗ್ರಾಮಗಳಿಗೆ ಅವಕಾಶ ನೀಡಲಾಗುತ್ತದೆ.
  • ಉದ್ದೇಶ: ಇದರಡಿ ಗ್ರಾಮಗಳ ಕೇವಲ ಭೌತಿಕ ಅಭಿವೃದ್ಧಿ ಮಾತ್ರವಲ್ಲದೆ ಸ್ಥಳೀಯ ಸಂಸ್ಕೃತಿ, ಜನರ ನಡುವೆ ಸಂಬಂಧ ಗಟ್ಟಿಗೊಳಿಸಿ‘ನಮ್ಮ ಗ್ರಾಮ ನಮ್ಮ ಹೆಮ್ಮೆ’ ಎಂಬ ಭಾವನೆ ಮೂಡಿಸುವ ಗುರಿ ಹೊಂದಲಾಗಿದೆ.

ತಂಡ ಹೇಗಿರಬೇಕು?

  • ಮೂರು ಜನರ ತಂಡದಲ್ಲಿ ಇಬ್ಬರು ಕಡ್ಡಾಯವಾಗಿ ಆಯಾ ಗ್ರಾಮದಲ್ಲಿ ನೆಲೆಸಿರಬೇಕು. ಅನಿವಾಸಿ ಗ್ರಾಮಸ್ಥರೊಬ್ಬರಿಗೆ ಅವಕಾಶ ನೀಡಲಾಗುವುದು. ಮಹಿಳೆತರಿಗೂ ಅವಕಾಶವಿದೆ ಯುವಜನರಿಗೆ ಆದ್ಯತೆ ನೀಡಲಾಗುವುದು.