Published on: March 17, 2024
ಚುಟುಕು ಸಮಾಚಾರ : 16 ಮಾರ್ಚ್ 2024
ಚುಟುಕು ಸಮಾಚಾರ : 16 ಮಾರ್ಚ್ 2024
- ಕೇಂದ್ರ ಸಾಹಿತ್ಯ ಅಕಾಡೆಮಿ ವಿವಿಧ ಭಾಷೆಗಳ 24 ಕೃತಿಗಳಿಗೆ ಭಾಷಾಂತರ ಪ್ರಶಸ್ತಿಯನ್ನು ಪ್ರಕಟಿಸಿದೆ. ಭಾಷಾಂತರ ಪ್ರಶಸ್ತಿಗೆ ಕನ್ನಡ ವಿಭಾಗದಲ್ಲಿ ಲೇಖಕ ಕೆ.ಕೆ.ಗಂಗಾಧರನ್ ಅವರ ‘ಮಲಯಾಳಂ ಕಥೆಗಳು’ ಕೃತಿ ಆಯ್ಕೆಯಾಗಿದೆ. ಮಲಯಾಳಂ ಭಾಷೆಯ ವಿವಿಧ ಲೇಖಕರ ಸಣ್ಣ ಕತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಈ ಕೃತಿ ರಚಿಸಿದ್ದಾರೆ. ಲೇಖಕಿ ಸುಧಾಮೂರ್ತಿ ಅವರ ‘ಮಕ್ಕಳಿಗಾಗಿ ನನ್ನ ನೆಚ್ಚಿನ ಕತೆಗಳು’ ಕೃತಿಯನ್ನು ಲೇಖಕಿ ನಾಗರತ್ನ ಹೆಗ್ಡೆ ಅವರು ಸಂಸ್ಕೃತಕ್ಕೆ ಭಾಷಾಂತರಿಸಿದ್ದು, ‘ರುಚಿರಾಹ್ ಬಾಲಕಥಾ’ ಕೃತಿಗೆ ಸಂಸ್ಕೃತ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಸಾಹಿತಿ ಕೋಟ ಶಿವರಾಮ ಕಾರಂತ ಅವರ ‘ಚೋಮನದುಡಿ’ ಕೃತಿಯನ್ನು ಕಾಶ್ಮೀರಿ ಭಾಷೆಗೆ ಗುಲ್ಜಾರ್ ಅಹ್ಮದ್ ರಥೇರ್ ಅವರು ‘ಚೂಮ ಸುಂಡ್ ಡೋಲ್’ ಹೆಸರಿನಲ್ಲಿ ಭಾಷಾಂತರಿಸಿದ್ದು, ಈ ಕೃತಿಗೆ ಕಾಶ್ಮೀರಿ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
- ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಅವರು 2023ನೇ ಸಾಲಿನ ‘ವಿಶ್ವ ಸುಂದರಿ’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಲೆಬನಾನನ ಯಾಸ್ಮಿನಾ ಜೈಟೌನ್ ರನ್ನರ್-ಅಪ್ ಆದರು. ನಡೆದ ಸ್ಥಳ: ಭಾರತದ ಮಹಾರಾಷ್ಟ್ರ ರಾಜ್ಯದ ಮುಂಬೈನಲ್ಲಿರುವ ಜಿಯೊವರ್ಲ್ಡ್ ಕನ್ವೆನ್ಷನ್ ಸೆಂಟರ್, ಆವೃತ್ತಿ: 71ನೇ ಆವೃತ್ತಿ, ಭಾಗವಹಿಸಿದ ದೇಶಗಳು: 112 ದೇಶಗಳ ಸುಂದರಿಯರು ಪಾಲ್ಗೊಂಡಿದ್ದರು. ಉಡುಪಿ ಜಿಲ್ಲೆಯ ಇನ್ನಂಜೆ ಮೂಲದ ಸಿನಿ ಶೆಟ್ಟಿ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್, ಮಾಜಿ ವಿಶ್ವ ಸುಂದರಿ ಫಿಲಿಪ್ಪೀನ್ಸ್ ನ ಮೇಗನ್ ಯಂಗ್ ಅವರ ನೇತೃತ್ವದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
- 2070ರ ವೇಳೆಗೆ ಶೂನ್ಯ ಹೊರಸೂಸುವಿಕೆಯ ಗುರಿ ಸಾಧಿಸಲು ಪಳೆಯುಳಿಕೆಯೇತರ ಇಂಧನಗಳ ಬಳಕೆ ಅವಶ್ಯಕ, ಈ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಮತ್ತಷ್ಟು ಗ್ರಾಹಕ ಸ್ನೇಹಿಯಾಗಿಸಲು ಕೇಂದ್ರ ಸರಕಾರವು ಬ್ಯಾಟರಿ ವಿನಿಮಯ ಹೊಸ ನೀತಿ ತಂದಿದೆ. ಈ ಬ್ಯಾಟರಿ ವಿನಿಮಯ ನೀತಿಯ ಉಪಕ್ರಮವು ಫೆಬ್ರುವರಿ 2022ರಲ್ಲಿ ನೀತಿ (NITI) ಆಯೋಗದಲ್ಲಿ ನಡೆದ ಚರ್ಚೆಯ ಪರಿಣಾಮವಾಗಿದೆ.ಬ್ಯಾಟರಿ ವಿನಿಮಯ ಅಥವಾ ಬ್ಯಾಟರಿ ಸ್ವಾಪಿಂಗ್ ಎಂದರೆ ಬ್ಯಾಟರಿ ವಿನಿಮಯವು ಸಾಂಪ್ರದಾಯಿಕ ಇವಿ ಬ್ಯಾಟರಿ ಚಾರ್ಜ್ ಮಾಡುವ ಪದ್ಧತಿಗಿಂತ ಹೆಚ್ಚು ಅನುಕೂಲಕರವಾಗಿದ್ದು ಶಕ್ತಿ ಮುಗಿದಿರುವ ಅಂದರೆ, ಡಿಸ್ಚಾರ್ಜ್ ಆಗಿರುವ ಬ್ಯಾಟರಿಯನ್ನು ಕೊಟ್ಟು ಚಾರ್ಜ್ ಆಗಿರುವ ಬ್ಯಾಟರಿಯನ್ನು ಪಡೆದುಕೊಳ್ಳುವುದೇ ಈ ವ್ಯವಸ್ಥೆಯಾಗಿದೆ.
- ಇತ್ತೀಚೆಗೆ, ಕೇರಳ ರಾಜ್ಯವು ಸಿಸ್ಪೇಸ್ ಎಂಬ ಸರ್ಕಾರಿ ಸ್ವಾಮ್ಯದ OTT ವೇದಿಕೆಯನ್ನು ಪ್ರಾರಂಭಿಸಿದೆ. ಭಾರತದ ಮೊದಲ ಸರ್ಕಾರಿ ಸ್ವಾಮ್ಯದ OTT ಆಗಿದೆ. ನಿರ್ಮಾಪಕರು ಮತ್ತು ಪ್ರದರ್ಶಕರ ಹಿತಾಸಕ್ತಿಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ವೇದಿಕೆಯು ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ಮಾತ್ರ ಸ್ಟ್ರೀಮ್ ಮಾಡುತ್ತದೆ. CSspace ಅನ್ನು ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ (KSFDC) ನಿರ್ವಹಿಸುತ್ತದೆ.
- ಇತ್ತೀಚೆಗೆ, ರಾಜಸ್ಥಾನದ ಪೋಖ್ರಾನ್ನಲ್ಲಿ ಭಾರತದ ಮೂರು ಸೇನೆಗಳ ಅಂದರೆ ಸೇನಾಪಡೆ, ನೌಕಾಪಡೆ ಮತ್ತು ವಾಯುಪಡೆಗಳ ಮಿಲಿಟರಿ ವ್ಯಾಯಾಮ 2024 ರ ಭಾರತ್ ಶಕ್ತಿ ವ್ಯಾಯಾಮ ನಡೆಯಿತು. ಸೇನೆಯ ವಿಶೇಷ ಪಡೆಗಳು, ಭಾರತೀಯ ನೌಕಾಪಡೆಯ ಮಾರ್ಕೋಸ್ ಮತ್ತು ಭಾರತೀಯ ವಾಯುಪಡೆಯ ಗರುಡನೊಂದಿಗೆ ಅಭ್ಯಾಸವು ಪ್ರಾರಂಭವಾಯಿತು.
- ವಿಕ್ರಮಾದಿತ್ಯ ವೇದಿಕ್ ಗಡಿಯಾರ: ಪ್ರಾಚೀನ ಭಾರತೀಯ ಪದ್ದತಿಗಳಂತೆ ಕಾಲಮಾನ ಹಾಗೂ ಪಂಚಾಂಗದ ವಿವರಗಳನ್ನು ಸಾರ್ವಜನಿಕರಿಗೆ ತೋರಿಸಲು ಮಧ್ಯಪ್ರದೇಶದ ಉಜ್ಜಯಿನಿಯ ನಗರದ ಮಧ್ಯಭಾಗದಲ್ಲಿ ಅಳವಡಿಸಿದ್ದ ಬೃಹತ್ ವೇದಿಕ್ ಗಡಿಯಾರದ ಕಾರ್ಯನಿರ್ವಹಣೆ ಮೇಲೆ ಸೈಬರ್ ದಾಳಿ ನಡೆದಿದೆ. ವಿಕ್ರಮಾದಿತ್ಯ ವೇದಿಕ್ ಗಡಿಯಾರವನ್ನು ಉಜ್ಜಯಿನಿಯ ಜಂತರ್ ಮಂತರ್ನಲ್ಲಿ 85 ಅಡಿ ಎತ್ತರದ ಗೋಪುರದ ಮೇಲೆ ಸ್ಥಾಪಿಸಲಾಗಿದೆ. ಫೆಬ್ರುವರಿ ಪ್ರಧಾನಿ ಅವರು ಇದನ್ನು ಸಾರ್ವಜನಿಕರಿಗೆ ಅನಾವರಣಗೊಳಿಸಿದ್ದರು. ವಿಕ್ರಮಾದಿತ್ಯ ವೇದಿಕ್ ಗಡಿಯಾರ ಪ್ರಾಚೀನ ಭಾರತೀಯ ಪದ್ದತಿಗಳಂತೆ ಕಾಲಮಾನ ಹಾಗೂ ಇತರ ವಿವರಗಳನ್ನು ತೋರಿಸುವ ಪ್ರಪಂಚದ ಮೊದಲ ಬೃಹತ್ ಸಾರ್ವಜನಿಕ ಗಡಿಯಾರ ಎಂದು ಹೇಳಲಾಗಿದೆ.