Published on: July 7, 2023

ಚುಟುಕು ಸಮಾಚಾರ – 7 ಜುಲೈ 2023

ಚುಟುಕು ಸಮಾಚಾರ – 7 ಜುಲೈ 2023

  • ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಹಂಪಿಯ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್(ಹಂಪಿ ಮೃಗಾಲಯ)ನಲ್ಲಿ ರಾತ್ರಿ ಸಫಾರಿ ಆರಂಭವಾಗಲಿದೆ ಎಂದು ವರದಿಯಾಗಿದೆ.
  • ವಿಶ್ವ ಪ್ರಸಿದ್ಧ ರಾಮನಗರ ಬೊಂಬೆ ಮತ್ತು ಕೊಪ್ಪಳದ ಕಿನ್ನಾಳ ಆಟಿಕೆಗಳ ಮಾದರಿಯಲ್ಲಿ ತಯಾರಾಗಿರುವ ‘ಮಂಗಳೂರು ಬೊಂಬೆ’ಗಳು ಅಚ್ಚುಗಳ ಬಳಕೆಯೊಂದಿಗೆ ತಂತ್ರಜ್ಞಾನ ಬಳಸಿ ಹೊಸ ಸ್ಪರ್ಶ ನೀಡಿ ಬೊಂಬೆಗಳು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.
  • ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ಹಾಗೂ ಬಳಕೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಿಂದ ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದಾರೆ.
  • ಹರಿಯಾಣ ಸರ್ಕಾರವು ಅವಿವಾಹಿತರಿಗೆ ಮಾಸಿಕ ರೂ.2750 ಭತ್ಯೆ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ವಾರ್ಷಿಕ ರೂ. 1.80 ಲಕ್ಷಕ್ಕಿಂ ತ ಕಡಿಮೆ ಆದಾಯ ಇರುವ 45 –60 ವಯಸ್ಸಿನ ಅವಿವಾಹಿತರಿಗೆ ಈ ಯೋಜನೆ ಅನ್ವಯವಾಗಲಿದೆ. ವಾರ್ಷಿ ಕ ರೂ.1.80 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ, 45–60 ವರ್ಷದ ಅವಿವಾಹಿತ ಮಹಿಳೆಯರು ಹಾಗೂ ಪುರುಷರಿಗೆ ಮಾಸಿಕವಾಗಿ ರೂ.2,750 ನೀಡಲಾಗುತ್ತದೆ. ಅಲ್ಲದೇ ವಾರ್ಷಿಕ ಆದಾಯ ರೂ.3 ಲಕ್ಷಕ್ಕಿಂತ ಕಡಿಮೆ ಇರುವ 40–60 ವರ್ಷ ದೊಳಗಿನ ವಿಧವೆಯರೂ ಕೂಡ ಇಷ್ಟೇ ಮೊತ್ತದ ಭತ್ಯೆ ಪಡೆಯಲಿದ್ದಾರೆ. ಈ ಹಣದಿಂದ ಅವರಿಗೆ ತಮ್ಮ ವೈಯಕ್ತಿಕ ಖರ್ಚುಗಳು ನಿಭಾಯಿಸಲು ಉಪಯೋಗವಾಗಲಿದೆ. ಕಡಿಮೆ ಆದಾಯ ಇರುವವರಿಗೆ ಘನತೆಯುಕ್ತ ಬದುಕು ಸಾಗಿಸಲು ನೆರವಾಗಲಿದೆ.