Published on: November 16, 2022

ಜನಜಾತಿಯ ಗೌರವ್ ದಿವಸ್

ಜನಜಾತಿಯ ಗೌರವ್ ದಿವಸ್

buy Ivermectin ivermectin ಸುದ್ದಿಯಲ್ಲಿ ಏಕಿದೆ?

http://hometownheroesrun.com/lib/engineering-thermodynamics-of-thermal-radiation-for-solar-power-utilization ಭಾರತ ಸರ್ಕಾರವು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ಅನ್ನು ಪ್ರತಿ ವರ್ಷ ಜನಜಾತಿಯ ಗೌರವ್ ದಿವಸ್ ಎಂದು ಆಚರಿಸಲಾಗುವುದು ಎಂದು ಘೋಷಿಸಿದೆ.

ಮುಖ್ಯಾಂಶಗಳು

  • ಭವ್ಯ ಭಾರತಕ್ಕಾಗಿ ಬುಡಕಟ್ಟು ಸಬಲೀಕರಣ ತುಂಬಾ ಮುಖ್ಯವಾದದ್ದು, ಏಕೆಂದರೆ ಜನಜಾತಿಯ ಗೌರವ್ ದಿವಸ್ ಭಾರತದ ಭವ್ಯವಾದ ಬುಡಕಟ್ಟು ಪರಂಪರೆ, ಸಂಸ್ಕೃತಿ ಮತ್ತು ಸಾಧನೆಗಳನ್ನು ಸಂಕೇತಿಸುತ್ತದೆ.
  • ಇದು ಆತ್ಮನಿರ್ಭರ್ ಭಾರತ್‌ನ ಸ್ಪೂರ್ತಿಯಿಂದ ಉತ್ತೇಜಿಸಲ್ಪಟ್ಟಿದೆ‌ ಅಲ್ಲದೇ ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನವನ್ನು‌ ಇದು ಬಲಪಡಿಸುತ್ತದೆ.
  • ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಭಾರತದ ಬುಡಕಟ್ಟು ಪರಂಪರೆಯ ಸಂಪ್ರದಾಯಗಳು ಮತ್ತು ಅದರ ವೀರರ ಕಥೆಗಳಿಗೆ ಹೆಚ್ಚು ಮಹತ್ವದ ಮತ್ತು ಭವ್ಯವಾದ ಗುರುತನ್ನು ಒದಗಿಸುವುದಾಗಿ ದೇಶವು ನಿರ್ಧರಿಸಿದೆ.
  • ಮ್ಯೂಸಿಯಂಗಳ ಸ್ಥಾಪನೆ : ಬುಡಕಟ್ಟು ಸಮುದಾಯದ ಸ್ವತಂತ್ರ ಹೋರಾಟಗಾರರ ಬಲಿದಾನ ಸ್ಮರಣೆಗೆ ಮೀಸಲಾದ ಮ್ಯೂಸಿಯಂ ಅನ್ನು ದೇಶದಾದ್ಯಂತ ನಿರ್ಮಿಸಲಾಗುತ್ತಿದೆ.

ಕಾರಣ :

  • ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಸಮುದಾಯದ ಸಾಧನೆಗೆ ಭಗವಾನ್ ಬಿರ್ಸಾ ಮುಂಡಾ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲು

ಉದ್ದೇಶ

  • ಈ ಆಚರಣೆಗಳು ಭಗವಾನ್ ಬಿರ್ಸಾ ಮುಂಡಾ ಅವರಂತಹ ಕೆಚ್ಚೆದೆಯ ಬುಡಕಟ್ಟು ನಾಯಕರ ಸ್ವಾತಂತ್ರ್ಯ ಹೋರಾಟವನ್ನು ಎತ್ತಿ ತೋರಿಸುತ್ತವೆ. ಈ ಆಚರಣೆಗಳು ದೇಶಕ್ಕಾಗಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗವನ್ನು ಗುರುತಿಸಿ, ಅವರ ಪರಂಪರೆಯನ್ನು ಮುಂದುವರಿಸಿ, ಬುಡಕಟ್ಟು ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಿ ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವುದು.

ಬಿರ್ಸಾ ಮುಂಡಾ

  • ಜನನ : ನವೆಂಬರ್ 15, 1875.
  • ಸ್ಥಳ: ರಾಂಚಿಯ ಬಳಿಯ ಉಳಿಹಾಟು
  • ಮುಂಡಾ ಬುಡಕಟ್ಟು ಸಮುದಾಯಕ್ಕೆ ಸೇರಿದವರು.
  • ಮುಂಡಾ ಬುಡಕಟ್ಟು ಸಮುದಾಯದವರು ಮುಖ್ಯವಾಗಿ ದಕ್ಷಿಣ ಮತ್ತು ಪೂರ್ವ ಛೋಟಾನಾಗ್‌ಪುರ ಪ್ರಸ್ಥಭೂಮಿಯಲ್ಲಿ ಕಾಣಸಿಗುತ್ತಾರೆ.
  • ಬಿರ್ಸಾ ಮುಂಡಾ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸುಧಾರಕ. ದೇಶದ ಪ್ರಮುಖ ಬುಡಕಟ್ಟು ನಾಯಕ. ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ಶೋಷಕ ವ್ಯವಸ್ಥೆಯ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಬುಡಕಟ್ಟು ನಾಯಕ.
  • 1893 – 94ರಲ್ಲಿ ಬ್ರಿಟಿಷ್ ಸರ್ಕಾರ ಎಲ್ಲಾ ಕಾಡುಗಳನ್ನೂ ಮತ್ತು ಅವುಗಳಲ್ಲಿದ್ದ ಹಳ್ಳಿಗಳನ್ನೂ ರಕ್ಷಿತ ಅರಣ್ಯ ಪ್ರದೇಶಗಳೆಂದು ಘೋಷಿಸಿತು. ಆ ಮೂಲಕ ಆದಿವಾಸಿಗಳ ಎಲ್ಲಾ ಹಕ್ಕುಗಳನ್ನೂ ಕಿತ್ತುಕೊಂಡಿತು. ಬ್ರಿಟಿಷರ ಈ ನೀತಿಯ ವಿರುದ್ದ ಬಿರ್ಸಾ ಸ್ವಾತಂತ್ರ ಸಂಗ್ರಾಮವಾಗಿ ರೂಪಿಸುವಲ್ಲಿ ಯಶಸ್ವಿಯಾದ. ಬ್ರಿಟಿಷರಿಂದ, ಭೂಮಾಲೀಕರಿಂದ ಮತ್ತು ವ್ಯಾಪಾರಸ್ಥರಿಂದ ಬಿಡುಗಡೆಯ ಹೋರಾಟಕ್ಕೆ ತನ್ನ ಜನರನ್ನು ಸಜ್ಜುಗೊಳಿಸಿದ.
  • 1894ರ ಅಕ್ಟೋಬರ್ 1 ರಂದು ಚೋಟಾ ನಾಗ್ಪುರ್ ಎಂಬಲ್ಲಿಗೆ ಬ್ರಹತ್ ಮೆರವಣಿಗೆಗೆ ಕರೆ ನೀಡಿದ. “ಉಳುವವನೇ ಭೂಮಿಯ ಒಡೆಯನಾಗಬೇಕು”, ‘ಮಹಾರಾಣಿಯ ಆಡಳಿತವನ್ನು ಅಂತ್ಯಗಾಣಿಸಬೇಕು’ ಎಂಬ ಎರಡು ಉದ್ದೇಶಗಳು ಈ ಮೆರವಣಿಗೆಯ ಪ್ರಮುಖ ಅಂಶಗಳಾಗಿದ್ದವು. ಬಿರ್ಸಾನ ಕರೆಗೆ ಆದಿವಾಸಿಗಳು ಸ್ಪಂದಿಸಿ ಮೆರವಣಿಗೆ ಯಶಸ್ವಿಯಾಯಿತು.