Published on: September 28, 2023

‘ಡಿಸೀಸ್ ಎಕ್ಸ್’

‘ಡಿಸೀಸ್ ಎಕ್ಸ್’

ಸುದ್ದಿಯಲ್ಲಿ ಏಕಿದೆ? 1919 – 20ರಲ್ಲಿ ವಿಶ್ವವನ್ನು ಆವರಿಸಿದ್ದ ಸ್ಪ್ಯಾನಿಷ್ ಫ್ಲೂ ಮಾದರಿಯಲ್ಲೇ ಹೊಸ ವೈರಸ್ ದಾಳಿ ಇಡಲಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ)ಇದನ್ನು ‘ಡಿಸೀಸ್ ಎಕ್ಸ್’ ಎಂದು ಕರೆದಿದೆ.

  • ಈ ವೈರಸ್‌ ಸಂಬಂಧ ಬ್ರಿಟನ್‌ನ ಲಸಿಕಾ ಕಾರ್ಯಪಡೆ ಮುಖ್ಯಸ್ಥರಾಗಿದ್ದ ಕೇಟ್ ಬಿಂಗ್‌ಹಾಮ್ ಅವರು ಸಮಗ್ರ ಮಾಹಿತಿ ನೀಡಿದ್ದಾರೆ.

ಮುಖ್ಯಾಂಶಗಳು 

  • ಇದು ಹೊಸ ಮಾದರಿಯ ರೋಗಾಣು ಆಗಿದ್ದು ವೈರಸ್, ಬ್ಯಾಕ್ಟೀರಿಯಾ ಅಥವಾ ಫಂಗಸ್.. ಯಾವುದೇ ಮಾದರಿಯಲ್ಲಿ ಇರಬಹುದಾಗಿದೆ.
  • ಈ ರೋಗದ ವಿರುದ್ದ ಹೋರಾಡಲು ಯಾವುದೇ ಚಿಕಿತ್ಸೆ ಲಭ್ಯ ಇಲ್ಲ.
  • 2023 ಮೇ ತಿಂಗಳಲ್ಲಿ ಡಬ್ಲ್ಯುಎಚ್​ಒ ತನ್ನ ವೆಬ್​ಸೈಟ್​ನಲ್ಲಿ ಮೊದಲ ಬಾರಿಗೆ ಎಕ್ಸ್ ಕಾಯಿಲೆ ಬಗ್ಗೆ ಉಲ್ಲೇಖಿಸಿತ್ತು.
  • ವ್ಯಾಧಿಯು ಕರೊನಾಗಿಂತಲೂ ಮಾರಕವಾದ ಇನ್ನೊಂದು ಸಾಂಕ್ರಾಮಿಕತೆಗೆ ಕಾರಣವಾಗುವ ಸಾಧ್ಯತೆಯಿದೆ. ಇದು ಅಂದಾಜು 5 ಕೋಟಿ ಜನರನ್ನು ಬಲಿ ತೆಗೆದುಕೊಳ್ಳುವ ಅಪಾಯವಿದೆ.
  • ನಮ್ಮ ವಿಜ್ಞಾನಿಗಳು ಈವರೆಗೆ ವಿಶ್ವಾದ್ಯಂತ 25 ವೈರಸ್ ಕುಟುಂಬಗಳನ್ನಷ್ಟೇ ಗುರ್ತಿಸಿದ್ದಾರೆ. ಆದರೆ, 10 ಲಕ್ಷಕ್ಕೂ ಹೆಚ್ಚು ವೈರಸ್ ಉಪತಳಿಗಳಿದ್ದು, ಅವುಗಳನ್ನು ಗುರ್ತಿಸುವ ಕೆಲಸವೇ ಆಗಿಲ್ಲ. ಈ ಪೈಕಿ ಕೆಲವು ವೈರಾಣುಗಳು ಒಂದು ಜೀವ ವೈವಿದ್ಯತೆಯಿಂದ ಮತ್ತೊಂದಕ್ಕೆ ಅತಿ ಸುಲಭವಾಗಿ ಹರಡುವ ಸಾಮರ್ಥ್ಯ ಹೊಂದಿವೆ

ರೂಪಾಂತರಕ್ಕೆ ಕಾರಣ

  • ಕೋವಿಡ್-19 ಚಿಕಿತ್ಸೆಗೆ ವ್ಯಾಪಕವಾಗಿ ಬಳಸಲಾದ ವೈರಲ್​ ವಿರೋಧಿ ಔಷಧ ಮೊಲ್ನುಪಿರಾವಿರ್, ಸಾರ್ಸ್-ಸಿಒವಿ-2 ವೈರಸ್ ರೂಪಾಂತರಗಳ ವಿಧಾನಕ್ಕೆ ಕಾರಣವಾಗಿರ ಬಹುದು ಎಂದು ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನವೊಂದು ಅಭಿಪ್ರಾಯ ಪಟ್ಟಿದೆ.

ಪರಿಸರ ನಾಶದಿಂದಲೂ ಹಬ್ಬುವ ವ್ಯಾಧಿ

  • ಅರಣ್ಯ ನಾಶ, ಆಧುನಿಕ ಕೃಷಿ ವಿಧಾನಗಳು ಮತ್ತು ಜೌಗು ಪ್ರದೇಶಗಳ ನಾಶದಿಂದಾಗಿ ವೈರಸ್​ಗಳು 1 ತಳಿಯಿಂದ ಇನ್ನೊಂದು ತಳಿಗೆ ವರ್ಗಾವಣೆಗೊಳ್ಳುತ್ತವೆ.