Published on: January 21, 2023

‘ತಾಯಿ ಕಸ್ತೂರ್ ಗಾಂಧಿ’

‘ತಾಯಿ ಕಸ್ತೂರ್ ಗಾಂಧಿ’


Jhālu ಸುದ್ದಿಯಲ್ಲಿ ಏಕಿದೆ? ಕಸ್ತೂರ್ ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್ ಗಾಂಧಿ’ ಕನ್ನಡ ಚಿತ್ರವು ಹತ್ತನೇ ನೊಯಿಡಾ ಅಂತರರಾಷ್ಟ್ರೀ ಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ.


Cradock ರಚನೆ : ಬರಗೂರು ಅವರೇ ಬರೆದ ಕಾದಂಬರಿಯನ್ನು ಆಧರಿಸಿದ ಈ ಚಿತ್ರಕ್ಕೆ ಅವರೇ ಚಿತ್ರಕಥೆ, ಸಂಭಾಷಣೆ ಮತ್ತು ಗೀತೆಗಳನ್ನು ರಚಿಸಿದ್ದಾರೆ.

ಮುಖ್ಯಾಂಶಗಳು

  • ಐದಕ್ಕೂ ಹೆಚ್ಚು ಅಂತರರಾಷ್ಟ್ರೀಯ ಚಿತ್ರೋ ತ್ಸವಗಳಿಗೆ ಆಯ್ಕೆಯಾಗಿ ವಿದೇಶಗಳಲ್ಲಿ ಪ್ರದರ್ಶಿತವಾಗಿದೆ.
  • ದಾದಾ ಸಾಹೇಬ್ ಫಾಲ್ಕೆ ಚಿತ್ರೋ ತ್ಸವದಲ್ಲಿ ತೀರ್ಪುಗಾರರ ವಿಶೇಷ ಮನ್ನಣೆಗೆ ಪಾತ್ರವಾಗಿದೆ.
  • ಅಮೆರಿಕದ ಡಲ್ಲಾಸ್ನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರದ ಸಂಕಲನಕಾರ ಸುರೇಶ್ ಅರಸು ಅವರಿಗೆ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಲಭಿಸಿದೆ.

ಚಿತ್ರದ ವಿಶೇಷತೆಗಳು

  • ಕಸ್ತೂರ್ ಬಾ ಗಾಂಧಿಯವರನ್ನು ಪ್ರಧಾನ ಪಾತ್ರದಲ್ಲಿ ಚಿತ್ರಿಸಿದ ಮೊದಲ ಚಿತ್ರವೆಂಬ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ. ‘ಕಸ್ತೂರ್ ಬಾ ಗಾಂಧಿಯವರ ಮೂಲಕ ಗಾಂಧೀಜಿಯವರನ್ನು ಕಂಡುಕೊಳ್ಳುವ ಒಳನೋಟವನ್ನು ಈ ಚಿತ್ರವು ಕೊಡುವುದರ ಜೊತೆಗೆ ಇಬ್ಬರ ಮುಖಾಮುಖಿ ಮತ್ತು ಅನುಸಂಧಾನದ ನೆಲೆಗಳನ್ನು ಅನಾವರಣಗೊಳಿಸುತ್ತದೆ.
  • ಅಂಬೇಡ್ಕರ್–ಗಾಂಧಿ ಮತ್ತು ಕಸ್ತೂರ್ಬಾ– ಅಂಬೇಡ್ಕರ್ ಅವರ ಭೇಟಿಯ ಅಪೂರ್ವ ಸಂದರ್ಭಗಳನ್ನು ಇಲ್ಲಿ ನಿರೂಪಿಸಲಾಗಿದೆ.
  • ಬಾಲ್ಯದಿಂದ ಮುಪ್ಪಿನವರೆಗಿನ ಚಿತ್ರಣವನ್ನು ಚಿತ್ರದಲ್ಲಿ ಕೊಡಲಾಗಿದೆ’.