Published on: September 16, 2023

‘ಸಮುದ್ರಯಾನ’ ಯೋಜನೆ

‘ಸಮುದ್ರಯಾನ’ ಯೋಜನೆ

ಸುದ್ದಿಯಲ್ಲಿ ಏಕಿದೆ? ಭಾರತೀಯ ವಿಜ್ಞಾನಿಗಳು ಮಹತ್ವಾಕಾಂಕ್ಷಿಯ ‘ಸಮುದ್ರಯಾನ’ ಯೋಜನೆಗೆ ಸಿದ್ಧತೆ ಆರಂಭಿಸಿದ್ದು, ‘ಮತ್ಸ್ಯ- 6000’ ಸಬ್‌ಮರ್ಸಿಬಲ್‌ ನೌಕೆ ಮೂಲಕ ಮೂವರು ಮಾನವರನ್ನು ಸಮುದ್ರದಾಳದ 6 ಕಿ.ಮೀ. ದೂರಕ್ಕೆ ಕರೆದೊಯ್ಯುತ್ತಿದ್ದಾರೆ. ಆಳವಾದ ಸಾಗರವನ್ನು ಅನ್ವೇಷಿಸಲು ಇದು ಭಾರತದ ಮೊದಲ ಮಾನವಸಹಿತ ಮಿಷನ್ ಆಗಿದೆ.

ಮುಖ್ಯಾಂಶಗಳು

 • ಕೇಂದ್ರ ಸರಕಾರ ‘ನೀಲಿ ಆರ್ಥಿಕತೆ’ (ಬ್ಲ್ಯೂ ಎಕನಾಮಿ) ಭಾಗವಾಗಿ ಈ ಯೋಜನೆ ಕೈಗೊಂಡಿದೆ.
 • ಮತ್ಸ್ಯ 6000’ ವಾಹನವನ್ನು ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಚೆನ್ನೈನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT) ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸುತ್ತಿದೆ
 • ನೋಡಲ್ ಸಚಿವಾಲಯ: ಭೂ ವಿಜ್ಞಾನ ಸಚಿವಾಲಯ (MoES)

ಉದ್ದೇಶ

 • ಸಮುದ್ರ ಆಳ ಅಂತರಿಕ್ಷಕ್ಕಿಂತಲೂ ನಿಗೂಢ ಹಾಗೂ ಅಪಾಯಕಾರಿ. ಸಾಗರದಾಳದಲ್ಲಿನ ಜೀವವೈವಿಧ್ಯ ಹಾಗೂ ಖನಿಜ ನಿಕ್ಷೇಪಗಳ ಕುರಿತು ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳುವುದು.

ಏನಿದು ಸಮುದ್ರಯಾನ?

 • ಇದು ಪರಿಪೂರ್ಣವಾಗಿ ಆತ್ಮನಿರ್ಭರ ಹೆಜ್ಜೆ. ದೇಶೀಯವಾಗಿ ತಯಾರಿಸಲಾಗಿರುವ ಸಬ್‌ಮರ್ಸಿಬಲ್‌ ‘ಮತ್ಸ್ಯ 6000’ ನೌಕೆ ಮೂಲಕ ಮೂವರು ಸಾಗರಯಾನಿಗಳನ್ನು ಸಮುದ್ರದಾಳಕ್ಕೆ ಕಳುಹಿಸುವ ಯೋಜನೆ
 • ಇದು. 2.1 ಮೀಟರ್‌ ವ್ಯಾಸದ ವೃತ್ತಾಕಾರದ ಈ ಜಲಾಂತರ್ಗಾಮಿ ಬಲಿಷ್ಠ ಉಕ್ಕಿನಿಂದ ನಿರ್ಮಿತವಾಗಿದೆ. ಬಂಗಾಳಕೊಲ್ಲಿಯಲ್ಲಿ ಸಾಗರ ನಿಧಿ ಹಡಗಿನ ಮೂಲಕ ನಡೆಸಿದ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿ ‘ಸಮುದ್ರಯಾನ’ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ.
 • 2024ರ ಆರಂಭದ ತ್ರೈಮಾಸಿಕದಲ್ಲಿಈ ನೌಕೆಯನ್ನು ಸಮುದ್ರದ 500 ಮೀ. ಆಳಕ್ಕೆ ಇಳಿಸಿ ಮೊದಲ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ.
 • 2026ರ ವೇಳೆಗೆ ಮಾನವರನ್ನು ಸಾಗರದಾಳದ 6 ಕಿ.ಮೀ. ದೂರಕ್ಕೆ ಕರೆದೊಯ್ಯಲಾಗುತ್ತದೆ.
  ಮೂವರು ಪ್ರಯಾಣಿಕರು 12 ಗಂಟೆ ಕಾಲ ಶೋಧ ನಡೆಸಲಿದ್ದಾರೆ.
 • ಯೋಜನೆ ವೆಚ್ಚ: 4100 ಕೋಟಿ ರೂ.

ಏನೇನು ಅನ್ವೇಷಣೆ?

 • ಸಾಮಾನ್ಯವಾಗಿ ಜಲಾಂತರ್ಗಾಮಿ ನೌಕೆಗಳು 300 ರಿಂದ 400 ಮೀ. ಮಾತ್ರ ಸಾಗರದಾಳಕ್ಕೆ ಹೋಗುತ್ತವೆ. ಆದರೆ, ಇವು ಖನಿಜ ನಿಕ್ಷೇಪವಿರುವ ಜಾಗಕ್ಕೆ ತೆರಳಲು ಅಸಮರ್ಥ.ಸಾಗರದಾಳದ 1000 ರಿಂದ 5500 ಮೀಟರ್‌ ಅಡಿಯಲ್ಲಿಹೈಡ್ರೇಟ್‌ಗಳು, ಪಾಲಿಮೆಟಾಲಿಕ್‌ ಮ್ಯಾಂಗನೀಸ್‌, ಹೈಡ್ರೋ- ಥರ್ಮಲ್‌ ಸಲ್ಫೈಡ್‌ ಮತ್ತು ಕೋಬಾಲ್ಟ್‌ ಕ್ರಸ್ಟ್‌ನಂಥ ಸಂಪನ್ಮೂಲಗಳಿದ್ದು, ಇವುಗಳನ್ನು ನೌಕೆ ಪರಿಶೋಧಿಸಲಿದೆ.12 ಕ್ಯಾಮೆರಾಗಳನ್ನೊಳಗೊಂಡ ನೌಕೆ ಸಾಗರ ತಳದಲ್ಲಿಏಳುವ ಭೂಕಂಪದ ಅಲೆಗಳನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ.

ಸಾಗರದಾಳದ ಶೋಧ ಭಾರತಕ್ಕೆ ಏಕೆ ಮುಖ್ಯ?

 • 9 ಕರಾವಳಿ ರಾಜ್ಯಗಳು ಮತ್ತು 1,382 ದ್ವೀಪಗಳಿಗೆ ನೆಲೆಯಾಗಿರುವ ಭಾರತದಲ್ಲಿ7,517 ಕಿ.ಮೀ. ಉದ್ದದ ಕರಾವಳಿ ಪ್ರದೇಶ ಇದೆ. ಒಟ್ಟಾರೆ ಈ ಪ್ರದೇಶ ಮೀನುಗಾರಿಕೆ ಸೇರಿ ಹಲವು ರೀತಿಯಲ್ಲಿಭಾರತದ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದು, ಇದನ್ನು ‘ಬ್ಲ್ಯೂ ಎಕಾನಮಿ’ ಅಂತಲೇ ಕರೆಯಲಾಗುತ್ತದೆ.
 • ದೇಶದ ಶೇ.30 ಮಂದಿಯ ಬದುಕು ಸಮುದ್ರವನ್ನೇ ಅವಲಂಬಿಸಿದೆ. ಬ್ಲ್ಯೂ ಎಕಾನಮಿಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರಕಾರ 2021ರ ಅಕ್ಟೋಬರ್‌ನಲ್ಲಿ ‘ಸಮುದ್ರಯಾನ’ ಯೋಜನೆ ಆರಂಭಿಸಿತು. 2026ರಲ್ಲಿಇದು ಯಶಸ್ವಿಯಾದರೆ, ಭಾರತ ಎಲೈಟ್‌ ಕ್ಲಬ್‌ ಸೇರಲಿದೆ.

ಮತ್ಸ್ಯ 6000 ಎಂದರೇನು?

 • ಇದು ಮಾನವಸಹಿತ ಸಬ್‌ಮರ್ಸಿಬಲ್ ವಾಹನವಾಗಿದ್ದು, ಇದನ್ನು ಚೆನ್ನೈನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT) ಅಭಿವೃದ್ಧಿಪಡಿಸಿದೆ.
 • ಖನಿಜ ಸಂಪನ್ಮೂಲಗಳನ್ನು ಅನ್ವೇಷಿಸಲು ಆಳವಾದ ಸಾಗರದಲ್ಲಿ ಮಾನವರಿಗೆ ಅನುಕೂಲವಾಗುವಂತೆ ಸಮುದ್ರಯಾನ ಮಿಷನ್ ಅಡಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
 • ಇದು ಆಳವಾದ ಸಮುದ್ರದಲ್ಲಿ 12 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ತುರ್ತು ಸಂದರ್ಭದಲ್ಲಿ, ಇದು ಮಾನವ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳೊಂದಿಗೆ 96 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT)

 • NIOT ಅನ್ನು ನವೆಂಬರ್ 1993 ರಲ್ಲಿ ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪಿಸಲಾಯಿತು. NIOT ಅನ್ನು ಆಡಳಿತ ಮಂಡಳಿಯು ನಿರ್ವಹಿಸುತ್ತದೆ ಮತ್ತು ನಿರ್ದೇಶಕರ ನೇತೃತ್ವದಲ್ಲಿರುತ್ತದೆ. ಸಂಸ್ಥೆಯು ಚೆನ್ನೈನಲ್ಲಿದೆ

ನಿಮಗಿದು ತಿಳಿದಿರಲಿ

 • ಸಾಗರಯಾನ ಕೈಗೊಂಡ ದೇಶಗಳು: ಅಮೆರಿಕ, ರಷ್ಯಾ, ಫ್ರಾನ್ಸ್‌, ಜಪಾನ್‌, ಚೀನಾ
 • ಭೂಮಿ ಮೇಲೆ ಶೇ 71ರಷ್ಟು ಹರವಿಕೊಂಡಿರುವ ಜಲರಾಶಿಯಲ್ಲಿ ಇದುವರೆಗೆ ಮನುಷ್ಯ ನೋಡಿದ್ದು ಕೇವಲ ಶೇ 20ರಷ್ಟು ಸಮುದ್ರವನ್ನಷ್ಟೇ!