Published on: November 6, 2021

ಸುದ್ಧಿ ಸಮಾಚಾರ 06 ನವೆಂಬರ್ 2021

ಸುದ್ಧಿ ಸಮಾಚಾರ 06 ನವೆಂಬರ್ 2021

 • ಸುಪ್ರೀಂ ಕೋರ್ಟ್ ಹಾಗೂ ರಾಜ್ಯಗಳ ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ವರ್ಷ ಮೀರಬಾರದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಹೇಳಿದ್ದಾರೆ.
 • ಗಾಂಧೀಜಿ, ಜವಾಹರಲಾಲ್ ನೆಹರು, ವಲ್ಲಭಬಾಯಿ ಪಟೇಲ್ ಸೇರಿದಂತೆ ಅನೇಕ ಸ್ವಾತಂತ್ರ ಹೋರಾಟಗಾರರ ಐತಿಹಾಸಿಕ ಸಂದರ್ಶನ, ಕಾರ್ಯಕ್ರಮಗಳ ಸಂಗ್ರಹವನ್ನು ಖಾಸಗಿ ತೆಕ್ಕೆಗೆ ಒಪ್ಪಿಸಲು ಪ್ರಸಾರ ಭಾರತಿ ಮುಂದಾಗಿದೆ.
 • ಮೂರು ದಿನಗಳ ಗಂಗಾ ಉತ್ಸವ 2021 ಗಂಗಾ ನದಿ ಮತ್ತು ಅದರ ಉಪನದಿಗಳ ಪುನರುಜ್ಜೀವನದ ಬಗ್ಗೆ ಸಕಾರಾತ್ಮಕ ನಿರ್ಣಯಗಳೊಂದಿಗೆ ಮುಕ್ತಾಯಗೊಂಡಿದೆ
 • ಜಮ್ಮು ಮತ್ತು ಕಾಶ್ಮೀರ ಪ್ರಪಂಚದಾದ್ಯಂತ ಕೇಸರಿ ಕೃಷಿಗೆ ಹೆಸರುವಾಸಿಯಾಗಿದೆ. ಇಂದು ಕಾಶ್ಮೀರವು ಭಾರತದಲ್ಲಿ ಕೇಸರಿ ಪ್ರಧಾನ ಉತ್ಪಾದಕವಾಗಿದೆ. ಕೇಸರಿಯನ್ನು ಮುಖ್ಯವಾಗಿ ಶ್ರೀನಗರಕ್ಕೆ ಸಮೀಪವಿರುವ ಪಾಂಪೋರ್ನಲ್ಲಿರುವ ಹೊಲಗಳಲ್ಲಿ ಬೆಳೆಯಲಾಗುತ್ತದೆ. ಪಾಂಪೋರ್ ಅನ್ನು ಕಾಶ್ಮೀರದ ‘ಕೇಸರಿ ಪಟ್ಟಣ’ ಎಂದು ಕರೆಯಲಾಗುತ್ತದೆ.
 • ಬಹು ರಾಷ್ಟ್ರೀಯ ಕಂಪನಿಗಳಿಗೆ ಹೆಚ್ಚು ನ್ಯಾಯಯುತ ತೆರಿಗೆಯನ್ನು ಅಳವಡಿಸುವ ಉದ್ದೇಶದಿಂದ 136 ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಜಾಗತಿಕ ಕಾರ್ಪೊರೇಟ್ ಕಂಪನಿಗಳಿಗೆ ಕನಿಷ್ಠ ಶೇ. 15 ತೆರಿಗೆ ವಿಧಿಸಲು ಇದರಿಂದ ಹಾದಿ ಸುಗಮವಾಗಿದೆ.
 • ಕೊರೊನಾ ವೈರಸ್ ನಿರೋಧಕ ಮಾತ್ರೆ ಮೊಲ್ನುಪಿರವಿರ್ಗೆ ಬ್ರಿಟನ್ ಅನುಮತಿ ನೀಡಿದ್ದು, ಜಗತ್ತಿನಲ್ಲೇ ಸೋಂಕಿನ ವಿರುದ್ಧ ಹೋರಾಡಲು ಮಾತ್ರೆಗಳಿಗೆ ಸಮ್ಮತಿ ಸೂಚಿಸಿದ ಮೊದಲ ರಾಷ್ಟ್ರ ಎಂಬ ಖ್ಯಾತಿಗೆ ಭಾಜನವಾಗಿದೆ.
 • ವಿಶ್ವದ ಬಡ ರಾಷ್ಟ್ರಗಳಿಗೆ ನವೀಕರಿಸಬಹುದಾದ ಮೂಲದ ವಿದ್ಯುತ್ ಅನ್ನು ಪೂರೈಸುವ ವಿಶ್ವ ವಿದ್ಯುತ್ ಗ್ರಿಡ್ ಯೋಜನೆಗೆ ಭಾರತ ಮತ್ತು ಬ್ರಿಟನ್ ಚಾಲನೆ ನೀಡಿವೆ.
 • ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2070ರ ವೇಳೆಗೆ ಭಾರತವನ್ನು ಇಂಗಾಲಮುಕ್ತ ದೇಶವನ್ನಾಗಿ ಪರಿವರ್ತಿಸುವುದಾಗಿ ಪ್ರಕಟಿಸಿದ್ದಾರೆ. ಹವಾಮಾನ ಮಾಲಿನ್ಯದ ನಿಯಂತ್ರಣಕ್ಕೆ ಅವರು ಐದು ಭರವಸೆಗಳನ್ನು ನೀಡಿದ್ದಾರೆ.
 • ಇಂಡೋನೇಷ್ಯಾ ವಿಜ್ಞಾನಿಗಳು, ಡೆಂಗ್ಯೂ ಸೋಂಕು ಹರಡುವ ಸೊಳ್ಳೆಯನ್ನು ಮಟ್ಟ ಹಾಕಲು ಮತ್ತೊಂದು ಜನ ಸ್ನೇಹಿ ಸೊಳ್ಳೆ ತಳಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ‘ವೊಲ್ಬಾಚಿಯಾ’ ಇದು ಕೀಟಗಳಲ್ಲಿ ಕಾಣಿಸುವ ಸಾಮಾನ್ಯವಾದ ಬ್ಯಾಕ್ಟಿರಿಯಾ. ಕೆಲವು ಜಾತಿಯ ಸೊಳ್ಳೆ, ನೊಣ, ಚಿಟ್ಟೆ ಮತ್ತು ಪತಂಗದಂತಹ ಕೀಟಗಳಲ್ಲಿ ಇದು ಸಾಮಾನ್ಯವಾಗಿ ಕಾಣಿಸುತ್ತದೆ. ಆದರೆ ಡೆಂಗ್ಯೂ ವೈರಾಣು ಪಸರಿಸುವ ‘ಅಡಿಸ್ ಇಜಿಪ್ತಿ’ ಸೊಳ್ಳೆಯಲ್ಲಿ ಮಾತ್ರ ವೊಲ್ಬಾಚಿಯಾ ಬ್ಯಾಕ್ಟಿರಿಯಾ ಕಾಣಿಸುವುದಿಲ್ಲ
 • ಗೋವಾದಲ್ಲಿ ನಡೆಯಲಿರುವ 52 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ಭಾರತೀಯ ಪನೋರಮಾ ವಿಭಾಗದಲ್ಲಿ 25 ಫೀಚರ್ ಮತ್ತು 20 ನಾನ್ಫೀಚರ್ ಚಿತ್ರಗಳು ಆಯ್ಕೆಯಾಗಿವೆ. ಸಾಗರ ಪುರಾಣಿಕ ನಿರ್ದೇಶನದ ’ಡೊಳ್ಳು’, ಪ್ರವೀಣ ಕೃಪಾಕರ ಅವರ ’ತಲೆದಂಡ’, ಮನಸೊರೆ ನಿರ್ದೇಶನದ ’ಆಕ್ಟ್ 1978’ ಮತ್ತು ಗಣೇಶ ಹೆಗಡೆ ನಿರ್ದೇಶನದ ’ನೀಲಿ ಹಕ್ಕಿ’ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
 • ದಕ್ಷಿಣ ಆಫ್ರಿಕಾದ ಲೇಖಕ ಡೇಮನ್ ಗಾಲ್ಗಟ್ ಅವರ ಕಾದಂಬರಿ ‘ದಿ ಪ್ರಾಮಿಸ್’ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿನ ವರ್ಣಭೇದ ನೀತಿ ಮತ್ತು ಬಿಳಿಯ ವರ್ಣದ ಕುಟುಂಬದ ಕಥೆಯನ್ನು ಕಾದಂಬರಿ ಒಳಗೊಂಡಿದೆ.
 • ಮಹಾತ್ಮ ಗಾಂಧಿ ಸ್ಮರಣಾರ್ಥ ಅವರ ಜೀವನ ಮತ್ತು ಪರಂಪರೆ ಕೊಂಡಾಡುವ 5 ಪೌಂಡ್ನ ಹೊಸ ನಾಣ್ಯವನ್ನು ದೀಪಾವಳಿ ಹಬ್ಬದ ಅಂಗವಾಗಿ ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರು ಅನಾವರಣಗೊಳಿಸಿದರು.
 • ನೇಪಾಳದಲ್ಲಿ ಐದು ದಿನಗಳ ಸುದೀರ್ಘ ತಿಹಾರ್ ಹಬ್ಬದ ಭಾಗವಾಗಿ ‘ಕುಕುರ್ ತಿಹಾರ್’ ಅನ್ನು ಆಚರಿಸಲಾಗಿದೆ. ಈ ಹಬ್ಬವನ್ನು ತಿಹಾರ್ ಹಬ್ಬದ ಎರಡನೇ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ನಾಯಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಸಾಕು ಮತ್ತು ಬೀದಿ ನಾಯಿಗಳಿಗೆ ಆಹಾರ ನೀಡಿ ಗೌರವಿಸಲಾಗುತ್ತದೆ. ನೇಪಾಳದಲ್ಲಿ ನಾಯಿಗಳನ್ನು ಯಮನ ರಕ್ಷಕ ಮತ್ತು ದೂತ ಎಂದು ಪರಿಗಣಿಸಲಾಗುತ್ತದೆ.