Published on: November 14, 2022

ಸುದ್ಧಿ ಸಮಾಚಾರ – 14 ನವೆಂಬರ್ 2022

ಸುದ್ಧಿ ಸಮಾಚಾರ – 14 ನವೆಂಬರ್ 2022

  • ಕುರಿಗಾಹಿಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟು ಆರ್ಥಿಕವಾಗಿ ಬಲವರ್ಧನೆ ಮಾಡುವ buy modafinil uk next day ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಜಾರಿಗೊಳಿಸಲಾಗಿದೆ familiarly . ಅರ್ಹತೆ: ಕುರಿ ಮತ್ತುಉಣ್ಣೆಉತ್ಪಾದಕರ ಸಹಕಾರ ಸಂಘಗಳ 20,000 ಸದಸ್ಯರು ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ‘ ತೆಲಂಗಾಣ ಮಾದರಿ’ ಯೋಜನೆ ಕುರಿಗಾಹಿಗಳಿಗೆ 20 ಕುರಿ ಮತ್ತುಒಂದು ಮೇಕೆ ನೀಡುವ ಯೋಜನೆಯಾಗಿದೆ.
  • ಮೈಸೂರಿನಲ್ಲಿ ಮೂರು ದಿನಗಳ ಕಾಲ ನಡೆದ 5ನೆಯ ಕಿಸಾನ ಸ್ವರಾಜ ಸಮೇಳನದಲ್ಲಿ ರೈತರ ಹಿತ ಕಾಪಾಡುವಂತೆ ಒತ್ತಾಯಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಆಯೋಜಕರು: ಆಶಾ (ಅಲಯನ್ಸ್ ಫಾರ್ ಸಸ್ಟೈನಬಲ್ ಆ್ಯಂಡ್ ಹೊಲಿಸ್ಟಿಕ್ ಅಗ್ರಿಕಲ್ಚರ್) ಕಿಸಾನ್ ಸ್ವರಾಜ್ ಸಂಸ್ಥೆ

ನಿರ್ಣಯಗಳು : ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಬೆಳೆ ಹಾನಿಗೆ ಯೋಗ್ಯ  ಪರಿಹಾರ, ಬೆಳೆಗಳಿಗೆ  ವಿಮೆ, ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಮತ್ತು ರೈತ ಗುಂಪುಗಳ ಮೇಲೆ ಬಂಡವಾಳ ಹೂಡಿಕೆ ಇತ್ಯಾದಿ

  • ಪಂಜಾಬ್ ಸರ್ಕಾರ ಗನ್ ಸಂಸ್ಕೃತಿ ಮತ್ತು ಹಿಂಸೆಯನ್ನು ಉತ್ತೇಜಿಸುವ ಬಂದೂಕುಗಳು ಮತ್ತು ಹಾಡುಗಳ ಸಾರ್ವಜನಿಕ ಪ್ರದರ್ಶನಕ್ಕೆ ನಿಷೇಧ ಹೇರಿದೆ. ಅಧಿಕೃತ ಆದೇಶದ ಪ್ರಕಾರ, ರಾಜ್ಯ ಸರ್ಕಾರವು ಮುಂದಿನ ಮೂರು ತಿಂಗಳಲ್ಲಿ ಶಸ್ತ್ರಾಸ್ತ್ರ ಪರವಾನಗಿಗಳ ಮರುಪರಿಶೀಲನೆಗೆ ಆದೇಶಿಸಿದೆ. ಯಾವುದೇ ಸಮುದಾಯದ ವಿರುದ್ಧ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.  ಸಾರ್ವಜನಿಕ ಕಾರ್ಯಕ್ರಮಗಳು, ಧಾರ್ಮಿಕ ಸ್ಥಳಗಳು, ಮದುವೆ ಸಮಾರಂಭಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಆಯುಧಗಳನ್ನು ಒಯ್ಯುವುದು ಮತ್ತು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
  • ತಮಿಳುನಾಡು ಸರ್ಕಾರ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ. 10 ರಷ್ಟು ಮೀಸಲಾತಿಯನ್ನು ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿದೆ. ಏಕೆಂದರೆ ಇದು ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಮತ್ತು ಈ ಮೀಸಲಾತಿಯು ಸುಪ್ರೀಂ ಕೋರ್ಟ್‌ನ ಹಿಂದಿನ ವಿವಿಧ ತೀರ್ಪುಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.
  • ಅಮೆರಿಕದ ಹಣಕಾಸು ಇಲಾಖೆ ಭಾರತ ಸಹಿತ ಐದು ಪ್ರಮುಖ ವಾಣಿಜ್ಯ ಪಾಲುದಾರ ರಾಷ್ಟ್ರಗಳನ್ನು ಕರೆನ್ಸಿ ಕಣ್ಗಾವಲು ಪಟ್ಟಿಯಿಂದತೆಗೆದು ಹಾಕಿದೆ. ಇಟಲಿ, ಮೆಕ್ಸಿಕೋ, ಥಾಯ್ಲೆಂಡ್ ಮತ್ತುವಿಯೆಟ್ನಾಂ ಈ ಪಟ್ಟಿಯಿಂದ ಹೊರಬಂದ ಇತರ ನಾಲ್ಕು ದೇಶಗಳು.
  • ಭಾರತ ಮೂಲದ ಅಮೆರಿಕನ್ನರಾದ, ಡೆಮಾಕ್ರಟಿಕ್‌ ಪಕ್ಷದ ಕೆ.ಪಿ.ಜಾರ್ಜ್ ಅವರು ಫೋರ್ಟ್‌ ಬೆಂಡ್ ಕೌಂಟಿ ನ್ಯಾಯಮೂರ್ತಿಯಾಗಿ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದಾರೆ. ಜಾರ್ಜ್ ಅವರು ಮೂಲತಃ ಕೇರಳದ ಪತ್ತನಂತಿಟ್ಟಾ ಬಳಿಯ ಕೊಕ್ಕತೋಡು ಗ್ರಾಮದವರು. ಪದವಿ ಶಿಕ್ಷಣದ ಬಳಿಕ ಉದ್ಯೋಗ ಅರಸಿ ಮುಂಬೈಗೆ ತೆರಳಿದರು. ಹಣಕಾಸು ಸಂಸ್ಥೆಯ ಉದ್ಯೋಗಿಯಾಗಿ 1993ರಲ್ಲಿ ನ್ಯೂಯಾರ್ಕ್‌ಗೆ ತೆರಳಿದರು. ಅಂದಿನಿಂದ ಕುಟುಂಬದೊಂದಿಗೆ ಅಲ್ಲಿಯೇ ನೆಲೆಸಿದ್ದಾರೆ. ಅಮೆರಿಕದ ಈ ಪ್ರಮುಖ ಸ್ಥಾನಕ್ಕೆ ಏರಿದ ಭಾರತ ಮೂಲದ ಅಮೆರಿಕ ಸಮುದಾಯದ ಮೊದಲಿಗರು ಆಗಿದ್ದಾರೆ
  • ಅಂತರಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೆ ಪುನಾರಾಯ್ಕೆಯಾಗಿದ್ದಾರೆ. ಆಕ್ಲೆಂಡ್ ಮೂಲದ ವಕೀಲರಾಗಿರುವ ಬಾರ್ಕ್ಲೆ, ನ್ಯೂಜಿಲೆಂಡ್ ಕ್ರಿಕೆಟ್‌ ಮತ್ತು 2015ರ ವಿಶ್ವಕಪ್ ಟೂರ್ನಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
  • ಕರ್ನಾಟಕದ ಪ್ರಿಯಾ ಮೋಹನ್(400 ಮೀ. ಓಟದಲ್ಲಿ) ಮತ್ತು ಪಾವನಾ ನಾಗರಾಜ್ (ಹೈಜಂಪ್ ಸ್ಪರ್ಧೆಯಲ್ಲಿ) ಅವರು ಅಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.
  • ಮೆಲ್ಬೋರ್ನ್ ನಲ್ಲಿ ನಡೆದ T20 ಕ್ರಿಕೆಟ್ 2022 ಫೈನಲ್‌ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ಐದು ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿ ಎರಡನೇ ಐಸಿಸಿ ಪುರುಷರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹಿಂದಿನ ದಿನ ನಿಧನರಾದ ಡೇವಿಡ್ ಇಂಗ್ಲಿಷ್‌ ಅವರಿಗೆ  ಗೌರವ ಸಲ್ಲಿಸಲು ಇಂಗ್ಲೆಂಡ್ ತಂಡ ತೋಳುಗಳ ಮೇಲೆ ಕಪ್ಪು ಪಟ್ಟಿಯನ್ನು ಧರಿಸಿತ್ತು.