Published on: December 22, 2022

‘ಕರಕುಶಲ ಗ್ರಾಮ’

‘ಕರಕುಶಲ ಗ್ರಾಮ’

ಸುದ್ದಿಯಲ್ಲಿ ಏಕಿದೆ? ದಿಲ್ಲಿ ಹಾತ್‌ ಮಾದರಿಯಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿಯೂ ಕರಕುಶಲ ಗ್ರಾಮವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಮುಖ್ಯಾಂಶಗಳು

  • ಚನ್ನಪಟ್ಟಣದ ಆಟಿಕೆ ಕುಶಲಕರ್ಮಿಗಳ ಅಹವಾಲುಗಳು ಮತ್ತು 3,000ಕ್ಕೂ ಅಧಿಕ ಕುಶಲಕರ್ಮಿಗಳು, ಅವರ ಕುಟುಂಬಗಳು ಮತ್ತು ಆಟಿಕೆ ತಯಾರಿಕೆ ಉದ್ಯಮಗಳ ಮೇಲೆ ಅವಲಂಬಿತರಾಗಿರುವ ಸಾವಿರಾರು ಜನರ ಹಿತಕ್ಕಾಗಿ ಕರಕುಶಲ ಗ್ರಾಮ ನಿರ್ಮಾಣಕ್ಕೆ ಧ್ವನಿ ಎತ್ತಲಾಗಿದೆ.
  • ಇನ್ನು 2-3 ತಿಂಗಳಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ, ಪ್ರಯಾಣಿಕರು ಬಿಡದಿ, ಚನ್ನಪಟ್ಟಣ, ರಾಮನಗರ, ಮದ್ದೂರು, ಮೊದಲಾದ ಸ್ಥಳಗಳನ್ನು ಬೈಪಾಸ್‌ ಮೂಲಕ ಹಾದು ಹೋಗಲಿದ್ದಾರೆ. ಇದರಿಂದಾಗಿ ಗೊಂಬೆಗಳ ನಾಡುʼ ಎಂದು ಹೆಸರಾಗಿರುವ ಚನ್ನಪಟ್ಟಣದ ಕರಕುಶಲ ವಸ್ತುಗಳಿಗೆ, ಬಿಡದಿ ತಟ್ಟೆ ಇಡ್ಲಿ, ಮದ್ದೂರು ವಡೆ ಮೊದಲಾದ ಸ್ಥಳೀಯ ಪ್ರಸಿದ್ಧ ತಿನಿಸುಗಳಿಗೆ ಗ್ರಾಹಕರ ಕೊರತೆ ಎದುರಾಗಲಿದೆ. ಇವುಗಳಿಂದ ಬದುಕು ಕಟ್ಟಿಕೊಂಡಿರುವ ಸಾವಿರಾರು ಜನರಿಗೆ ತೊಂದರೆಯಾಗಲಿದೆ.

ಉದ್ದೇಶ

“ಮುಂದಿನ ದಿನಗಳಲ್ಲಿ ಸ್ಥಳೀಯ ಆಟಿಕೆಗಳ ವೈವಿಧ್ಯತೆಗಳು ನಶಿಸುವ ಅಪಾಯವಿದೆ. ಸ್ಥಳೀಯ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದ್ದು, ಜನಜೀವನಕ್ಕೆ ತೊಂದರೆಯಾಗಲಿದೆ. ಗ್ರಾಹಕರ ಸಂಖ್ಯೆ ಇಳಿಕೆಯಿಂದಾಗಿ ಕುಶಲಕರ್ಮಿಗಳಿಗೆ ತೊಂದರೆಯಾಗಲಿದೆ. ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಕಲೆ ಹಾಗೂ ಪರಂಪರೆಗೂ ಧಕ್ಕೆಯಾಗಲಿದೆ. ‘ಕರಕುಶಲ ಗ್ರಾಮ’ಗಳು ಸ್ಥಳೀಯ ಕುಶಲಕರ್ಮಿಗಳು ಹಾಗೂ ಆಹಾರ ಮಳಿಗೆದಾರರಿಗೆ ಉತ್ತಮ ಮಾರುಕಟ್ಟೆ ನೀಡಲಿದೆ,”

ಚನ್ನಪಟ್ಟಣದ ಆಟಿಕೆ

ಸುಮಾರು ಇನ್ನೂರು ವರ್ಷಗಳ ಇತಿಹಾಸವಿರುವ ಈ ಗೊಂಬೆಗಳನ್ನು ಚನ್ನಪಟ್ಟಣದಲ್ಲಿ ತಯಾರಿಸುತ್ತಾರೆ. ಈ ಕಾರಣದಿಂದಲೇ ಈ ಪಟ್ಟಣವನ್ನು ಗೊಂಬೆಗಳ ನಾಡು ಎಂದು ಕರೆಯುತ್ತಾರೆ. ಬೆಂಗಳೂರಿನಿಂದ  ಸುಮಾರು ೭೦ ಕಿಲೋಮೀಟರ್ ದೂರದಲ್ಲಿ

ಹೇಗೆ ತಯಾರಿಸುತ್ತಾರೆ :

ಆಲೆ ಮರ ಹಾಗು ದೂಪದ ಮರಗಳನ್ನು ಬೊಂಬೆ ತಯಾರಿಸಲು ಬಳಸುತ್ತಾರೆ. ಚೆನ್ನಾಗಿ ಒಣಗಿದ ಮರಗಳನ್ನು ಆಯ್ಕೆ ಮಾಡಿಕೊಂಡು ಲೇತ್ (ತಿರುಗಣಿ ಯಂತ್ರ) ನ ಸಹಾಯದಿಂದ ಮರವನ್ನು ಬೇಕಾದ ಆಕೃತಿಗೆ ತಂದು ನುಣ್ಣಗೆ ಪಾಲಿಷ್ ಮಾಡಿ ನಂತರ ಲ್ಯಾಕರ್‌ ಅನ್ನು ಬಳಸಿ ಬಣ್ಣಗಳನ್ನು ತಯಾರಿಸಿಕೊಳ್ಳುತ್ತಾರೆ. ಕೊನೆಗೆ ಬೊಂಬೆಯ ಕಣ್ಣು, ಕಿವಿ ಮೊದಲಾದ ಸೂಕ್ಷ್ಮಗಳನ್ನು ಕುಂಚದ ಸಹಾಯದಿಂದ ಚಿತ್ರಿಸುತ್ತಾರೆ. ರೋಸ್‌ವುಡ್ ಮತ್ತು ಗಂಧದ ಮರಗಳನ್ನೂ ಸಹ ಬಳಸಿ ಬೊಂಬೆಗಳನ್ನು ತಯಾರಿಸಿದ್ದಾರೆ. ಬೊಂಬೆಗಳಿಗೆ ನೈಸರ್ಗಿಕ ಬಣ್ಣಗಳನ್ನು ಬಳಸಿ ಬೊಂಬೆಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಾರೆ.

ಹಿನ್ನೆಲೆ

  • ಟಿಪ್ಪುವಿನ ಕಾಲದಲ್ಲಿ ಈ ಕಲೆಯಿಂದ ಬದುಕು ಮಾಡಿಕೊಳ್ಳಲು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದು ಸ್ವಾತಂತ್ರದ ನಂತರದಲ್ಲೂ ಈ ತರಬೇತಿ ಕೇಂದ್ರಗಳು ಕಾರ್ಯಗತವಾಗಿ ಇದ್ದವು.
  • ಟಿಪ್ಪು ಸುಲ್ತಾನನು ತನ್ನ ಕಾಲದಲ್ಲಿ ಪರ್ಷಿಯಾ ದೇಶದಿಂದ ಬವಾಸ್ ಮಿಯಾ ಎಂಬ ಕಲಾವಿದನನ್ನು ಕರೆಸಿ ಇಲ್ಲಿನ ಸ್ಥಳೀಯರಿಗೆ ತರಬೇತಿ ನೀಡಿಸಿದನೆಂದು ಚರಿತ್ರೆ ಹೇಳುತ್ತದೆ. ಬವಾಸ್ ಮಿಯಾ ತನ್ನ ಜೀವಮಾನದ ಕಾಲವನ್ನು ಈ ಗೊಂಬೆಗಳನ್ನು ಕಲಿಸುವ ಕಾಯಕದಲ್ಲಿಯೇ ಕಳೆದನು. ಇದಕ್ಕಾಗಿ ಮಿಯಾರವರು ಚೈನಾ ದೇಶಕ್ಕೆ ಹೋಗಿ ಈ ಬೊಂಬೆಗಳನ್ನು ತಯಾರಿಸುವ ವಿದ್ಯೆಯನ್ನು ಕಲಿತಿದ್ದರು.
  • ಮೈಸೂರು ದಿವಾನರು, ೧೯೦೨ರಲ್ಲಿ ಚನ್ನಪಟ್ಟಣದಲ್ಲಿ ಕುಶಲಕರ್ಮಿ ತರಬೇತಿ ಸಂಸ್ಥೆ ಆರಂಭಿಸಿದರು.
  • ೧೯೮೫ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗು  ಡಚ್ ಸರ್ಕಾರಗಳು ಜಂಟಿಯಾಗಿ ಚನ್ನಪಟ್ಟಣದ ಶೇರ್ವ ಹೋಟೆಲ್ ಬಳಿ “ಕಲಾನಗರ ಎಂಬ ಬಡಾವಣೆ ಯನ್ನು ನಿರ್ಮಿಸಿಕೊಟ್ಟಿವೆ.