Published on: January 29, 2022

ಗ್ರೀನ್ ಪೀಸ್ ವರದಿ

ಗ್ರೀನ್ ಪೀಸ್ ವರದಿ

ಸುದ್ಧಿಯಲ್ಲಿ ಏಕಿದೆ ? ದಕ್ಷಿಣಭಾರತದ 10 ವಾಯುಮಾಲಿನ್ಯ ಪೀಡಿತ ನಗರಗಳ ಪಟ್ಟಿಯಲ್ಲಿ ರಾಜ್ಯದ ಮೂರು ನಗರಗಳು ಸ್ಥಾನಪಡೆದಿವೆ. ಪರಿಸರ ಕಾಳಜಿ ಕುರಿತು ಜಾಗೃತಿ ಮೂಡಿಸುವ ಸಂಸ್ಥೆ ಗ್ರೀನ್ ಪೀಸ್ ಇಂಡಿಯಾ ಈ ಮಾಹಿತಿಯನ್ನು ಹೊರಗೆಡವಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಅಧ್ಯಯನ ವರದಿಯನ್ನು ಗ್ರೀನ್ ಪೀಸ್ ಸಂಸ್ಥೆ ಉಲ್ಲೇಖಿಸಿದೆ.

ಮುಖ್ಯಾಂಶಗಳು

  • ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿರುವಂತೆ ಉಸಿರಾಟ ಯೋಗ್ಯ ಗಾಳಿಯಲ್ಲಿ ಇರಬೇಕಾದ ಕಲುಷಿತ ಕಣಗಳ ಮಟ್ಟಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಿನ ಮಾಲಿನ್ಯ ಮೈಸೂರು ನಗರದಲ್ಲಿ ಕಂಡುಬಂದಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ೬- ೭ ಪಟ್ಟು ಹೆಚ್ಚು ಕಲುಷಿತ ಕಣಗಳ ಮಟ್ಟ ಕಂಡುಬಂದಿದೆ.